Friday, July 10, 2026

ನಾಡೋಜ ಡಾ . ಕಯ್ಯಾರ ರೈ ಸಮಗ್ರ ಸಂಪುಟ

 ಮನವಿ

£ÁqÉÆÃd qÁ| PÀAiÀiÁågÀ QAtÚ gÉÊ ¸ÀªÀÄUÀæ ¸ÀA¥ÀÅl

 £ÁqÉÆÃd qÁ| PÀAiÀiÁågÀ QAtÚ gÉÊ CªÀgÀÄ F £Ár£À ºÉ¸ÀgÁAvÀ PÀ«, ¸ÁévÀAvÀæ ¸ÉãÁ¤. gÁµÀÖç¥Àæ±À¹Û ¥ÀÅgÀ¸ÀÌöÈvÀ ²PÀëPÀ. ±ÀvÁAiÀÄĶ, PÀ£ÁðlPÀ KQÃPÀgÀtzÀ ºÉÆÃgÁlUÁgÀ. PÀAiÀiÁågÀgÀÄ PÀxÉ, ²±ÀÄVÃvÉ, PÀªÀ£À, £ÁlPÀ, ¥ÀoÀå¥ÀŸÀÛPÀ, ªÁåPÀgÀt, DvÀäPÀxÀ£À, fêÀ£À ZÀjvÉæ, ¸ÀA¸ÀÌöÈvÀ ¨sÁµÁAvÀgÀ gÀÆ¥ÀzÀ°è 37PÀÆÌ ºÉZÀÄÑ ¥ÀŸÀÛPÀUÀ¼À£ÀÄß §gÉzÀÄ ¥ÀæPÀn¹zÁÝgÉ. C®èzÉ ºÀ®ªÀÅ  ©r ¯ÉÃR£ÀUÀ¼À£ÀÄß §gÉ¢zÁÝgÉ. CzÉ®èªÀ£ÀÆß PÉÆæÃrüÃPÀj¹ PÀAiÀiÁågÀgÀ ¸ÀªÀÄUÀæ ¸ÀA¥ÀÅlªÀ£ÀÄß gÀa¸ÀĪÀ AiÉÆÃd£É¬ÄzÉ

DzÀÄzÀjAzÀ, CªÀgÀÄ §gÉzÀ ©r ¯ÉÃR£À, ¨sÁªÀavÀæ, ¨sÁUÀªÀ»¹zÀ ¸À¨sÉ ¸ÀªÀiÁgÀA¨sÀUÀ¼À DªÀÄAvÀæt ¥ÀwæPÉ, ¥ÀwæPÁ vÀÄtÄPÀÄUÀ¼ÀÄ CªÀgÀ PÀÄjvÀ ¯ÉÃR£ÀUÀ¼ÀÄ, PÀ«vÉUÀ¼ÀÄ, ¸ÀA±ÉÆÃzsÀ£Á ¥Àæ§AzsÀUÀ¼ÀÄ ªÀÄvÀÄÛ CªÀgÀ AiÀiÁªÀÅzÉà ¸Á»wåPÀ, KQÃPÀgÀtzÀ ºÉÆÃgÁl, ¸ÁªÀiÁfPÀ PÁAiÀÄðPÀæªÀÄUÀ¼À ªÀÄÄ¢ævÀ CxÀªÁ ºÀ¸ÀÛ°TvÀ §gÀºÀUÀ½zÀݰè vÁªÀÅ zÀAiÀÄ«lÄÖ PɼÀV£À «¼Á¸ÀPÉÌ PÀ¼ÀÄ»¹PÉÆqÀ¨ÉÃPÁV «£ÀAw.

Dr. B. Jagadeesh ShettyAdministrative Officer
RGPai/RRC/KANAKA/YK (MAHE)
MGM College Campus
Post Kunjibettu 576 102
Udupi
Mob:  9448868868
rgpaiudupi@gmail.com

ಸೇಡಿಯಾಪು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ದಿನಾಂಕ: 14.07.2026 ಮೈಸೂರಿನಲ್ಲಿ

 


Thursday, July 9, 2026

ಯಕ್ಷನಡಿಗೆ ಶಾಲೆಯೆಡೆಗೆ -ಪಿ.ಎಂ. ಶ್ರೀ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಪೆರ್ವಾಜೆ, ಕಾರ್ಕಳ ಪ್ರಸಂಗ : ಕಂಸ ವಧೆ ದಿನಾಂಕ: ೦೭.೦೭.೨೦೨೬

 

ಯಕ್ಷನಡಿಗೆ ಶಾಲೆಯೆಡೆಗೆ ಶೀರ್ಷಿಕೆಯಡಿ ಯಕ್ಷಗಾನ ಕೇಂದ್ರ, ಯಕ್ಷರಂಗ, ಶಿವಪ್ರಭಾ, ಶ್ರೀ ವಾದಿರಾಜ ವನಂ, ಹಯಗ್ರೀವ ನಗರ, ಇಂದ್ರಾಳಿ ಉಡುಪಿ ಹಾಗೂ ಪಿ.ಎಂ. ಶ್ರೀ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಪೆರ್ವಾಜೆ, ಕಾರ್ಕಳ ಇವರ ಸಹಯೋಗದಲ್ಲಿ ಯಕ್ಷಗಾನ ಕೇಂದ್ರ ಯಕ್ಷರಂಗದ ಕಲಾವಿದರಿಂದ ಯಕ್ಷಗಾನ ಕಂಸವಧೆ  ಯಕ್ಷಗಾನ ನಡೆಯಿತು. 

