ಯಕ್ಷನಡಿಗೆ ಶಾಲೆಯೆಡೆಗೆ ಶೀರ್ಷಿಕೆಯಡಿ ಉಡುಪಿ ಪೂರ್ಣಪ್ರಜ್ಞ ಕಾಲೇಜು, ಯಕ್ಷಗಾನ ಕೇಂದ್ರ, ಯಕ್ಷರಂಗ, ಶಿವಪ್ರಭಾ, ಶ್ರೀ ವಾದಿರಾಜ ವನಂ, ಹಯಗ್ರೀವ ನಗರ, ಇಂದ್ರಾಳಿ ಉಡುಪಿ ಸಹಯೋಗದಲ್ಲಿ ಕಾಲೇಜಿನ ವಿದ್ಯಾರ್ಥಿ ವೇದಿಕೆ ಕನ್ನಡ ವಿಭಾಗದ ಸಂಯೋಜನೆಯಲ್ಲಿ ಯಕ್ಷಗಾನ ಕೇಂದ್ರ ಯಕ್ಷರಂಗದ ಕಲಾವಿದರಿಂದ ಯಕ್ಷಗಾನ ಪ್ರಾತ್ಯಕ್ಷಿಕೆ ನಡೆಯಿತು.
ಯಕ್ಷಗಾನ ಕೇಂದ್ರದ ಭಾಗವತ ಗುರು ಉಮೇಶ್ ಸುವರ್ಣ, ಗೋಪಾಡಿ ಚೆಂಡ-ಮದ್ದಳೆ ಗುರು ಕೃಷ್ಣಮೂರ್ತಿ ಭಟ್ ಬಗ್ವಾಡಿ, ಯಕ್ಷಗುರು ಬಸವ ಮುಂಡಾಡಿ ಕಲಾವಿದರು ಒಗ್ಗೂಡಿ ಯಕ್ಷಗಾನದ ಗಣಪತಿ ಸ್ತುತಿ, ಕೋಡಂಗಿ ಬಾಲಗೋಪಾಲಮತ್ತು ರಾಜವೇಷದ ಒಡ್ಡೋಲಗ ಪಯಣ, ಕುಣಿತ, ಯುದ್ಧ, ನೃತ್ಯ ಗಂಡುಬಣ್ಣದ ವೇಷದ ಒಡ್ಡೋಲಗ ಮೊದಲಾದ ವಿಭಾಗಗಳ ಪ್ರಾತ್ಯಕ್ಷಿಕೆ ನಡೆಯಿತು
ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟಿ, ಆರ್.ಆರ್.ಸಿ ಸಹ ಸಂಶೋಧಕ ಡಾ. ಅರುಣ್ ಕುಮಾರ್ ಎಸ್.ಆರ್, ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಮು ಎಲ್. , ಐಕ್ಯುಎಸಿ ಸಂಯೋಜಕ ಡಾ.ವಿನಯ ಕುಮಾರ್, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಕರಬ, ಸಹಾಯಕ ಪ್ರಾಧ್ಯಾಪಕ ಡಾ. ಸತೀಶ್ ಉಪಸ್ಥಿತರಿದ್ದರು. ವಿದ್ಯಾರ್ಥಿ ವೇದಿಕೆ ಹಗೂ ಪ್ರಾತ್ಯಕ್ಷಿಕೆ ಸಂಯೋಜಕ ಡಾ. ಶಿವಕುಮಾರ್ ಅಳಗೋಡು ಸ್ವಾಗತಿಸಿ ನಿರೂಪಿಸಿದರು.
.jpg)

No comments:
Post a Comment