Tuesday, December 2, 2025
ಬಾರ್ಕೂರು - ಮೂಡುಕೇರಿ ಗಂಗಮ್ಮ ರಾಮಚಂದ್ರ ಶಾಸ್ತ್ರಿ ಸ್ಮರಣಾರ್ಥ ನಡೆದ ಚಿತ್ರಕಲಾಸ್ಪರ್ಧೆ, ಸ್ಥಳ: ನೂತನ ರವೀಂದ್ರ ಮಂಟಪ, ಎಂ.ಜಿ.ಎಂ ಕಾಲೇಜು, ದಿನಾಂಕ: 29.11.2025


ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ,
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್
ಹಾಗೂ ಎಂ.ಜಿ.ಎಂ
ಕಾಲೇಜು, ಉಡುಪಿ ಇವರ ಆಶ್ರಯದಲ್ಲಿ ಬಾರ್ಕೂರು
ಮೂಡುಕೇರಿ ಗಂಗಮ್ಮ ರಾಮಚಂದ್ರ ಶಾಸ್ತ್ರಿ ಸ್ಮರಣಾರ್ಥ ಚಿತ್ರಕಲಾ ಸ್ಪರ್ಧೆಯನ್ನು ೨೯ ನವಂಬರ್ ೨೦೨೫
ಶನಿವಾರದಂದು ಎಂ.ಜಿ.ಎಂ
ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ
ಏರ್ಪಡಿಸಲಾಯಿತು.
ಸ್ಪರ್ಧೆಯಲ್ಲಿ ಪೂರ್ವಪ್ರಾಥಮಿಕ, ಪ್ರಾಥಮಿಕ, ಪ್ರೌಢ, ಪ.ಪೂ, ಪದವಿ
ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಶ್ರೀ
ಸಂತೋಷ್ ಪೈ, ಚಿತ್ರಕಲಾ ಶಿಕ್ಷಕ
ಶ್ರೀ ರಮೇಶ್ ಅಂಬಾಡಿ, ಡಾ. ಜನಾರ್ದನ ಹಾವಂಜೆ
ತೀರ್ಪುಗಾರರಾಗಿದ್ದರು. ಕಾರ್ಯಕ್ರಮ ಸಂಘಟಕರಾಗಿ ಸ್ಪರ್ಧೆಯನ್ನು ಆಯೋಜಿಸುವಲ್ಲಿ ಸಹಕರಿಸಿದ ಡಾ. ಜನಾರ್ದನ ಹಾವಂಜೆ
ಮಾತನಾಡಿ ವಿದ್ಯಾರ್ಥಿಗಳು ಬಹುಮಾನಕ್ಕಾಗಿ ಭಾಗವಹಿಸುವುದನ್ನು ಬಿಟ್ಟು ಸ್ಪರ್ಧಾ
ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಮಕ್ಕಳಲ್ಲಿ
ಕಲೆಯ ಬಗೆಗಿನ ಆಸಕ್ತಿ ವೃದ್ಧಿಸಲು ಪೋಷಕರು ಹೆಚ್ಚಿನ ಪ್ರೋತ್ಸಾಹವನ್ನು
ನೀಡುವುದಕ್ಕೆ ತುಂಬಾ ಹೆಮ್ಮೆ ಎನಿಸಿದೆ. ಇನ್ನಷ್ಟು ಹೊಸ ಹೊಸ ರೀತಿಯಲ್ಲಿ
ಚಿತ್ರಕಲೆಯಲ್ಲಿ ಮಕ್ಕಳು ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಹಿರಿಯ ಸಮಾಜ ಸೇವಕ ವಿಶ್ವನಾಥ
ಶೆಣೈ, ತೀರ್ಪುಗಾರರಾದ ರಮೇಶ್ ಅಂಬಾಡಿ, ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಬ್ರಹ್ಮಾವರ ಎಸ್.ಎಂ.ಎಸ್. ಕಾಲೇಜಿನ
ವಿಶ್ರಾಂತ ಪ್ರಾಂಶುಪಾಲರಾದ ಡಾ. ವೈ ರವೀಂದ್ರನಾಥ
ರಾವ್ ಹಾಗೂ ಕೇಂದ್ರದ ಆಡಳಿತಾಧಿಕಾರಿ
ಡಾ.ಬಿ. ಜಗದೀಶ್ ಶೆಟ್ಟಿ
ಅವರು ನಗದು ಮತ್ತು ಪ್ರಮಾಣಪತ್ರಗಳನ್ನು
ವಿತರಿಸಿದರು. ಕಾರ್ಯಕ್ರಮ ಸಂಘಟಕರಾದ ಡಾ.ಜನಾರ್ದನ ಹಾವಂಜೆ
ಕಾರ್ಯಕ್ರಮ ನಿರ್ವಹಿಸಿದರು. ಆರ್.ಜಿ.ಪೈ
ಹಾಗೂ ಆರ್.ಆರ್.ಸಿಯ
ಸಿಬ್ಬಂದಿಗಳು ಕಾರ್ಯಕ್ರಮ ಆಯೋಜಿಸಿದ್ದರು. ಸೀತಾರಾಮ ಶಾಸ್ತ್ರಿ ಬಾರ್ಕೂರು ಇವರು ಸ್ಪರ್ಧೆಯಲ್ಲಿ ಭಾಗವಹಿಸಿದ
ಎಲ್ಲಾ ವಿದ್ಯಾರ್ಥಿಗಳಿಗೆ ಪೆನ್ನು
ಹಾಗೂ ತಿಂಡಿಯನ್ನು ನೀಡಿ ಸಹಕರಿಸಿದರು.