ಯಕ್ಷನಡಿಗೆ ಶಾಲೆಯೆಡೆಗೆಕಮಲಾಬಾಯಿ ಪ್ರೌಢಶಾಲೆ, ಕಡಿಯಾಳಿಯಕ್ಷಗಾನ ಪ್ರಸಂಗ: ಮೈಂದ ದ್ವಿವಿಧ ಕಾಳಗದಿನಾಂಕ: ೯.೭.೨೦೨೬,

 

ಯಕ್ಷನಡಿಗೆ ಶಾಲೆಯೆಡೆಗೆ ಶೀರ್ಷಿಕೆಯಡಿ ಯಕ್ಷಗಾನಕೇಂದ್ರದ ಯಕ್ಷಗಾನಕೇಂದ್ರ / ಯಕ್ಷರಂಗ, ಶಿವಪ್ರಭಾ, ಶ್ರೀವಾದಿರಾಜ ವನಂ, ಹಯಗ್ರೀವ ನಗರ, ಇಂದ್ರಾಳಿ, ಉಡುಪಿ ಇವರ ಸಹಯೋಗದಲ್ಲಿ ಕಮಲಾಬಾಯಿ ಪ್ರೌಢಶಾಲೆ, ಕಡಿಯಾಳಿ, ಉಡುಪಿ ಜಿಲ್ಲೆ, ದಿನಾಂಕ ೦೯ ಜುಲೈ ೨೦೨೬ (ಗುರುವಾರ) ರಂದು ‘ಮೈಂದದ್ವಿವಿಧ ಕಾಳಗ’  ಯಕ್ಷಗಾನ ಪ್ರಸಂಗವನ್ನು ಅದ್ಭುತವಾಗಿ ಪ್ರದರ್ಶಿಸಲಾಯಿತು.

ಯಕ್ಷನಡಿಗೆ ಶಾಲೆಯೆಡೆಗೆ ಸರ್ಕಾರಿಪದವಿಪೂರ್ವಕಾಲೇಜು ಪ್ರೌಢಶಾಲಾವಿಭಾಗ, ಕುಕ್ಕುಜೆ, ಕಾರ್ಕಳತಾಲೂಕು,ಶಶಿಪ್ರಭಾ ಪರಿಣಯ ೦೮ ಜುಲೈ ೨೦೨೬ (ಬುಧವಾರ)

 

ಯಕ್ಷನಡಿಗೆ ಶಾಲೆಯೆಡೆಗೆ ಶೀರ್ಷಿಕೆಯಡಿ ಯಕ್ಷಗಾನಕೇಂದ್ರದ ಯಕ್ಷಗಾನಕೇಂದ್ರ/ಯಕ್ಷರಂಗ, ಶಿವಪ್ರಭಾ, ಶ್ರೀವಾದಿರಾಜ ವನಂ, ಹಯಗ್ರೀವ ನಗರ, ಇಂದ್ರಾಳಿ, ಉಡುಪಿ ಇವರ ಸಹಯೋಗದಲ್ಲಿ ಸರ್ಕಾರಿ ಪದವಿಪೂರ್ವಕಾಲೇಜು, ಪ್ರೌಢಶಾಲಾವಿಭಾಗ, ಕುಕ್ಕುಜೆ, ಕಾರ್ಕಳತಾಲೂಕು, ಉಡುಪಿಜಿಲ್ಲೆ, ದಿನಾಂಕ ೦೮ ಜುಲೈ ೨೦೨೬ (ಬುಧವಾರ) ರಂದುಪ್ರದರ್ಶಿಸಲಾದ ಪ್ರಸಿದ್ಧ ಯಕ್ಷಗಾನ ಪ್ರಸಂಗ "ಶಶಿಪ್ರಭಾ ಪರಿಣಯ"ವನ್ನು ಅದ್ಭುತವಾಗಿ ಪ್ರದರ್ಶಿಸಲಾಯಿತು.

ಈ ಪ್ರದರ್ಶನವು ಕರ್ನಾಟಕದ ಶಾಸ್ತ್ರೀಯ ಸಾಂಸ್ಕೃತಿಕ ಪರಂಪರೆಯ ಸಾರಸತ್ವವನ್ನು ಸಾರ್ಥಕವಾಗಿ ಪ್ರತಿಬಿಂಬಿಸಿತು. ಪಾಂಡಿತ್ಯ, ಸೌಂದರ್ಯಾನುಭೂತಿ, ನಾಟಕೀಯ ವೈಭವ, ಲಯಬದ್ಧ ನಿಖರತೆ ಹಾಗೂ ಕಲಾತ್ಮಕ ಉತ್ಕರ್ಷಗಳ ಅಪೂರ್ವಸಂಗಮವನ್ನು ಈ ಪ್ರದರ್ಶನದಲ್ಲಿ ಕಾಣಬಹುದಾಯಿತು. ಪ್ರತಿಯೊಂದು ದೃಶ್ಯವೂ ಅಪಾರ ಶಿಷ್ಟತೆ, ಸಹಜತೆ ಹಾಗೂ ನೈಜತೆಯಿಂದ ಅನಾವರಣಗೊಂಡಿತು. ವಿಶೇಷವಾಗಿ ಭಾಗವತಿಕೆ, ಅಭಿನಯ, ನೃತ್ಯ, ಸಂಭಾಷಣೆ, ಹಿಮ್ಮೇಳ ಹಾಗೂ ರಂಗಭೂಮಿ ವಿನ್ಯಾಸಗಳಲ್ಲಿತಂಡವು ತೋರಿದ ಪರಿಪೂರ್ಣ ಪಾಂಡಿತ್ಯವು ನಮ್ಮ ನಾಗರಿಕ ಪರಂಪರೆಯ ಅವಿಸ್ಮರಣೀಯ ಸಂಭ್ರಮವನ್ನಾಗಿ ರೂಪಿಸಿತು.

