Monday, December 1, 2025

ದಿನಾಂಕ:29.11.2025ರಂದು ನಡೆದ ಡಾ. ಯು.ಪಿ ಉಪಾಧ್ಯಾಯ ಹಾಗೂ ಡಾ. ಸುಶೀಲಾ ಪಿ. ಉಪಾಧ್ಯಾಯ ಪ್ರಶಸ್ತಿ ಕಾರ್ಯಕ್ರಮ

 




                                                                            

ಸಕಾರಾತ್ಮಕ ಆಲೋಚನೆ ಇಚ್ಛಾಶಕ್ತಿಯ ಮೂಲಕ ಇಂಗ್ಲಿಷಿನ ಶಬ್ದಗಳಿಗೆ ಪರ್ಯಾಯವಾಗಿ ಕನ್ನಡದಲ್ಲೇ ಇರುವ ಪದ ಅಥವಾ ಹೊಸ ಪದಗಳ ಸೃಷ್ಟಿಯಾಗಬೇಕಿದೆ. ಅಂತಹ ಹೊಸ ಚಿಗುರು ಮೂಡಿಸುವ ಕಾರ್ಯ ಶಿಕ್ಷಕರಿಂದ ಆಗಬೇಕಿದೆ. ಏಕೆಂದರೆ ಭಾಷಾ ತಜ್ಞರುಗಳು ಇರುವ ನಾಡಿನಲ್ಲೇ ಕನ್ನಡ ಭಾಷೆಯ ಗತಿ, ನಡೆ, ಹೆಜ್ಜೆ ತಪ್ಪುತ್ತಿದೆ. ಶಿಕ್ಷಣದ  ಮೂಲಕ ವಿದ್ಯಾರ್ಥಿಗಳಿಗೆ  ಸರಿಯಾದ ಭಾಷಾ ಸಂವಹನ  ಕಲಿಸದಿದ್ದರೆ ಭವಿಷ್ಯದಲ್ಲಿ ತೊಡಕಾಗಲಿದೆ ಎಂದು ಕವಿ, ವಿದ್ವಾಂಸ ಕಬ್ಬಿನಾಲೆ ವಸಂತ ಭಾರದ್ವಾಜ್ ಹೇಳಿದರು. ಅವರು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ) ಇವರ ಸಂಯುಕ್ತ ಆಶ್ರಯದಲ್ಲಿ ನವಂಬರ್ ೨೯, ೨೦೨೫ ಶನಿವಾರದಂದು ಎಂ.ಜಿ.ಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಡಾ. ಯು.ಪಿ. ಉಪಾಧ್ಯಾಯ –ಡಾ. ಸುಶೀಲಾ ಪಿ. ಉಪಾಧ್ಯಾಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ  ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಕರಾವಳಿಯಲ್ಲಿ ಯಕ್ಷಗಾನ ವಿಷಯದಲ್ಲಿ ೬೦ ಪಿಎಚ್.ಡಿ ಪ್ರಬಂಧಗಳು ಬಂದಿವೆ. ರಾಜ್ಯದಾದ್ಯಂತ ದಾಸ ಸಾಹಿತ್ಯದಲ್ಲಿ  ಪಿಎಚ್.ಡಿ ಸಂಶೋಧನೆ ನಡೆದಿದೆ. ಆದರೆ ಮಗಳೂರು ವಿಶ್ವವಿದ್ಯಾನಿಲಯದಲ್ಲಿ ದಾಸ ಸಾಹಿತ್ಯದಲ್ಲಿ ಒಂದೂ ಪಿಎಚ್ ಡಿ ಸಂಶೋಧನೆ ನಡೆದಿಲ್ಲ ಎಂದರು.  ಹಳೆಯ ಶಬ್ದಗಳನ್ನು ಕಲಿಯುವುದರ ಜೊತೆಗೆ ಹೊಸ ಶಬ್ದ ಸೃಷ್ಟಿಗೂ ಸಾಧ್ಯತೆಗಳಿವೆ. ಆಧುನಿಕ ಕಾಲದಲ್ಲಿ ಅನೇಕ ಹೊಸ ಶಬ್ದಗಳು ಹುಟ್ಟಿಕೊಳ್ಳುತ್ತವೆ. ವೈದ್ಯಕೀಯ, ಎಂಜಿನಿಯರಿಂಗ್, ಕ್ಷೇತ್ರಗಳಿಗೆ ಸಂಬಂಧಿಸಿದ ಪಾರಿಭಾಷಿಕ ಪದಗಳು ಹುಟ್ಟಿಕೊಳ್ಳುತ್ತವೆ. ಸೃಜನಶೀಲವಾಗಿ ಆಲೋಚನೆ ಮಾಡಿದರೆ ಹೊಸ ಹೊಸ ಪದಗಳನ್ನು ಸೃಷ್ಟಿಸಬಹುದಾಗಿದೆ. ಆದರೆ ಅದನ್ನು ಪ್ರೋತ್ಸಾಹಿಸುವ ವ್ಯವಸ್ಥೆ ನಮ್ಮಲ್ಲಿಲ್ಲ. ಅದಕ್ಕಾಗಿ ಸರ್ಕಾರ ಆಡಳಿತ ಪದಗಳನ್ನು ರಚಿಸಬೇಕು ಎಂದರು. ಸಾಹಿತ್ಯದಲ್ಲಿ ಹೊಳವು ಮತ್ತು ಕಲೆ ಮತ್ತು ಸಂಸ್ಕöÈತಿಯ ಸಂಶೋಧನೆಯು ತಪಸ್ಸಿನ ರೀತಿಯಲ್ಲಿ ನಡೆಯುತ್ತದೆ ಎಂದು ಅವರು ಹೇಳಿದರು.                    

ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ ವನಿತಾ ಮಯ್ಯ ಅಧ್ಯಕ್ಷತೆ ವಹಿಸಿದ್ದರು, ತುಳು ನಿಘಂಟು ತಜ್ಞ ಪದ್ಮನಾಭ ಕೆ ಕುಣ್ಣಾಯ ಪ್ರಶಸ್ತಿ ಪುರಸ್ಕöÈತರ ಕುರಿತು ಅಭಿನಂದನಾ ಭಾಷಣ ಮಾಡಿದರು.  ಹಿರಿಯ ವಿದ್ವಾಂಸರು  ಹಾಗೂ ಜರ್ಮನ್ ಭಾಷಾ ತಜ್ಞರಾದ ಡಾ. ಎನ್.ಟಿ ಭಟ್ ಪ್ರಶಸ್ತಿ ಪ್ರದಾನ ಮಾಡಿದರು.  ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ  ಡಾ.ಬಿ. ಜಗದೀಶ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ ಶಂಕರನಾರಾಯಣ ಪ್ರಾರ್ಥಿಸಿದರು. ಆರ್.ಆರ್.ಸಿ ಸಹ ಸಂಶೋಧಕರಾದ ಡಾ. ಅರುಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.       

No comments: