Monday, July 20, 2026
Wednesday, July 15, 2026
ಗುರು ಮಟಪಾಡಿ ವೀರಭದ್ರ ನಾಯಕ್ ‘ಯಕ್ಷಸಾಧಕ’ ಪ್ರಶಸ್ತಿಗೆ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ ಆಯ್ಕೆ
ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್(ರಿ) ಪ್ರಾಯೋಜಿತ ಗುರು ಮಟಪಾಡಿ ವೀರಭದ್ರ ನಾಯಕ್ ಯಕ್ಷಸಾಧಕ ಪ್ರಶಸ್ತಿಯನ್ನು ಯಕ್ಷಗಾನ ಕೇಂದ್ರ, ಶಿವಪ್ರಭಾ, ಶ್ರೀವಾದಿರಾಜ ವನಂ, ಹಯಗ್ರೀವ ನಗರ, ಇಂದ್ರಾಳಿ, ಇವರ ಸಹಯೋಗದಲ್ಲಿ ಕೊಡಮಾಡಲಿದ್ದು, ೨೦೨೬ನೇ ರ‍್ಷದ ಪ್ರಶಸ್ತಿಗೆ ಖ್ಯಾತ ಯಕ್ಷಗಾನ ಕಲಾವಿದ ಶ್ರೀಯುತ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ ಅವರು ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ರೂ ೨೫,೦೦೦/-ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಪ್ರಶಸ್ತಿಯನ್ನು ದಿನಾಂಕ: ೦೧.೦೮.೨೦೨೬ರಂದು ಸಂಜೆ ೪.೦೦ ಗಂಟೆಗೆ, ಉಡುಪಿ ಪುರಭವನದಲ್ಲಿ ನಡೆಯುವ ಕರ‍್ಯಕ್ರಮದಲ್ಲಿ ನೀಡಿ ಗೌರವಿಸಲಾಗುವುದು ಎಂದು ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಕ್ಷನಡಿಗೆ ಶಾಲೆಯೆಡೆಗೆ - ವಿಶ್ವಜ್ಞಾನ ಅನುದಾನಿತ ಹಿ.ಪ್ರಾ.ಶಾಲೆ, ಮುಂಡಾಡಿ, ಕಾಡೂರು ( ದಿನಾಂಕ: ೧೦.೦೭.೨೦೨೬) ಪ್ರಸಂಗ : ಸುಧನ್ವ ಕಾಳಗ
ಯಕ್ಷನಡಿಗೆ ಶಾಲೆಯೆಡೆಗೆ ಶೀರ್ಷಿಕೆಯಡಿ ಯಕ್ಷಗಾನ ಕೇಂದ್ರ, ಯಕ್ಷರಂಗ, ಶಿವಪ್ರಭಾ, ಶ್ರೀ ವಾದಿರಾಜ ವನಂ, ಹಯಗ್ರೀವ ನಗರ, ಇಂದ್ರಾಳಿ ಉಡುಪಿ ಹಾಗೂ ವಿಶ್ವಜ್ಞಾನ ಅನುದಾನಿತ ಹಿ.ಪ್ರಾ.ಶಾಲೆ, ಮುಂಡಾಡಿ, ಕಾಡೂರು ಇವರ ಸಹಯೋಗದಲ್ಲಿ ಯಕ್ಷಗಾನ ಕೇಂದ್ರ ಯಕ್ಷರಂಗದ ಕಲಾವಿದರಿಂದ ಯಕ್ಷಗಾನ ಸುಧನ್ವ ಕಾಳಗ ಯಕ್ಷಗಾನ ನಡೆಯಿತು.