ಈ ಪ್ರದರ್ಶನವು ಕೇವಲ ಒಂದು ನಾಟಕೀಯ ಪ್ರದರ್ಶನವಾಗಿರದೆ, ಅತ್ಯಂತ ಪರಿಣಾಮಕಾರಿ ಶೈಕ್ಷಣಿಕ ಅನುಭವವಾಗಿತ್ತು. ಇದು ನಮ್ಮ ವಿದ್ಯಾರ್ಥಿಗಳಲ್ಲಿ ಆಳವಾದ ಬೌದ್ಧಿಕ, ನೈತಿಕ ಹಾಗೂ ಸಾಂಸ್ಕೃತಿಕ ಅರಿವನ್ನು ಮೂಡಿಸಿತು. ಯಕ್ಷಗಾನದ ಶಾಶ್ವತಮೌಲ್ಯಗಳ ಬಗ್ಗೆ ಗೌರವ ಭಾವವನ್ನು ಬೆಳೆಸುವುದರೊಂದಿಗೆ, ಅವರ ಸೌಂದರ್ಯಪ್ರಜ್ಞೆಯನ್ನು ಸಮೃದ್ಧಗೊಳಿಸಿ, ಸಾಂಸ್ಕೃತಿಕ ಜಾಗೃತಿಯನ್ನು ಬಲಪಡಿಸಿ, ಸಮಕಾಲೀನ ಸಮಾಜದಲ್ಲಿಯೂ ನಮ್ಮ ದೇಶೀಯ ಕಲಾ ಪರಂಪರೆಗಳ ನಿರಂತರ ಪ್ರಸ್ತುತತೆಯನ್ನು ಪುನರುಚ್ಚರಿಸಿತು.ತಂಡದ ಅತ್ಯಂತ ಶಿಸ್ತಿನ ಸಂಘಟನೆ, ಅಚಲ ಬದ್ಧತೆ, ಪಾಂಡಿತ್ಯಪೂರ್ಣ ವ್ಯಾಖ್ಯಾನ, ಕಲಾತ್ಮಕ ಪರಿಪೂರ್ಣತೆ ಹಾಗೂ ಈ ವೈಭವಶಾಲಿ ಜಾನಪದ ರಂಗಪರಂಪರೆಯ ಪಾವಿತ್ರ‍್ಯ ಮತ್ತು ಭವ್ಯತೆಯನ್ನು ಉಳಿಸಿ ಬೆಳೆಸುವ ನಿಸ್ವಾರ್ಥ ಸಮರ್ಪಣೆ ಆಳವಾಗಿ ಪ್ರಭಾವಿತಗೊಳಿಸಿದ್ದಲ್ಲದೆ, ಅವರ ಅತ್ಯುನ್ನತ ಕಲಾನೈಪುಣ್ಯ ಹಾಗೂ ಆದರ್ಶಪ್ರಾಯ ಸಮರ್ಪಣೆ ಸಾಂಸ್ಕೃತಿಕ ಸಂರಕ್ಷಣೆಯ ಶ್ರೇಷ್ಟ ಮಾದರಿಯಾಗಿ ಸದಾಸ್ಮರಣೀಯವಾಗಿ ಉಳಿಯುವಂತದ್ದಾಗಿದ್ದು ಕಾಲೇಜಿನ ಆಡಳಿತ ಮಂಡಳಿ, ಅಧ್ಯಾಪಕ ವೃಂದ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ವೀಕ್ಷಿಸಿ ಸಂತೋಷಪಟ್ಟುದುದಲ್ಲದೆ ಪ್ರತಿಷ್ಠಿತ ಸಂಸ್ಥೆಯು ತನ್ನ ಅಚಲ ಶ್ರೇಷ್ಟತೆಯ ಮೂಲಕ ಭಾರತದ ಅತ್ಯಂತ ವೈಭವಯುತ ಪ್ರದರ್ಶನ ಕಲೆಗಳಲ್ಲೊಂದಾದ ಯಕ್ಷಗಾನದ ಬೆಳಕನ್ನು ಮುಂದಿನ ಪೀಳಿಗೆಗಳಿಗೂ ನಿರಂತರವಾಗಿ ಹರಡುತ್ತಾ, ಸಾಂಸ್ಕೃತಿಕ ಗಗನವನ್ನು ಇನ್ನಷ್ಟು ಪ್ರಭಾಮಯಗೊಳಿಸಲಿ ಎಂದು ಶುಭ ಹಾರೈಸಿದರು.

ಯಕ್ಷನಡಿಗೆ ಶಾಲೆಯೆಡೆಗೆ ಶೀರ್ಷಿಕೆಯಡಿ ಕಾರ್ಯಕ್ರಮ ಪಿ.ಪಿ.ಸಿಯಲ್ಲಿ ಯಕ್ಷಗಾನ ಪ್ರಾತ್ಯಕ್ಷಿಕೆ (೦೬.೦೭.೨೦೨೬)

 


ಯಕ್ಷನಡಿಗೆ ಶಾಲೆಯೆಡೆಗೆ ಶೀರ್ಷಿಕೆಯಡಿ ಉಡುಪಿ ಪೂರ್ಣಪ್ರಜ್ಞ ಕಾಲೇಜು, ಯಕ್ಷಗಾನ ಕೇಂದ್ರ, ಯಕ್ಷರಂಗ, ಶಿವಪ್ರಭಾ, ಶ್ರೀ ವಾದಿರಾಜ ವನಂ, ಹಯಗ್ರೀವ ನಗರ, ಇಂದ್ರಾಳಿ ಉಡುಪಿ ಸಹಯೋಗದಲ್ಲಿ ಕಾಲೇಜಿನ ವಿದ್ಯಾರ್ಥಿ ವೇದಿಕೆ ಕನ್ನಡ ವಿಭಾಗದ ಸಂಯೋಜನೆಯಲ್ಲಿ ಯಕ್ಷಗಾನ ಕೇಂದ್ರ ಯಕ್ಷರಂಗದ ಕಲಾವಿದರಿಂದ ಯಕ್ಷಗಾನ ಪ್ರಾತ್ಯಕ್ಷಿಕೆ ನಡೆಯಿತು. 

ಯಕ್ಷಗಾನ ಕೇಂದ್ರದ ಭಾಗವತ ಗುರು ಉಮೇಶ್ ಸುವರ್ಣ, ಗೋಪಾಡಿ ಚೆಂಡ-ಮದ್ದಳೆ ಗುರು ಕೃಷ್ಣಮೂರ್ತಿ ಭಟ್ ಬಗ್ವಾಡಿ, ಯಕ್ಷಗುರು ಬಸವ ಮುಂಡಾಡಿ ಕಲಾವಿದರು ಒಗ್ಗೂಡಿ ಯಕ್ಷಗಾನದ ಗಣಪತಿ ಸ್ತುತಿ, ಕೋಡಂಗಿ ಬಾಲಗೋಪಾಲಮತ್ತು ರಾಜವೇಷದ  ಒಡ್ಡೋಲಗ ಪಯಣ, ಕುಣಿತ, ಯುದ್ಧ, ನೃತ್ಯ ಗಂಡುಬಣ್ಣದ ವೇಷದ ಒಡ್ಡೋಲಗ ಮೊದಲಾದ ವಿಭಾಗಗಳ ಪ್ರಾತ್ಯಕ್ಷಿಕೆ ನಡೆಯಿತು

ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟಿ, ಆರ್.ಆರ್.ಸಿ ಸಹ ಸಂಶೋಧಕ ಡಾ. ಅರುಣ್ ಕುಮಾರ್ ಎಸ್.ಆರ್, ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಮು ಎಲ್. , ಐಕ್ಯುಎಸಿ ಸಂಯೋಜಕ ಡಾ.ವಿನಯ ಕುಮಾರ್, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಕರಬ, ಸಹಾಯಕ ಪ್ರಾಧ್ಯಾಪಕ ಡಾ. ಸತೀಶ್ ಉಪಸ್ಥಿತರಿದ್ದರು. ವಿದ್ಯಾರ್ಥಿ ವೇದಿಕೆ ಹಗೂ ಪ್ರಾತ್ಯಕ್ಷಿಕೆ ಸಂಯೋಜಕ ಡಾ. ಶಿವಕುಮಾರ್ ಅಳಗೋಡು ಸ್ವಾಗತಿಸಿ ನಿರೂಪಿಸಿದರು. 


Tuesday, July 7, 2026

ಯಕ್ಷಗಾನ ದಾಖಲೀಕರಣ ಉದ್ಘಾಟನೆ ಹಾಗೂ ವೀರವೃಷಸೇನ ಪುಂಡುವೇಷ ದಾಖಲೀಕರಣ (05.07.2026)

 



ದಾಖಲೀಕರಣ:




ದಿನಾಂಕ: ೦೫.೦೭.೨೦೨೬ (ಆದಿತ್ಯವಾರ)ರಂದು, ಎಂ.ಜಿ.ಎಂ ಕಾಲೇಜು ಆವರಣದಲ್ಲಿರುವ ನೂತನ ರವೀಂದ್ರ ಮಂಟಪದಲ್ಲಿ ಯಕ್ಷಗಾನ ಕೇಂದ್ರ, ಇಂದ್ರಾಳಿ, ಉಡುಪಿ (ಮಾಹೆ),ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಮಾಹೆ ಹಾಗೂ ಕನ್ನಡ ಮತ್ತು ಸಂಸ್ಕöÈತಿ ಇಲಾಖೆ, ಬೆಂಗಳೂರು, ಇವರ  ಜಂಟಿ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕöÈತಿ ಇಲಾಖೆ, ಉಡುಪಿ ಜಿಲ್ಲೆ ಇವರ ಧನಸಹಾಯದೊಂದಿಗೆ ‘ವೀರ ವೃಷಸೇನ’ ಯಕ್ಷಗಾನ ದಾಖಲೀಕರಣ ನಡೆಯಿತು. ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಸಲಹೆಗಾರರು ಹಾಗೂ ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಮಣಿಪಾಲ ಇದರ ಕಾರ್ಯದರ್ಶಿಗಳೂ ಆದ ಡಾ. ನಾರಾಯಣ ಸಭಾಹಿತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ‘ಯಕ್ಷಗಾನ ಕಾಲಕಾಲಕ್ಕೆ ಬದಲಾವಣೆಯನ್ನು ಕಾಣುತ್ತಾ ಬಂದಿದೆ. ಹಿಂದಿನ ಕಲಾವಿದರ ಪರಂಪರೆಯ ವೇಷಗಳು ಇಂದು ಕಣ್ಮರೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಈ ದಾಖಲೀಕರಣ ಹೆಚ್ಚಿನ ಮಹತ್ವವನ್ನು ಪಡೆಯುತ್ತದೆ. ಇದು ಮುಂದಿನ ಕಲಾವಿದರಿಗೆ  ಸಹಾಯಬೇಕೆನ್ನುವ ನಿಟ್ಟಿನಲ್ಲಿ ಹಾಗೂ ಅದನ್ನು ರಂಗದಲ್ಲಿ ಅಳವಡಿಸಿಕೊಂಡು  ಯಕ್ಷಗಾನ ಕಲೆಯ ಮೂಲ ಸತ್ವ ಸ್ವರೂಪವನ್ನು  ಇಂದಿನವರಿಗೂ ತಲುಪಿಸುವ  ಕೆಲಸವನ್ನು ಮಾಡಲಿ’ ಎಂದರು. ಹಿಂದಿನ ಕಲಾವಿದರು ಸನ್ನಿವೇಶವನ್ನು ರಂಗದಮೇಲೆ ಕಟ್ಟುತ್ತಿದ್ದ ರೀತಿ ಅನನ್ಯವಾದುದು. ಹಳೆಯದು ಯಾವಾಗಲೂ ಅಮೂಲಯವಾದದ್ದು, ಅದನ್ನು ಉಳಿಸಿಕೊಂಡು ಬೆಳೆಸಿಕೊಂಡು ಬರಬೇಕಾಗಿರುವುದು ನಮ್ಮೆಲ್ಲರ ಆದ್ಯಕರ್ತವ್ಯ. ಆ ನಿಟ್ಟಿನಲ್ಲಿ ಯಕ್ಷಗಾನ ಕೇಂದ್ರ ಇಂತಹ ಪ್ರಯತ್ನವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು. 