ವಿಜೇತರ ವಿವರ:
೧ ರಿಂದ ೪ನೇ ತರಗತಿ (ಪೂರ್ವ
ಪ್ರಾಥಮಿಕ) ; ವಿಷಯ : ಐಚ್ಛಿಕ
೧. ದೇಶ್ನ ಕುಲಾಲ್,
೪ನೇ ತರಗತಿ, ಎಸ್.ಆರ್. ಪಬ್ಲಿಕ್
ಸ್ಕೂಲ್, , ಹೆಬ್ರಿ (ಪ್ರಥಮ)
೨. ಆರ್ಯ ಪೈ,
೪ನೇ ತರಗತಿ, ಪೋದಾರ್ ಇಂಟರ್ ನ್ಯಾಶನಲ್ ಸ್ಕೂಲ್, ಪೆರಂಪಳ್ಳಿ, ಉಡುಪಿ (ದ್ವಿತೀಯ)
೩. ಸಮೃದ್ಧಿ ವಿ.
ಶೆಟ್ಟಿ, ೨ನೇ ತರಗತಿ, ಮುಕುಂದಕೃಪಾ
ಆಂಗ್ಲಮಾಧ್ಯಮ ಶಾಲೆ, ಉಡುಪಿ (ತೃತೀಯ)
೫ ರಿಂದ ೭ನೇ
ತರಗತಿ; (ಪ್ರಾಥಮಿಕ) ವಿಷಯ : ಐಚ್ಛಿಕ
೧. ನಿಹಾರ್ ಜೆ. ಎಸ್. ,೬ನೇ
ತರಗತಿ, ಜಿ.ಎಂ.ವಿ.ಪಿ.ಎಸ್.,ಬ್ರಹ್ಮಾವರ (ಪ್ರಥಮ)
೨. ಹರ್ಷಿತಾ ಪ್ರಭು, ೭ನೇ
ತರಗತಿ, ವಿದ್ಯೋದಯ ಪಬ್ಲಿಕ್ ಸ್ಕೂಲ್, ಉಡುಪಿ ,(ದ್ವಿತೀಯ)
೩. ಕನಿಷ್ಕ , ೭ನೇ
ತರಗತಿ, ವಿದ್ಯೋದಯ ಪಬ್ಲಿಕ್ ಸ್ಕೂಲ್, ಉಡುಪಿ (ತೃತೀಯ)
೪. ಪ್ರಭಾತ್ ಉಡುಪ,
೫ನೇ ತರಗತಿ, ಅಮೃತ ಭಾರತಿ ವಿದ್ಯಾಕೇಂದ್ರ,
ಹೆಬ್ರಿ (ಸಮಾಧಾನಕರ)
೮ ರಿಂದ ೧೦ನೇ
ತರಗತಿ : ವಿಷಯ: ಉಡುಪಿ
ಪರ್ಯಾಯ ಅಥವಾ ಹಳ್ಳಿಯ ದೃಶ್ಯ
೧. ಪ್ರೇರಿತ ಯು.,
೮ನೇ ತರಗತಿ, ಟಿ.ಎ.ಪೈ.