Friday, July 10, 2026
ನಾಡೋಜ ಡಾ . ಕಯ್ಯಾರ ರೈ ಸಮಗ್ರ ಸಂಪುಟ
ಮನವಿ
£ÁqÉÆÃd qÁ| PÀAiÀiÁågÀ QAkÕtÚ gÉÊ ¸ÀªÀÄUÀæ ¸ÀA¥ÀÅl
DzÀÄzÀjAzÀ, CªÀgÀÄ §gÉzÀ ©r ¯ÉÃR£À, ¨sÁªÀavÀæ, ¨sÁUÀªÀ»¹zÀ ¸À¨sÉ ¸ÀªÀiÁgÀA¨sÀUÀ¼À DªÀÄAvÀæt ¥ÀwæPÉ, ¥ÀwæPÁ vÀÄtÄPÀÄUÀ¼ÀÄ CªÀgÀ PÀÄjvÀ ¯ÉÃR£ÀUÀ¼ÀÄ, PÀ«vÉUÀ¼ÀÄ, ¸ÀA±ÉÆÃzsÀ£Á ¥Àæ§AzsÀUÀ¼ÀÄ ªÀÄvÀÄÛ CªÀgÀ AiÀiÁªÀÅzÉà ¸Á»wåPÀ, KQÃPÀgÀtzÀ ºÉÆÃgÁl, ¸ÁªÀiÁfPÀ PÁAiÀÄðPÀæªÀÄUÀ¼À ªÀÄÄ¢ævÀ CxÀªÁ ºÀ¸ÀÛ°TvÀ §gÀºÀUÀ½zÀݰè vÁªÀÅ zÀAiÀÄ«lÄÖ PɼÀV£À «¼Á¸ÀPÉÌ PÀ¼ÀÄ»¹PÉÆqÀ¨ÉÃPÁV «£ÀAw.
Thursday, July 9, 2026
ಯಕ್ಷನಡಿಗೆ ಶಾಲೆಯೆಡೆಗೆ -ಪಿ.ಎಂ. ಶ್ರೀ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಪೆರ್ವಾಜೆ, ಕಾರ್ಕಳ ಪ್ರಸಂಗ : ಕಂಸ ವಧೆ ದಿನಾಂಕ: ೦೭.೦೭.೨೦೨೬
ಯಕ್ಷನಡಿಗೆ ಶಾಲೆಯೆಡೆಗೆಕಮಲಾಬಾಯಿ ಪ್ರೌಢಶಾಲೆ, ಕಡಿಯಾಳಿಯಕ್ಷಗಾನ ಪ್ರಸಂಗ: ಮೈಂದ ದ್ವಿವಿಧ ಕಾಳಗದಿನಾಂಕ: ೯.೭.೨೦೨೬,
ಯಕ್ಷನಡಿಗೆ ಶಾಲೆಯೆಡೆಗೆ ಶೀರ್ಷಿಕೆಯಡಿ ಯಕ್ಷಗಾನಕೇಂದ್ರದ ಯಕ್ಷಗಾನಕೇಂದ್ರ / ಯಕ್ಷರಂಗ, ಶಿವಪ್ರಭಾ, ಶ್ರೀವಾದಿರಾಜ ವನಂ, ಹಯಗ್ರೀವ ನಗರ, ಇಂದ್ರಾಳಿ, ಉಡುಪಿ ಇವರ ಸಹಯೋಗದಲ್ಲಿ ಕಮಲಾಬಾಯಿ ಪ್ರೌಢಶಾಲೆ, ಕಡಿಯಾಳಿ, ಉಡುಪಿ ಜಿಲ್ಲೆ, ದಿನಾಂಕ ೦೯ ಜುಲೈ ೨೦೨೬ (ಗುರುವಾರ) ರಂದು ‘ಮೈಂದದ್ವಿವಿಧ ಕಾಳಗ’ ಯಕ್ಷಗಾನ ಪ್ರಸಂಗವನ್ನು ಅದ್ಭುತವಾಗಿ ಪ್ರದರ್ಶಿಸಲಾಯಿತು.
ಯಕ್ಷನಡಿಗೆ ಶಾಲೆಯೆಡೆಗೆ ಸರ್ಕಾರಿಪದವಿಪೂರ್ವಕಾಲೇಜು ಪ್ರೌಢಶಾಲಾವಿಭಾಗ, ಕುಕ್ಕುಜೆ, ಕಾರ್ಕಳತಾಲೂಕು,ಶಶಿಪ್ರಭಾ ಪರಿಣಯ ೦೮ ಜುಲೈ ೨೦೨೬ (ಬುಧವಾರ)
ಯಕ್ಷನಡಿಗೆ ಶಾಲೆಯೆಡೆಗೆ ಶೀರ್ಷಿಕೆಯಡಿ ಯಕ್ಷಗಾನಕೇಂದ್ರದ ಯಕ್ಷಗಾನಕೇಂದ್ರ/ಯಕ್ಷರಂಗ, ಶಿವಪ್ರಭಾ, ಶ್ರೀವಾದಿರಾಜ ವನಂ, ಹಯಗ್ರೀವ ನಗರ, ಇಂದ್ರಾಳಿ, ಉಡುಪಿ ಇವರ ಸಹಯೋಗದಲ್ಲಿ ಸರ್ಕಾರಿ ಪದವಿಪೂರ್ವಕಾಲೇಜು, ಪ್ರೌಢಶಾಲಾವಿಭಾಗ, ಕುಕ್ಕುಜೆ, ಕಾರ್ಕಳತಾಲೂಕು, ಉಡುಪಿಜಿಲ್ಲೆ, ದಿನಾಂಕ ೦೮ ಜುಲೈ ೨೦೨೬ (ಬುಧವಾರ) ರಂದುಪ್ರದರ್ಶಿಸಲಾದ ಪ್ರಸಿದ್ಧ ಯಕ್ಷಗಾನ ಪ್ರಸಂಗ "ಶಶಿಪ್ರಭಾ ಪರಿಣಯ"ವನ್ನು ಅದ್ಭುತವಾಗಿ ಪ್ರದರ್ಶಿಸಲಾಯಿತು.
ಈ ಪ್ರದರ್ಶನವು ಕರ್ನಾಟಕದ ಶಾಸ್ತ್ರೀಯ ಸಾಂಸ್ಕೃತಿಕ ಪರಂಪರೆಯ ಸಾರಸತ್ವವನ್ನು ಸಾರ್ಥಕವಾಗಿ ಪ್ರತಿಬಿಂಬಿಸಿತು. ಪಾಂಡಿತ್ಯ, ಸೌಂದರ್ಯಾನುಭೂತಿ, ನಾಟಕೀಯ ವೈಭವ, ಲಯಬದ್ಧ ನಿಖರತೆ ಹಾಗೂ ಕಲಾತ್ಮಕ ಉತ್ಕರ್ಷಗಳ ಅಪೂರ್ವಸಂಗಮವನ್ನು ಈ ಪ್ರದರ್ಶನದಲ್ಲಿ ಕಾಣಬಹುದಾಯಿತು. ಪ್ರತಿಯೊಂದು ದೃಶ್ಯವೂ ಅಪಾರ ಶಿಷ್ಟತೆ, ಸಹಜತೆ ಹಾಗೂ ನೈಜತೆಯಿಂದ ಅನಾವರಣಗೊಂಡಿತು. ವಿಶೇಷವಾಗಿ ಭಾಗವತಿಕೆ, ಅಭಿನಯ, ನೃತ್ಯ, ಸಂಭಾಷಣೆ, ಹಿಮ್ಮೇಳ ಹಾಗೂ ರಂಗಭೂಮಿ ವಿನ್ಯಾಸಗಳಲ್ಲಿತಂಡವು ತೋರಿದ ಪರಿಪೂರ್ಣ ಪಾಂಡಿತ್ಯವು ನಮ್ಮ ನಾಗರಿಕ ಪರಂಪರೆಯ ಅವಿಸ್ಮರಣೀಯ ಸಂಭ್ರಮವನ್ನಾಗಿ ರೂಪಿಸಿತು.