ಕನ್ನಡ ಮತ್ತು ಸಂಸ್ಕöÈತಿ ಇಲಾಖೆ, ಉಡುಪಿ ಇಲ್ಲಿಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ನಮ್ಮ ಸಾಹಿತ್ಯ, ಕಲೆ, ಸಂಸ್ಕöÈತಿ ಅತ್ಯಂತ ಮಹತ್ವವಾದದ್ದು, ಅದರಲ್ಲೂ ಶುದ್ಧಕನ್ನಡ ಬಳಕೆಯ ಯಕ್ಷಗಾನ ಕಲೆಯಿಂದಲೂ ಕನ್ನಡ ಭಾಷೆ ಉಳಿಯಲು ಸಾಧ್ಯ. ಇಂತಹ ದಾಖಲೀಕರಣದ ಮೂಲಕ ಹೊಸತಲೆಮಾರಿಗೆ ಪರಂಪರೆಯ ಯಕ್ಷಗಾನವನ್ನು  ತಲುಪಿಸುವ ಕೆಲಸವನ್ನು ಮಾಡಬೇಕು ಎಂದರು. ಡಾ. ಜಗದೀಶ್ ಶೆಟ್ಟಿ ಸಿದ್ಧಾಪುರ, ಯಕ್ಷಗಾನ ಕೇಂದ್ರದ ಸಲಹಾ ಸಮಿತಿ ಸದಸ್ಯರಾದ ಶ್ರೀ ವಿಶ್ವನಾಥ ಶೆಣೈ, ಶ್ರೀಮತಿ ಮೀನಲಕ್ಷಿಣಿ ಅಡ್ಯಂತಾಯ, ಶ್ರೀ ವಿ.ಜಿ ಶೆಟ್ಟಿ, ಭುವನ ಪ್ರಸಾದ್ ಹೆಗ್ಡೆ ಉಪಸ್ಥಿತರಿದ್ದರು. ಯಕ್ಷಗಾನ ಕೇಂದ್ರದ ಸಲಹಾ ಸಮಿತಿ ಅಧ್ಯಕ್ಷರಾದ ಶ್ರೀ ಪಳ್ಳಿ ಕಿಶನ್ ಹೆಗ್ಡೆ ಅಧ್ಯಕ್ಷತೆಯನ್ನು ವಹಿಸಿದರು. ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಸ್ವಾಗತಿಸಿದರು. ಯಕ್ಷಗಾನ ಕೇಂದ್ರದ ಸಲಹಾಸಮಿತಿ ಸದಸ್ಯ, ಕಾರ್ಯಕ್ರಮದ ಸಂಯೋಜಕ ಪ್ರೊ. ಎಸ್.ವಿ. ಉದಯಕುಮಾರ್ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಮೇಶ್‌ಸುವರ್ಣ ಪ್ರಾರ್ಥಿಸಿದರು. ಎಂ.ಜಿ.ಎಂ. ಕಾಲೇಜಿನ ಕನ್ನಡ ಪ್ರಾಧ್ಯಾಪಕ ಶ್ರೀ ರಾಘವೇಂದ್ರ ತುಂಗ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.  

Tuesday, June 30, 2026

ಉಡುಪಿ ಯಕ್ಷಗಾನ ಕೇಂದ್ರ ಸಲಹಾ ಸಮಿತಿಯಿಂದ ಹುಟ್ಟು ಹಬ್ಬ ಆಚರಣೆ (೨೫.೦೬.೨೦೨೬)

 

ಮಾಹೆ ಸಂಯೋಜಿತ ಉಡುಪಿ ಯಕ್ಷಗಾನ ಕೇಂದ್ರ, ಇಂದ್ರಾಳಿ ಇದರ ಸಲಹಾ ಸಮಿತಿಯಿಂದ ಮಾಹೆಯ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳರ 85ನೇ ಜನ್ಮದಿನೋತ್ಸವವನ್ನು ಜೂನ್ 25ರಂದು ಆಚರಿಸಲಾಯಿತು.

ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ ಶೆಟ್ಟಿ ಸ್ವಾಗತಿಸಿದರು. ಅಧ್ಯಕ್ಷ ಶ್ರೀ ಪಳ್ಳಿ ಕಿಶನ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿ ಶುಭ ಹಾರೈಸಿದರು. ಶ್ರೀ ಭುವನ ಪ್ರಸಾದ್ ಹೆಗ್ಡೆ ಸನ್ಮಾನ ಪತ್ರ ವಾಚಿಸಿ, ಲಿಂಗ ಸಮಾನತೆಯಲ್ಲಿ ವಿಶ್ವದಲ್ಲೇ ಪ್ರಥಮ ಸ್ಥಾನ ಪಡೆದ ಮಾಹೆಯನ್ನು ಅಭಿನಂದಿಸಿದರು.

ಯಕ್ಷಸ್ಮರಣಿಕೆ, ಶಾಲು, ಹಾರ, ಪೇಟ ತೊಡಿಸಿ ಡಾ. ಬಲ್ಲಾಳರನ್ನು ಅಭಿನಂದಿಸಲಾಯಿತು. ಸನ್ಮಾನಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ ಡಾ. ಬಲ್ಲಾಳರು, ಮಾಹೆ ಸದಾ ಯಕ್ಷಗಾನ ಕೇಂದ್ರವನ್ನು ಪ್ರೋತ್ಸಾಹಿಸುತ್ತದೆ ಎಂದರು. ಸದಸ್ಯರಾದ ಮೀನಾ ಲಕ್ಷ್ಮಣಿ ಮತ್ತು ಡಾ. ಶೈಲಜಾ ಭಟ್, ಶ್ರೀ ವಿಶ್ವನಾಥ ಶೆಣೈ, ಪ್ರೊ. ಎಸ್. ವಿ. ಉದಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಮಂಜುನಾಥ ಮಯ್ಯ ವಂದಿಸಿದರು.

Sunday, June 28, 2026

ದಿನಾಂಕ: ೨೮.೦೬.೨೦೨೬ರಂದು ಯಕ್ಷಗಾನ ಕೇಂದ್ರ ಇಂದ್ರಾಳಿಯಲ್ಲಿ ಸುಧನ್ವ ಕಾಳಗ ಯಕ್ಷಗಾನ ನಡೆಯಿತು

 




ದಿನಾಂಕ: ೨೮.೬.೨೦೨೬ರಂದು ಯಕ್ಷಗಾನ ಕೇಂದ್ರ, ಶಿವಪ್ರಭಾ, ಇಂದ್ರಾಳಿ, ಉಡುಪಿ ಕನ್ನಡ ಮತ್ತು ಸಂಸ್ಕöÈತಿ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕöÈತಿ ಇಲಾಖೆ, ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ಯಕ್ಷಗಾನ  ಪ್ರಸಂಗ: ಸುಧನ್ವ ಕಾಳಗ ನಡೆಯಿತು. ಕಾರ್ಯಕ್ರಮದಲ್ಲಿ  ಯಕ್ಷಗಾನ ಕೇಂದ್ರದ ಸಲಹಾ ಸಮಿತಿ ಸದಸ್ಯರು ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ, ಗುರುವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 