ಇಂಗ್ಲಿಷ್ ಮೀಡಿಯಂ ಸ್ಕೂಲ್, ಕುಂಜಿಬೆಟ್ಟು, ಉಡುಪಿ (ಪ್ರಥಮ)
೨. ವಿನೀಶ್ ಆಚಾರ್ಯ,
೮ನೇ ತರಗತಿ, ಎಸ್.ಆರ್. ಪಬ್ಲಿಕ್
ಸ್ಕೂಲ್, ಹೆಬ್ರಿ ( ದ್ವಿತೀಯ)
೩. ಪ್ರಥಮ್ ಪಿ.
ಕಾಮತ್, ೯ನೇ ತರಗತಿ, ಶಾಂತಿನಿಕೇತನ
ಇಂಗ್ಲಿಷ್ ಮೀಡಿಯಂ ಸ್ಕೂಲ್, ಕುಕ್ಕಿಕಟ್ಟೆ, ಉಡುಪಿ (ತೃತೀಯ)
೪. ವಂಶಿತ್ ಆಚಾರ್ಯ,
೯ನೇ ತರಗತಿ, ಕೆ.ಪಿ.ಎಸ್.
ಮುನಿಯಾಲ್, ಉಡುಪಿ (ಸಮಾಧಾನಕರ)
ಪದವಿಪೂರ್ವ ವಿಭಾಗ : ವಿಷಯ: ಮಹಾಭಾರತ ದೃಶ್ಯ ಅಥವಾ ಪರಿಸರ ಮಾಲಿನ್ಯ
೧. ಪ್ರತಿಷ್ಟ ಶೇಟ್,
ದ್ವಿತೀಯ ಪಿಯುಸಿ, ವಿದ್ಯೋದಯ ಪದವಿಪೂರ್ವ ಕಾಲೇಜು, ಉಡುಪಿ (ಪ್ರಥಮ)
೨. ಶರಧಿ, ದ್ವಿತೀಯ
ಪಿಯುಸಿ, ವಿವೇಕ ಪದವಿಪೂರ್ವ ಕಾಲೇಜು, ಕೋಟ (ದ್ವಿತೀಯ)
೩. ದೀಕ್ಷ, ಪ್ರಥಮ
ಪಿ.ಯು.ಸಿ, ವಿವೇಕ ಪದವಿಪೂರ್ವ ಕಾಲೇಜು, ಕೋಟ (ತೃತೀಯ)
೪. ವಿಶ್ವಾಸ್ ಎಸ್.
ನಾಯ್ಕ್, ಪ್ರ. ಪಿ.ಯು.ಸಿ, ಎಂ.ಜಿ.ಎಂ ಪಿ.ಯು
ಕಾಲೇಜು,ಉಡುಪಿ (ಸಮಾಧಾನಕರ)
ಪದವಿ ವಿಭಾಗ: ವಿಷಯ: ರಾಮಾಯಣ ದೃಶ್ಯ ಅಥವಾ ರಾಷ್ಟ್ರಕವಿ ಗೋವಿಂದ
ಪೈ
೧. ರಾಘವೇಂದ್ರ ಮರವಂತೆ,
ಚಿತ್ರಕಲಾ
ಮಂದಿರ, ಕಲಾಶಾಲೆ, ಉಡುಪಿ(ಪ್ರಥಮ)
೨. ರೂಪಕ್, ಚಿತ್ರಕಲಾ
ಮಂದಿರ, ಕಲಾಶಾಲೆ, ಉಡುಪಿ (ದ್ವಿತೀಯ)
೩. ಸುಶ್ಮಿತಾ, , ಪೂರ್ಣಪ್ರಜ್ಞ
ಕಾಲೇಜು, ಉಡುಪಿ (ತೃತೀಯ)
Monday, December 1, 2025
ದಿನಾಂಕ:29.11.2025ರಂದು ನಡೆದ ಡಾ. ಯು.ಪಿ ಉಪಾಧ್ಯಾಯ ಹಾಗೂ ಡಾ. ಸುಶೀಲಾ ಪಿ. ಉಪಾಧ್ಯಾಯ ಪ್ರಶಸ್ತಿ ಕಾರ್ಯಕ್ರಮ


ಸಕಾರಾತ್ಮಕ ಆಲೋಚನೆ ಇಚ್ಛಾಶಕ್ತಿಯ ಮೂಲಕ ಇಂಗ್ಲಿಷಿನ ಶಬ್ದಗಳಿಗೆ ಪರ್ಯಾಯವಾಗಿ ಕನ್ನಡದಲ್ಲೇ ಇರುವ ಪದ ಅಥವಾ ಹೊಸ ಪದಗಳ ಸೃಷ್ಟಿಯಾಗಬೇಕಿದೆ. ಅಂತಹ ಹೊಸ ಚಿಗುರು ಮೂಡಿಸುವ ಕಾರ್ಯ ಶಿಕ್ಷಕರಿಂದ ಆಗಬೇಕಿದೆ. ಏಕೆಂದರೆ ಭಾಷಾ ತಜ್ಞರುಗಳು ಇರುವ ನಾಡಿನಲ್ಲೇ ಕನ್ನಡ ಭಾಷೆಯ ಗತಿ, ನಡೆ, ಹೆಜ್ಜೆ ತಪ್ಪುತ್ತಿದೆ. ಶಿಕ್ಷಣದ ಮೂಲಕ ವಿದ್ಯಾರ್ಥಿಗಳಿಗೆ ಸರಿಯಾದ ಭಾಷಾ ಸಂವಹನ ಕಲಿಸದಿದ್ದರೆ ಭವಿಷ್ಯದಲ್ಲಿ ತೊಡಕಾಗಲಿದೆ ಎಂದು ಕವಿ, ವಿದ್ವಾಂಸ ಕಬ್ಬಿನಾಲೆ ವಸಂತ ಭಾರದ್ವಾಜ್ ಹೇಳಿದರು. ಅವರು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ) ಇವರ ಸಂಯುಕ್ತ ಆಶ್ರಯದಲ್ಲಿ ನವಂಬರ್ ೨೯, ೨೦೨೫ ಶನಿವಾರದಂದು ಎಂ.ಜಿ.ಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಡಾ. ಯು.ಪಿ. ಉಪಾಧ್ಯಾಯ –ಡಾ. ಸುಶೀಲಾ ಪಿ. ಉಪಾಧ್ಯಾಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಕರಾವಳಿಯಲ್ಲಿ ಯಕ್ಷಗಾನ ವಿಷಯದಲ್ಲಿ ೬೦ ಪಿಎಚ್.ಡಿ ಪ್ರಬಂಧಗಳು ಬಂದಿವೆ. ರಾಜ್ಯದಾದ್ಯಂತ ದಾಸ ಸಾಹಿತ್ಯದಲ್ಲಿ ಪಿಎಚ್.ಡಿ ಸಂಶೋಧನೆ ನಡೆದಿದೆ. ಆದರೆ ಮಗಳೂರು ವಿಶ್ವವಿದ್ಯಾನಿಲಯದಲ್ಲಿ ದಾಸ ಸಾಹಿತ್ಯದಲ್ಲಿ ಒಂದೂ ಪಿಎಚ್ ಡಿ ಸಂಶೋಧನೆ ನಡೆದಿಲ್ಲ ಎಂದರು. ಹಳೆಯ ಶಬ್ದಗಳನ್ನು ಕಲಿಯುವುದರ ಜೊತೆಗೆ ಹೊಸ ಶಬ್ದ ಸೃಷ್ಟಿಗೂ ಸಾಧ್ಯತೆಗಳಿವೆ. ಆಧುನಿಕ ಕಾಲದಲ್ಲಿ ಅನೇಕ ಹೊಸ ಶಬ್ದಗಳು ಹುಟ್ಟಿಕೊಳ್ಳುತ್ತವೆ. ವೈದ್ಯಕೀಯ, ಎಂಜಿನಿಯರಿಂಗ್, ಕ್ಷೇತ್ರಗಳಿಗೆ ಸಂಬಂಧಿಸಿದ ಪಾರಿಭಾಷಿಕ ಪದಗಳು ಹುಟ್ಟಿಕೊಳ್ಳುತ್ತವೆ. ಸೃಜನಶೀಲವಾಗಿ ಆಲೋಚನೆ ಮಾಡಿದರೆ ಹೊಸ ಹೊಸ ಪದಗಳನ್ನು ಸೃಷ್ಟಿಸಬಹುದಾಗಿದೆ. ಆದರೆ ಅದನ್ನು ಪ್ರೋತ್ಸಾಹಿಸುವ ವ್ಯವಸ್ಥೆ ನಮ್ಮಲ್ಲಿಲ್ಲ. ಅದಕ್ಕಾಗಿ ಸರ್ಕಾರ ಆಡಳಿತ ಪದಗಳನ್ನು ರಚಿಸಬೇಕು ಎಂದರು. ಸಾಹಿತ್ಯದಲ್ಲಿ ಹೊಳವು ಮತ್ತು ಕಲೆ ಮತ್ತು ಸಂಸ್ಕöÈತಿಯ ಸಂಶೋಧನೆಯು ತಪಸ್ಸಿನ ರೀತಿಯಲ್ಲಿ ನಡೆಯುತ್ತದೆ ಎಂದು ಅವರು ಹೇಳಿದರು.
ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ ವನಿತಾ ಮಯ್ಯ ಅಧ್ಯಕ್ಷತೆ ವಹಿಸಿದ್ದರು, ತುಳು ನಿಘಂಟು ತಜ್ಞ ಪದ್ಮನಾಭ ಕೆ ಕುಣ್ಣಾಯ ಪ್ರಶಸ್ತಿ ಪುರಸ್ಕöÈತರ ಕುರಿತು ಅಭಿನಂದನಾ ಭಾಷಣ ಮಾಡಿದರು. ಹಿರಿಯ ವಿದ್ವಾಂಸರು ಹಾಗೂ ಜರ್ಮನ್ ಭಾಷಾ ತಜ್ಞರಾದ ಡಾ. ಎನ್.ಟಿ ಭಟ್ ಪ್ರಶಸ್ತಿ ಪ್ರದಾನ ಮಾಡಿದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ ಶಂಕರನಾರಾಯಣ ಪ್ರಾರ್ಥಿಸಿದರು. ಆರ್.ಆರ್.ಸಿ ಸಹ ಸಂಶೋಧಕರಾದ ಡಾ. ಅರುಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
Friday, November 21, 2025
Wednesday, November 19, 2025
Wednesday, November 12, 2025
ಚಿತ್ರಕಲಾ ಸ್ಪರ್ಧೆ ದಿನಾಂಕ: 29.11.2025; ಸಮಯ: ಬೆಳಿಗ್ಗೆ 9.00 ಗಂಟೆಗೆ; ರವೀಂದ್ರ ಮಂಟಪ, .ಎಂ.ಜಿ.ಎಂ. ಕಾಲೇಜು ಆವರಣ,ಕುಂಜಿಬೆಟ್ಟು, ಉಡುಪಿ
gÁµÀÖçPÀ« UÉÆÃ«AzÀ ¥ÉÊ
¸ÀA±ÉÆÃzsÀ£À PÉÃAzÀæ, ªÀiÁºÉ, ªÀÄtÂ¥Á® CPÁqÉ«Ä D¥sï ºÉÊAiÀÄgï JdÄåPÉñÀ£ï,
JA.f.JA PÁ¯ÉÃdÄ EzÀgÀ
D±ÀæAiÀÄzÀ°è ¨ÁgÀPÀÆgÀÄ ªÀÄÆqÀÄPÉÃj UÀAUÀªÀÄä gÁªÀÄZÀAzÀæ±Á¹Ûç ¸ÀägÀuÁxÀð GqÀĦ
f¯Áè ¥ÁæxÀ«ÄPÀ, ¥ËæqsÀ±Á¯Á ¥ÀzÀ«¥ÀǪÀð ªÀÄvÀÄÛ ¥ÀzÀ« «zÁåyðUÀ½UÉ avÀæPÀ¯Á
¸ÀàzsÉðAiÀÄ£ÀÄß £ÀªÀA§gï 29, 2025, ±À¤ªÁgÀzÀAzÀÄ ¨É½UÉÎ UÀAmÉ 9.00 jAzÀ JA.f.JA PÁ¯ÉÃf£À
DªÀgÀtzÀ°ègÀĪÀ gÀ«ÃAzÀæ ªÀÄAl¥ÀzÀ°è £ÀqɸÀ¯ÁUÀĪÀÅzÀÄ JAzÀÄ
¥ÀwæPÁ ¥ÀæPÀluÉAiÀİè w½¸À¯ÁVzÉ. D¸ÀPÀÛgÀÄ ±Á¯Á
UÀÄgÀÄvÀÄaÃnAiÉÆA¢UÉ CAzÀÄ ¨É½UÉÎ 9.00 UÀAmÉUÉ ¸ÀàzsÉðAiÀÄ°è ¨sÁUÀªÀ»¸ÀĪÀÅzÀÄ.