ಈ ಪ್ರದರ್ಶನವು ಕೇವಲ ಒಂದು ನಾಟಕೀಯ ಪ್ರದರ್ಶನವಾಗಿರದೆ, ಅತ್ಯಂತ ಪರಿಣಾಮಕಾರಿ ಶೈಕ್ಷಣಿಕ ಅನುಭವವಾಗಿತ್ತು. ಇದು ನಮ್ಮ ವಿದ್ಯಾರ್ಥಿಗಳಲ್ಲಿ ಆಳವಾದ ಬೌದ್ಧಿಕ, ನೈತಿಕ ಹಾಗೂ ಸಾಂಸ್ಕೃತಿಕ ಅರಿವನ್ನು ಮೂಡಿಸಿತು. ಯಕ್ಷಗಾನದ ಶಾಶ್ವತಮೌಲ್ಯಗಳ ಬಗ್ಗೆ ಗೌರವ ಭಾವವನ್ನು ಬೆಳೆಸುವುದರೊಂದಿಗೆ, ಅವರ ಸೌಂದರ್ಯಪ್ರಜ್ಞೆಯನ್ನು ಸಮೃದ್ಧಗೊಳಿಸಿ, ಸಾಂಸ್ಕೃತಿಕ ಜಾಗೃತಿಯನ್ನು ಬಲಪಡಿಸಿ, ಸಮಕಾಲೀನ ಸಮಾಜದಲ್ಲಿಯೂ ನಮ್ಮ ದೇಶೀಯ ಕಲಾ ಪರಂಪರೆಗಳ ನಿರಂತರ ಪ್ರಸ್ತುತತೆಯನ್ನು ಪುನರುಚ್ಚರಿಸಿತು.ತಂಡದ ಅತ್ಯಂತ ಶಿಸ್ತಿನ ಸಂಘಟನೆ, ಅಚಲ ಬದ್ಧತೆ, ಪಾಂಡಿತ್ಯಪೂರ್ಣ ವ್ಯಾಖ್ಯಾನ, ಕಲಾತ್ಮಕ ಪರಿಪೂರ್ಣತೆ ಹಾಗೂ ಈ ವೈಭವಶಾಲಿ ಜಾನಪದ ರಂಗಪರಂಪರೆಯ ಪಾವಿತ್ರ‍್ಯ ಮತ್ತು ಭವ್ಯತೆಯನ್ನು ಉಳಿಸಿ ಬೆಳೆಸುವ ನಿಸ್ವಾರ್ಥ ಸಮರ್ಪಣೆ ಆಳವಾಗಿ ಪ್ರಭಾವಿತಗೊಳಿಸಿದ್ದಲ್ಲದೆ, ಅವರ ಅತ್ಯುನ್ನತ ಕಲಾನೈಪುಣ್ಯ ಹಾಗೂ ಆದರ್ಶಪ್ರಾಯ ಸಮರ್ಪಣೆ ಸಾಂಸ್ಕೃತಿಕ ಸಂರಕ್ಷಣೆಯ ಶ್ರೇಷ್ಟ ಮಾದರಿಯಾಗಿ ಸದಾಸ್ಮರಣೀಯವಾಗಿ ಉಳಿಯುವಂತದ್ದಾಗಿದ್ದು ಕಾಲೇಜಿನ ಆಡಳಿತ ಮಂಡಳಿ, ಅಧ್ಯಾಪಕ ವೃಂದ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ವೀಕ್ಷಿಸಿ ಸಂತೋಷಪಟ್ಟುದುದಲ್ಲದೆ ಪ್ರತಿಷ್ಠಿತ ಸಂಸ್ಥೆಯು ತನ್ನ ಅಚಲ ಶ್ರೇಷ್ಟತೆಯ ಮೂಲಕ ಭಾರತದ ಅತ್ಯಂತ ವೈಭವಯುತ ಪ್ರದರ್ಶನ ಕಲೆಗಳಲ್ಲೊಂದಾದ ಯಕ್ಷಗಾನದ ಬೆಳಕನ್ನು ಮುಂದಿನ ಪೀಳಿಗೆಗಳಿಗೂ ನಿರಂತರವಾಗಿ ಹರಡುತ್ತಾ, ಸಾಂಸ್ಕೃತಿಕ ಗಗನವನ್ನು ಇನ್ನಷ್ಟು ಪ್ರಭಾಮಯಗೊಳಿಸಲಿ ಎಂದು ಶುಭ ಹಾರೈಸಿದರು.