ಅರ್‍.ಅರ್‍.ಸಿ ಯ ಧ್ವನ್ಯಾಲೋಕದಲ್ಲಿ ದಿನಾಂಕ: ೨೬.೦೬.೨೦೨೬ರಂದು ನಡೆದ ಜನಪದ ಕಲೆಗಳ ಸರಣಿ ಕಾರ್ಯಾಗಾರ

 







ಭಾವನಾ ಫೌಂಡೇಶನ್ (ರಿ.,), ಭಾಸ ಗ್ಯಾಲರಿ ಮತ್ತು ಸ್ಟುಡಿಯೊ ಹಾವಂಜೆ ಹಾಗೂ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ ಇವರ ಜಂಟಿ ಆಶ್ರಯದಲ್ಲಿ ‘ಜನಪದ ಕಲೆಗಳ ಸರಣಿ ಕಾರ್ಯಾಗಾರ’ ದಿನಾಕ:೨೭.೬.೨೦೨೬ ಶನಿವಾರದಂದು ಎಂ.ಜಿ.ಎಂ ಕಾಲೇಜಿನ ಆವರಣದಲ್ಲಿರುವ ಧ್ವನ್ಯಾಲೋಕ ಸಭಾಂಗಣದಲ್ಲಿ ನಡೆಯಿತು.

ಹಿರಿಯ ವಿದ್ವಾಂಸ ಡಾ. ಪಾದೇಕಲ್ಲು ವಿಷ್ಣು ಭಟ್ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ವಿವಿಧ ಪ್ರಾಂತ್ಯದ ಭಾರತೀಯ ಜನಪದಕಲೆಗಳನ್ನು ಉಡುಪಿಗೆ ಪರಿಚಯಿಸುತ್ತಿರುವುದು ನಿಜಕ್ಕೂ ಸಂತೋಷದಾಯಕ ವಿಚಾರ. ಪಿಥೋರ ಜನಪದ ಕಲೆಯನ್ನು ನಾನೇ ಮೊದಲಬಾರಿಗೆ ಕೇಳುತ್ತಿರುವೆ. ಇಂತಹ ಕಲೆಗಳು ದೇಶವ್ಯಾಪಿಯಾಗಿ ಪ್ರಸಿದ್ಧಿಯಾಗಲಿ ಎಂದರು. ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ  ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕೇಂದ್ರದ ಸಹ ಸಹಸಂಶೋಧಕ ಡಾ. ಅರುಣ್ ಕುಮಾರ್, ಫೌಂಡೇಶನ್ ಅಧ್ಯಕ್ಷರಾದ ಶ್ರೀ ಹಾವಂಜೆ ಮಂಜುನಾಥ ರಾವ್ ಉಪಸ್ಥಿತರಿದ್ದರು. ಕಾರ್ಯಾಗಾರದ ಸಂಯೋಜಕರಾದ ಡಾ. ಜನಾರ್ದನ ಹಾವಂಜೆ ಜನಪದ ಕಲೆಗಳ ಸರಣಯಲ್ಲಿ ೨೦ನೆಯ ಕಾರ್ಯಗಾರ ಇದಾಗಿದ್ದು ಇದರ ಮುಖೇನ ಕರಾವಳಿಯ ಕಲಾಸಕ್ತರು ದೇಶೀಯ ಕಲೆಗಳ ಪರಿಚಯವನ್ನು  ಹೊಂದುವುದರ ಜೊತೆಗೆ  ಅದರ  ನೈಸರ್ಗಿಕ ಕಲೆಗಳ ತಾಂತ್ರಿಕತೆ ವಿನ್ಯಾಸ ರೂಪಗಳನ್ನು ಕಲಿಯುವುದಕ್ಕಾಗಿ ಹಮ್ಮಿಕೊಳ್ಳಲಾಗಿದೆ ಎಂದರು. ಪಿಥೋರ ಚಿತ್ರಕಲೆಯನ್ನು ಗುಜರಾತಿನ ರಥ್ವ ಜನಾಂಗದ ನಾರಾನ್ ಬಾಯಿ ಹರಿಬಾಯಿ ರಥ್ವ  ಕಲಿಸಿಕೊಟ್ಟರು. ಡಾ. ಹಾವಂಜೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. 

Monday, June 22, 2026

ಡಾ.ಟಿ.ಎನ್. ನಾಗರತ್ನ ಅವರಿಗೆ ೨೦೨೬ರ ಸೇಡಿಯಾಪು ಪ್ರಶಸ್ತಿ

 

ಕನ್ನಡ ಭಾಷೆ ಮತ್ತು ಸಂಶೋಧನ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿರುವ ಸೇಡಿಯಾಪು ಕೃಷ್ಣ ಭಟ್ಟರ ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿಗೆ ಹಿರಿಯ ಸಾಹಿತಿ, ಕನ್ನಡ ಭಾಷಾತಜ್ಞೆ, ಅನುವಾದಕಿ, ಸಂಶೋಧಕಿ ಡಾ.ಟಿ.ಎನ್. ನಾಗರತ್ನ ಅವರು ೨೦೨೬ನೇ ಸಾಲಿನ ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆಯಾಗಿರುತ್ತಾರೆ. ಪ್ರಶಸ್ತಿಯು ರೂ ೧೦೦೦೦/- (ಹತ್ತು ಸಾವಿರ) ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ. ಕಾರ್ಯಕ್ರಮವು ದಿನಾಂಕ: ೧೮.೦೭.೨೦೨೬ರಂದು ಎಂ.ಜಿ.ಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ. 

ಶಿವಮೊಗ್ಗ ನಗರ ನಿವಾಸಿಗಳಾದ ಶ್ರೀ ಟಿ.ನಾಗಶರ್ಮ ಮತ್ತು ಶ್ರೀಮತಿ ರಾಜಲಕ್ಷ್ಮೀಯವರ ಪುತ್ರಿ ಡಾ.ಟಿ.ಎನ್. ನಾಗರತ್ನ ಅವರು ಮೇ ೨೯, ೧೯೪೫ರಂದು ಜನಿಸಿದರು. ಶಿವಮೊಗ್ಗದಲ್ಲಿ ಬಿ.ಎ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದ ಅದ್ವಿತೀಯರು. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಡಾಕ್ಟರೇಟ್ (ಪಿಎಚ್.ಡಿ.) ಪದವಿ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ೧೯೭೦ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕಿಯಾಗಿ ಹಾಗೂ ಸಂಶೋಧನ ಸಹಾಯಕರಾಗಿ ವೃತ್ತಿಜೀವನ ಆರಂಭಿಸಿದರು. ಸುಮಾರು ೩೫ ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ, ಹರಿದಾಸ ಸಾಹಿತ್ಯ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿ ೨೦೦೩ರಲ್ಲಿ ನಿವೃತ್ತರಾದರು. ನಂತರ ಇವರು ಕನಕದಾಸ ಅಧ್ಯಯನ ಸಂಶೋಧನಾ ಪೀಠದಲ್ಲಿ ಕನಕದಾಸರ ಕೃತಿಗಳ ಸಂಪಾದನೆ ಮತ್ತು ಅನುವಾದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕರ್ನಾಟಕ ಸರ್ಕಾರದ “ಸಮಗ್ರ ದಾಸಸಾಹಿತ್ಯ ಪ್ರಕಟಣ ಯೋಜನೆ”ಯಲ್ಲಿ ಕಾರ್ಯವಾಹಕ ಸಂಪಾದಕಿಯಾಗಿ, ‘ಪುರಂದರ ಪೀಠ’ದ ಸಲಹಾ ಸಮಿತಿಯ ಸದಸ್ಯರಾಗಿ, ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ಸದಸ್ಯೆ ಹಾಗೂ ಸಮಗ್ರ ಕನಕ ಸಾಹಿತ್ಯ ಅನುವಾದದ ಬೃಹದ್ಯೋಜನೆಯಲ್ಲಿ ಕನ್ನಡ ಭಾಷಾತಜ್ಞರಾಗಿ ನಿಯುಕ್ತರಾಗಿದ್ದರು.  ದಾಸಸಾಹಿತ್ಯಾಧ್ಯಯನ, ಪ್ರಸಾರ, ಬೋಧನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಬರೆದ ಅನೇಕ ಪುಸ್ತಕಗಳೂ, ನೂರಾರು ಲೇಖನಗಳೂ ಪ್ರಕಟವಾಗಿವೆ.  ‘ಹರಿದಾಸರ ಭಕ್ತಿ ಸ್ವರೂಪ’, ‘ಶ್ರೀ ಗೋಪಾಲದಾಸರ ಕೃತಿಗಳು’, ‘ಶ್ರೀ ವಾದಿರಾಜರ ಕೃತಿಗಳು’, ‘ಶ್ರೀ ಜಗನ್ನಾಥದಾಸರ ಕೃತಿಗಳು’, ‘ಶ್ರೀ ವ್ಯಾಸರಾಯರ ಕೃತಿಗಳು’ ‘ಹರಪನಹಳ್ಳಿ ಭೀಮವ್ವನ ಹಾಡುಗಳು,’ ‘ಶ್ರೀ ರಾಮದಾಸರ ಕೃತಿಗಳು’, ‘ಶ್ರೀ ಕನಕದಾಸರ ಕೀರ್ತನೆಗಳು’- ಇವು ಇವರ ಕೃತಿಗಳಲ್ಲಿ ಮುಖ್ಯವಾದವು. ಅನೇಕ ವಿಚಾರಸಂಕಿರಣಗಳು, ದಾಸಸಾಹಿತ್ಯ ಗೋಷ್ಠಿಗಳು, ಆಕಾಶವಾಣಿ ಮತ್ತು ದೂರದರ್ಶನ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಕನ್ನಡ ವಿಶ್ವವಿದ್ಯಾಲಯದ ರಾಷ್ಟ್ರೀಯ ಸಮ್ಮೇಳನದಲ್ಲಿ ‘ಗೌರವ ಸಂಮಾನ’, ‘ಹರಿದಾಸ ಸಾಹಿತ್ಯ ವಿದ್ವನ್ಮಣಿ’ ಬಿರುದು-  ಅಲ್ಲದೆ ‘ವಿಜಯವಿಠಲ’ ಪ್ರಶಸಿ,್ತ ‘ಹೊಯ್ಸಳ’ ಪ್ರಶಸ್ತಿ ‘ಮಧ್ವ-ಪುರಂದರ’ ಪ್ರಶಸ್ತಿ’ ೨೦೧೮ರಲ್ಲಿ ‘ಸಾಹಿತ್ಯ ಸರಸ್ವತಿ’, ೨೦೦೯ರಲ್ಲಿ ಕರ್ನಾಟಕ ಸರಕಾರದ ಪ್ರತಿಷ್ಠಿತ ‘ಕನಕ ಶ್ರೀ’ ಪ್ರಶಸ್ತಿಗೂ ಇವರು ಭಾಜನರಾಗಿದ್ದಾರೆ. ಇವರು ಸಂಪಾದಿಸಿದ ‘ಶ್ರೀ ಕನಕದಾಸರ ಕೀರ್ತನೆಗಳು’ ಕೃತಿಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯು ೨೦೧೪ನೇ ವರ್ಷದ ಅತ್ಯುತ್ತಮ ಸಂಪಾದಿತ ಕೃತಿಯೆಂದು ಪರಿಗಣಿಸಿ ಪುಸ್ತಕ ಬಹುಮಾನ ನೀಡಿ ಗೌರವಿಸಿದೆ. ಅಖಿಲಕರ್ನಾಟಕ ಹದಿನಾರನೆಯ ಹಸ್ತಪ್ರತಿ ಸಮೇಳನದ ಸರ್ವಾಧ್ಯಕ್ಷರಾಗಿಯೂ ಆಯ್ಕೆಯಾಗಿದ್ದಾರೆ. ಶಿವಮೊಗ್ಗ ಕರ್ನಾಟಕ ಸಂಘದಿಂದ ೨೦೨೫ರ ಪ್ರತಿಷ್ಠಿತ ‘ಶಂಬಾ ಜೋಷಿ ಸಂಶೋಧನ’ ಪ್ರಶಸ್ತಿಗೂ ಇವರು ಭಾಜನರಾಗಿದ್ದಾರೆ.