¥ÀæªÉñÀ ±ÀĮ̫®è. ºÉaÑ£À ªÀiÁ»wUÁV PɼÀPÀAqÀ zÀÆgÀªÁt ¸ÀASÉåUÉ PÀgɪÀiÁr.
|
¸ÀàzsÁð «µÀAiÀÄ : o 1 jAzÀ 4 £ÉÃ
vÀgÀUÀw : LaÒPÀ o 5 jAzÀ 7£ÉÃ
vÀgÀUÀw : LaÒPÀ o 8 jAzÀ 10£Éà vÀgÀUÀw : GqÀĦ
¥ÀAiÀiÁðAiÀÄ/ºÀ½îAiÀÄ zÀȱÀå o I & II ¦AiÀÄĹ :
¥Àj¸ÀgÀ ªÀiÁ°£Àå/ªÀĺÁ¨sÁgÀvÀ zÀȱÀå o ¥ÀzÀ« «zÁåyðUÀ½UÉ : gÁªÀiÁAiÀÄt zÀȱÀå/gÁµÀÖçPÀ« UÉÆÃ«AzÀ ¥ÉÊ |
Ø ¸ÀàzsÁð ¸ÀªÀÄAiÀÄ -
¨É½UÉÎ 9.00 – 11.00
Ø avÀæ ©r¸À®Ä
ºÁ¼ÉAiÀÄ£ÀÄß ¸ÀAWÀlPÀgÉ MzÀV¸ÀÄvÁÛgÉ.
Ø G½zÀ ¥ÀjPÀgÀUÀ¼À£ÀÄß
¸ÀàzsÁð¼ÀÄUÀ¼Éà vÀgÀ¨ÉÃPÀÄ.(¥É¤ì¯ï, gÀ§âgï,PÀ®gï, §æµï EvÁå¢)
Ø ¥Àæwà «¨sÁUÀUÀ¼À®Æè
¥ÀæxÀªÀÄ, ¢éwÃAiÀÄ, vÀÈwÃAiÀÄ §ºÀĪÀiÁ£À ¤ÃqÀ¯ÁUÀĪÀÅzÀÄ
Ø §ºÀĪÀiÁ£À £ÀUÀzÀÄ
ªÀÄvÀÄÛ ¥ÀæªÀiÁt ¥ÀvÀæUÀ¼À£ÀÄß M¼ÀUÉÆArgÀÄvÀÛzÉ
Ø
¸ÀàzsÉðAiÀÄ ¥sÀ°vÁA±ÀªÀ£ÀÄß ¸ÀܼÀzÀ¯Éè
w½¸À¯ÁUÀĪÀÅzÀÄ ªÀÄvÀÄÛ CAzÉà §ºÀĪÀiÁ£À ¤ÃqÀ¯ÁUÀĪÀÅzÀÄ
Ø
J¯Áè «¨sÁUÀzÀ®Æè PÀ¤µÀ× 5 d£À «zÁåyðUÀ¼ÀÄ EzÀÝgÉ
ªÀiÁvÀæ ¸ÀàzsÉð £ÀqɸÀ¯ÁUÀĪÀÅzÀÄ.