ಯಕ್ಷನಡಿಗೆ ಶಾಲೆಯೆಡೆಗೆ ಶೀರ್ಷಿಕೆಯಡಿ ಕಾರ್ಯಕ್ರಮ ಪಿ.ಪಿ.ಸಿಯಲ್ಲಿ ಯಕ್ಷಗಾನ ಪ್ರಾತ್ಯಕ್ಷಿಕೆ (೦೬.೦೭.೨೦೨೬)
ಯಕ್ಷನಡಿಗೆ ಶಾಲೆಯೆಡೆಗೆ ಶೀರ್ಷಿಕೆಯಡಿ ಉಡುಪಿ ಪೂರ್ಣಪ್ರಜ್ಞ ಕಾಲೇಜು, ಯಕ್ಷಗಾನ ಕೇಂದ್ರ, ಯಕ್ಷರಂಗ, ಶಿವಪ್ರಭಾ, ಶ್ರೀ ವಾದಿರಾಜ ವನಂ, ಹಯಗ್ರೀವ ನಗರ, ಇಂದ್ರಾಳಿ ಉಡುಪಿ ಸಹಯೋಗದಲ್ಲಿ ಕಾಲೇಜಿನ ವಿದ್ಯಾರ್ಥಿ ವೇದಿಕೆ ಕನ್ನಡ ವಿಭಾಗದ ಸಂಯೋಜನೆಯಲ್ಲಿ ಯಕ್ಷಗಾನ ಕೇಂದ್ರ ಯಕ್ಷರಂಗದ ಕಲಾವಿದರಿಂದ ಯಕ್ಷಗಾನ ಪ್ರಾತ್ಯಕ್ಷಿಕೆ ನಡೆಯಿತು.
ಯಕ್ಷಗಾನ ಕೇಂದ್ರದ ಭಾಗವತ ಗುರು ಉಮೇಶ್ ಸುವರ್ಣ, ಗೋಪಾಡಿ ಚೆಂಡ-ಮದ್ದಳೆ ಗುರು ಕೃಷ್ಣಮೂರ್ತಿ ಭಟ್ ಬಗ್ವಾಡಿ, ಯಕ್ಷಗುರು ಬಸವ ಮುಂಡಾಡಿ ಕಲಾವಿದರು ಒಗ್ಗೂಡಿ ಯಕ್ಷಗಾನದ ಗಣಪತಿ ಸ್ತುತಿ, ಕೋಡಂಗಿ ಬಾಲಗೋಪಾಲಮತ್ತು ರಾಜವೇಷದ ಒಡ್ಡೋಲಗ ಪಯಣ, ಕುಣಿತ, ಯುದ್ಧ, ನೃತ್ಯ ಗಂಡುಬಣ್ಣದ ವೇಷದ ಒಡ್ಡೋಲಗ ಮೊದಲಾದ ವಿಭಾಗಗಳ ಪ್ರಾತ್ಯಕ್ಷಿಕೆ ನಡೆಯಿತು
ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟಿ, ಆರ್.ಆರ್.ಸಿ ಸಹ ಸಂಶೋಧಕ ಡಾ. ಅರುಣ್ ಕುಮಾರ್ ಎಸ್.ಆರ್, ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಮು ಎಲ್. , ಐಕ್ಯುಎಸಿ ಸಂಯೋಜಕ ಡಾ.ವಿನಯ ಕುಮಾರ್, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಕರಬ, ಸಹಾಯಕ ಪ್ರಾಧ್ಯಾಪಕ ಡಾ. ಸತೀಶ್ ಉಪಸ್ಥಿತರಿದ್ದರು. ವಿದ್ಯಾರ್ಥಿ ವೇದಿಕೆ ಹಗೂ ಪ್ರಾತ್ಯಕ್ಷಿಕೆ ಸಂಯೋಜಕ ಡಾ. ಶಿವಕುಮಾರ್ ಅಳಗೋಡು ಸ್ವಾಗತಿಸಿ ನಿರೂಪಿಸಿದರು.
Tuesday, July 7, 2026
ಯಕ್ಷಗಾನ ದಾಖಲೀಕರಣ ಉದ್ಘಾಟನೆ ಹಾಗೂ ವೀರವೃಷಸೇನ ಪುಂಡುವೇಷ ದಾಖಲೀಕರಣ (05.07.2026)
ದಾಖಲೀಕರಣ:




.jpg)








.jpg)