ದಿನಾಂಕ: ೨೦.೦೬.೨೦೨೬ರಂದು ನಡೆದ ಶೀನಪ್ಪ ಹೆಗ್ಡೆ ಮತ್ತು ಎಸ್.ಆರ್. ಹೆಗ್ಗಡೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

 










ಪೊಳಲಿ ಶೀನಪ್ಪ ಹೆಗ್ಡೆಯವರ ಬದುಕು ಮತ್ತು ಬರಹಗಳು ಎಂದೂ ಮಾದರಿಯಾಗಿರುವಂತದ್ದು. ಸ್ವಾತಂತ್ರ ಪೂರ್ವದಿಂದಲೇ ಅವರು ತುಳುನಾಡಿನ ಕುರಿತು ಅನೇಕ ಸಂಶೋಧನೆ ನಡೆಸಿ ಕೃತಿಗಳನ್ನು ನೀಡಿದವರು. ಆ ಸಂದರ್ಭದಲ್ಲಿ ಅವರು ಅನೇಕ ಹೊಳಹುಗಳನ್ನು ನೀಡಿ ಮುಂದಿನ ಅಧ್ಯಯನಕಾರರಿಗೆ  ದಾರಿದೀಪವಾದರು ಎಂದು ಪ್ರೊ. ಬಿ. ಎ ವಿವೇಕ ರೈ ಹೇಳಿದರು. ಅವರು ದಿನಾಂಕ:೨೦.೦೬.೨೦೨೬ರಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್‌ಎಜುಕೇಶನ್, ಚೇಳ್ಯಾರು ಎಸ್.ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ (ರಿ) ವತಿಯಿಂದ ಕೊಡಮಾಡುವ ಪೊಳಲಿ ಶೀನಪ್ಪ ಹೆಗ್ಡೆ ಮತ್ತು ಎಸ್.ಆರ್ ಹೆಗ್ಗಡೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.  ಗದ್ಯರೂಪದಲ್ಲಿ ತುಳುನಾಡಿನ ಜನಪದ ಸಂಪತ್ತನ್ನು ಮುಖ್ಯವಾಗಿ ಪಾಡ್ದನದ ಕಥೆಗಳನ್ನು ಸಂಗ್ರಹಿಸಿ ಜಾನಪದ ಅದ್ಯಯನಕಾರರಿಗೆ ಮಾರ್ಗದರ್ಶಿ ಸೂತ್ರವನ್ನು ಹೆಣೆದರು. ಅವರಿಗೆ ತುಳುನಾಡಿನ ವ್ಯಾಪಕವಾದ ಸಂಸ್ಕೃತಿ, ಆಚಾರ ವಿಚಾರಗಳ ಕುರಿತು ಪರಿಚಯವಿತ್ತು. ಇಂದಿನ ದಿನಗಳಲ್ಲಿ ಓದು, ಸಂಶೋಧನೆಗಳು ದೂರ ಸರಿಯುತ್ತಿವೆ. ವಿಸ್ತಾರವಾದ ಅಧ್ಯಯನ ಮತ್ತು ಕ್ಷೇತ್ರಕಾರ್ಯಗಳಷ್ಟೇ ನಿಜ ಸತ್ಯದರ್ಶನ ಮಾಡಿಸಬಲ್ಲವು. ಆಳ ಅಧ್ಯಯನಗಳನ್ನು ಅಪೇಕ್ಷೆಪಡುವ ಇಂತಹ ಕ್ಷೇತ್ರಗಳು ಇಂದು ಬಡವಾಗುತ್ತಿರುವುದು ಖೇದನೀಯ ಎಂದರು.
 
ಪ್ರಶಸ್ತಿಯನ್ನು ಸ್ವೀಕರಿಸಿದ ಹಿರಿಯ ಲೇಖಕ, ಸಂಶೋಧಕರಾದ ಡಾ. ಬಿ. ಶಿವರಾಮ ಶೆಟ್ಟಿ ಅವರು ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸ ನೀಡಿದರು. ಸಂಶೋಧನೆ ಎಂದರೆ ಹೊಸತನ್ನು ಹೇಳುವುದಲ್ಲ ಇಲ್ಲದ್ದನ್ನೂ ಹೇಳುವುದಲ್ಲ, ಬದಲು ಆಳವಾದ ಅಭ್ಯಾಸದ ಫಲವಾಗಿ ಒಡಮೂಡುವ ವಿಶಿಷ್ಟ ಸತ್ಯ. ಆ ಬಗೆಯ ಸತ್ಯದ ಹೊಳಹುಗಳಿಗೆ ಕಾಲಾತೀತವಾಗಿ ಎಂದೂ ಸಮಸ್ಯೆಗಳು ಬರುವುದಿಲ್ಲ. ಅಂತಹ ಅಧ್ಯಯನಗಳು ಪರಾಂಬರಿಸಿ ನೋಡುವುದರಿಂದ  ಸಾಧ್ಯವಾಗುತ್ತದೆ ಎಂದರು.  ಕಾಸರಗೋಡು ಕೇಂದ್ರೀಯ ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕರಾದ ಪ್ರೊ. ಚೇತನ್ ಮುಂಡಾಜೆ ಅವರು ಪ್ರಶಸ್ತಿ ಪುರಸ್ಕೃತರ ಕುರಿತಾಗಿ ಅಭಿನಂದನಾ ಮಾತುಗಳನ್ನಾಡಿದರು.  ಮುಖ್ಯ ಅತಿಥಿಗಳಾಗಿ ಎಂ.ಜಿ.ಎಂ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಗಾಯತ್ರಿ ಜಿ. ಪೈ ಉಪಸ್ಥಿತರಿದ್ದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಪ್ರಶಸ್ತಿಯ ಪ್ರಾಯೋಜಕರಾದ  ಡಾ. ಇಂದಿರಾ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ನಾಗರಾಜ ಶಂಕರನಾರಾಯಣ ಪ್ರಾರ್ಥಿಸಿದರು. ಆರ್.ಆರ್.ಸಿಯ ಸಹಸಂಶೋಧಕ ಡಾ. ಅರುಣ್‌ಕುಮಾರ್‌ಎಸ್.ಆರ್. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.