ºÉaÑ£À ªÀiÁ»wUÁV ¸ÀA¥ÀQð¸À¨ÉÃPÁzÀ zÀÆgÀªÁt ¸ÀASÉå : 9449471449/ 9448868868
Monday, November 10, 2025
ದಿನಾಂಕ: 08.11.2025ರಂದು ನಡೆದ ಕನಕ ಜಯಂತಿ ಕಾರ್ಯಕ್ರಮ - ಕನಕ ಕೀರ್ತನೆ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮ


ಹೆಚ್ಚುತ್ತಿದೆ ಜಾತಿಗಳ ನಡುವಿನ ಪೈಪೋಟಿ – ಡಾ. ಮಹಾಬಲೇಶ್ವರ ರಾವ್
ಕೆಳಜಾತಿಯಲ್ಲಿ ಹುಟ್ಟಿ ಸಾಮಾಜಿಕ ಅಪಮಾನ ಅನುಭವಿಸಿದರೂ ಸಮಸಮಾಜದ ಸ್ಥಾಪನೆ ನಿಟ್ಟಿನಲ್ಲಿ ಕುಲಕ್ಕಿಂತ ಭಕ್ತಿ, ಮಾನವೀಯತೆಯೇ ಶ್ರೇಷ್ಠವೆಂದು ಪ್ರತಿಪಾದಿಸಿದ ಕನಕದಾಸರ ಚಿಂತನೆ ಇಂದಿಗೂ ಪ್ರಸ್ತುತ ಎಂದು ಶಿಕ್ಷಣ ತಜ್ಞ ಡಾ. ಮಹಾಬಲೇಶ್ವರ ರಾವ್ ಹೇಳಿದರು. ಅವರು ಕನಕದಾಸ ಅಧ್ಯಯನ ಸಂಶೋಧನ ಪೀಠ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವತಿಯಿಂದ ದಿನಾಂಕ: ೮.೧೧.೨೦೨೫ರಂದು ಎಂ.ಜಿ.ಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ ನಡೆದ ಕನಕ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶ್ರದ್ಧಾ ಕೇಂದ್ರಗಳು ವ್ಯಾಪಾರ ಕೇಂದ್ರಗಳಾಗಿ ಆಧ್ಯಾತ್ಮಿಕತೆ ಸೊರಗಿದೆ. ಸ್ಥಳಪುರಾಣದ ಜತೆಗೆ ಐತಿಹ್ಯದ ಬಗೆಗೂ ವಿದ್ಯಾರ್ಥಿಗಳು ಗಮನಹರಿಸಬೇಕು. ವಿ.ವಿಗಳು ಆರ್ಥಿಕ ಸಹಿತ ಅನ್ಯ ಸಂಕಷ್ಟಗಳಿಂದ ಮುಚ್ಚುವ ಸ್ಥಿತಿಗೆ ಬಂದಿವೆ. ಕನಕ ಚಿಂತನೆಯ ಅರಿವು ವಿದ್ಯಾರ್ಥಿಗಳಲ್ಲಿ ಹಾಗೂ ಸಮಾಜದಲ್ಲಿ ಮೂಡಿಸಿ ಜೀವಂತವಾಗಿಡಬೇಕು ಎಂದರು. ವಿದ್ಯಾರ್ಥಿಗಳು ಕನಕರ ಸಹಿತ ದಾಸರ ಕೀರ್ತನೆ, ಶಿವಶರಣರ ವಚನ ಓದಿ ಅರ್ಥೆÊಸಿ ಮಾನವೀಯ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಅನ್ಯಮತ ಖಂಡನೆ, ಸ್ವಮತ ಮಂಡನೆಯ ಕಾಲಘಟ್ಟದಲ್ಲಿ ಹರಿಹರ ಸಮನ್ವಯ ಸಾರುವ ಕೃತಿಗಳನ್ನು ಸಮಾಜಕ್ಕೆ ನೀಡಿದ್ದಾರೆ ಎಂದರು.
ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಮಂಗಳೂರಿನ ನರಸಿಂಹಮೂರ್ತಿ ಆರ್. ಅವರು ‘ದಾಸ ಪರಂಪರೆಯ ಅನನ್ಯ ಚೇತನ ಕನಕದಾಸರು’ ವಿಷಯದ ಕುರಿತು ಉಪನ್ಯಾಸ ನೀಡಿ, ಶಿವಶರಣರ ವಚನ ಮತ್ತು ದಾಸರ ಕೀರ್ತನೆಗಳು ಜಾತಿ, ಲಿಂಗ ತಾರತಮ್ಯ ಇಲ್ಲದೇ ಭಕ್ತಿ ಪ್ರಚಾರದ ಜತೆಗೆ ನಡೆ ನುಡಿ ಒಂದಾದ ಚಿಂತನೆಯಾಗಿದೆ. ೫೧೬ ವರ್ಷದ ಹಿಂದೆ ಬಾಳ್ವೆ ನಡೆಸಿದ್ದ ಕನಕದಾಸರ ಸಂದೇಶ ಇಂದಿಗೂ ಪ್ರಸ್ತುತ. ೧೨ನೇ ಶತಮಾನದ ವಚನ ಸಾಹಿತ್ಯ ಹಾಗೂ ೧೫ನೇ ಶತಮಾನದ ಹರಿದಾಸ ಸಾಹಿತ್ಯ ಇವೆರಡೂ ಜ್ಞಾನ ಪರಂಪರೆಯ ಔನ್ಯತ್ಯ ಹೆಚ್ಚಿಸಿದೆ. ಎರಡೂ ಪರಂಪರೆಯಲ್ಲಿ ನಡೆ - ನುಡಿ ಒಂದೇ ಆಗಿತ್ತು ಎಂದರು. ಎಂ.ಜಿ.ಎಂ ಕಾಲೇಜಿನ ಗಾಂಧಿಯನ್ ಸೆಂಟರ್ನ ಮುಖ್ಯಸ್ಥರಾದ ವಿನೀತ್ ರಾವ್ ಮಾತನಾಡಿ, ಎಂಜಿಎಂ ಕಾಲೇಜಿನ ಲಾಂಛನದಲ್ಲಿ ಕನಕದಾಸರಿಗೂ ಉಡುಪಿಗೂ ಇರುವ ಭಕ್ತಿಯ ನಂಟಿನ ಸಂಕೇತದ ರೂಪವನ್ನು ಚಿತ್ರಿಸಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ಕನಕ ಜಯಂತಿ ಹಿನ್ನೆಲೆಯಲ್ಲಿ ದಿನಾಂಕ: ೭.೧೧.೨೦೨೫ರಂದು ಉಡುಪಿ ವಲಯದ ಪದವಿಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಕನಕ ಗಾಯನ ಸ್ಪರ್ಧೆ ಏರ್ಪಡಿಸಿದ್ದು ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ.ಪೂ ವಿಭಾಗದಲ್ಲಿ ಪೂರ್ಣಪ್ರಜ್ಞ ಕಾಲೇಜಿನ ಪ್ರಥಮ ಪಿ.ಯು.ಸಿ, ಮೇದಿನಿ ಭಟ್ (ಪ್ರಥಮ), ಉಡುಪಿ ಎಂ.ಜಿ.ಎಂ ಕಾಲೇಜಿನ, ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ, ಅದಿತಿ ಆರ್. ಐತಾಳ್ (ದ್ವಿತೀಯ), ವಿದ್ಯೋದಯ ಪ.ಪೂ ಕಾಲೇಜಿನ ದ್ವಿ.ತೀಯ ಪಿ.ಯು.ಸಿಯ ಎಚ್. ಅಚಿಂತ್ಯಾ ರಾವ್ (ತೃತೀಯ) ಹಾಗೂ ಪದವಿ ವಿಭಾಗದಲ್ಲಿ ಕುಂದಾಪುರ ಡಾ. ಬಿ.ಬಿ ಹೆಗ್ಡೆ ಕಾಲೇಜಿನ ತೃತೀಯ ಬಿ.ಕಾಂ, ಶ್ರೇಯಾ ನಾಗರಾಜ್ (ಪ್ರಥಮ) ಬ್ರಹ್ಮಾವರ ಎಸ್.ಎಂ.ಎಸ್. ಕಾಲೇಜಿನ ಪ್ರಥಮ ಬಿ.ಕಾಂ, ಚಂದನಾ ಸಿ.ಎಂ, (ದ್ವಿತೀಯ) ಹಾಗೂ ಎಂ.ಜಿ.ಎಂ ಕಾಲೇಜು ತೃತೀಯ ಬಿ.ಎಸ್ಸಿ ವಿಭಾಗದ ಸಾತ್ವಿಕ್ ತೃತೀಯ ಸ್ಥಾನ ಪಡೆದರು. ಕನಕ ಅಧ್ಯಯನ ಸಂಶೋಧನ ಪೀಠದ ಆಡಳಿತಾಧಿಕಾರಿ ಡಾಬಿ. ಜಗದೀಶ್ ಶೆಟ್ಟಿ ಪ್ರಸ್ತಾವನೆಗೈದು ಸ್ವಾಗತಿಸಿದರು. ಆರ್.ಆರ್.ಸಿಯ ಸಹ ಸಂಶೋಧಕ ಡಾ. ಅರುಣ್ ಕುಮಾರ್ ಎಸ್.ಆರ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಆರಂಭದಲ್ಲಿ ಸ್ಪರ್ಧಾವಿಜೇತ ವಿದ್ಯಾರ್ಥಿಗಳಿಂದ ಕನಕ ಗಾಯನ ನಡೆಯಿತು.
























































