Monday, December 8, 2025

ಕರಾವಳಿ ಭಜನಾ ಸಮಾವೇಶ, ದಿನಾಂಕ: ೦೬.೧೨.೨೦೨೫ ಮತ್ತು ೦೭.೧೨.೨೦೨೫, ಸ್ಥಳ: ಟಿ. ಮೋಹನದಾಸ್ ಪೈ ಅಮೃತ ಸೌಧ ಸಭಾಂಗಣ,ಎಂ.ಜಿ.ಎಂ ಕಾಲೇಜು

 






















ಧ್ಯಾನಸ್ಥ ಸ್ಥಿತಿಯಲ್ಲಿ ಚಿಂತನೆ ಮಾಡುವುದು ಆಧ್ಯಾತ್ಮವಾಗಿದೆಆದರೆ ಇಂದು ಆಧ್ಯಾತ್ಮ ಕೂಡ ವ್ಯಾಪಾರದ  ಸರಕಾಗಿದೆ.ಯಾವುದು ಜನರನ್ನು ಹೆಚ್ಚು ತಲುಪುತ್ತದೋ ಅದನ್ನು ವಾಣಿಜ್ಯ ಸರಕಾಗಿ ಬಳಸಲಾಗುತ್ತಿದೆ ಎಂದು ವಿಶ್ರಾಂತ ಕುಲಪತಿಹಾಗೂ ಹಿರಿಯ ವಿದ್ವಾಂಸರಾದ ಡಾ.ಬಿವಿವೇಕ ರೈ ಅಭಿಪ್ರಾಯ ಪಟ್ಟರುಅವರು ಕನ್ನಡ ಮತ್ತು ಸಂಸ್ಕöÈತಿ   ಇಲಾಖೆಬೆಂಗಳೂರಿನ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರಮತ್ತು ಕನಕದಾಸ ಅಧ್ಯಯನ ಸಂಶೋಧನ ಪೀಠಉಡುಪಿ ಹಾಗೂ ರಾಷ್ಟ್ರಕವಿ ಗೋವಿಂದ  ಪೈ ಸಂಶೋಧನ ಕೇಂದ್ರದ ಸಹಯೋಗದಲ್ಲಿ ಡಿಸೆಂಬರ್  ಮತ್ತು ,೨೦೨೫ರಂದು ಎಂ.ಜಿ.ಎಂ ಕಾಲೇಜು ಆವರಣದ ಟಿಮೋಹನದಾಸ್ ಪೈ ಅಮೃತ ಸೌಧ ಸಭಾಂಗಣದಲ್ಲಿ   ಶನಿವಾರ ಹಮ್ಮಿಕೊಂಡಿದ್ದ ಕರಾವಳಿ ಭಜನಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಇಂದು ತಂತ್ರಜ್ಞಾನ ಆಧಾರಿತ ಸಂವಹನ ವಿಧಾನಗಳಿವೆ.  ಆದ್ದರಿಂದ ಮನುಷ್ಯರು ಗೌಣವಾಗುತ್ತಾರೆಭಜನೆ ಬೇಕಿದ್ದರೂ ಕೃತಕ ಬುದ್ಧಿಮತ್ತೆಯಲ್ಲಿ (ಎಐಸಿಗುತ್ತದೆಮುಂದಿನ ೧೫ ವರ್ಷಗಳಲ್ಲಿ ಎಐ ನಮ್ಮನ್ನು ಆಳಲಿದೆ ಎಂದರುನಿಜಜೀವನದಲ್ಲಿ ಅನುಸರಿಸಬೇಕಾದ ಜೀವನ ಸಂಗತಿಗಳೇ ತತ್ವಪದಗಳಲ್ಲಿ ಅಡಕವಾಗಿವೆಧರ್ಮ ಸಾಮರಸ್ಯಲಿಂಗಜಾತಿತಾರತಮ್ಯಕ್ಕೆ ವಿರೋಧ ಆಧುನಿಕತೆಯ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯ ಮೊದಲಾದವುಗಳು ವಿಡಂಬನೆಯ ರೂಪದಲ್ಲಿ ಅವುಗಳಲ್ಲಿ ಮೂಡಿಬಂದಿವೆ ಎಂದರು

ಒಂದು ಕಾಲದಲ್ಲಿ ಭಜನೆ ಮನೆಮನೆಗಳಲ್ಲಿ ನಡೆಯುತ್ತಿತ್ತುಸಾಹಿತ್ಯ ಸಂಗೀತದ ಅವಿನಾಭಾವದ ಸೇರುವಿಕೆ ಭಜನೆಯಲ್ಲಿದೆಇಂದು ಡಿ.ಜೆ., . ಸವಾಲುಗಳ ನಡುವೆ ಭಜನೆಯ ಮೂಲಕ ಅನುಭಾವಆಧ್ಯಾತ್ಮ ಮತ್ತು ಉತ್ತಮ ಸಂಸ್ಕöÈತಿ  ಜನರಿಗೆ ತಲುಪಬೇಕಿದೆತತ್ವಪದವನ್ನು ಭಜನೆಯ ಮೂಲಕ ಅಳವಡಿಸಿಪ್ರಚುರಪಡಿಸಬೇಕಿದೆ’ ಎಂದು ಪ್ರತಿಪಾದಿಸಿದರು.

ಮಾಹೆಯ ಸಹ ಕುಲಪತಿ ನಾರಾಯಣ ಸಭಾಹಿತ್ ಮಾತನಾಡಿಬದಲಾವಣೆ ನಿರಂತರವಾದುದುಕಳೆದ ನೂರು ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆಭಜನೆಯಲ್ಲಿ ಕೂಡ ಬದಲಾವಣೆಗಳಾಗಿವೆಮಹಾನಗರಗಳಲ್ಲಿ ಭಜನೆ ಬೇರೆಯೇ ರೂಪ ಪಡೆದುಕೊಳ್ಳುತ್ತಿರುವುದು ದುರಂತ ಎಂದರು

ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ಚಿಕ್ಕಣ್ಣ ಅಧ್ಯಕ್ಷ ಸ್ಥಾನದಿಂದ ಮಾತನಾಡಿವಸಾಹತುಶಾಹಿ ಸಂದರ್ಭದಲ್ಲಿ ಸಾಮಾಜಿಕ ಸಂಘರ್ಷಗಳು ಸಮಸ್ಯೆಗಳು ಸಾಕಷ್ಟು ಎದುರಾಗಿದ್ದವುಅಂತಹ  ಸಂದರ್ಭದಲ್ಲಿ ತತ್ವಪದಕಾರರು ಬದುಕಿಗೆ ಮುಖಾಮುಖಿಯಾದರು ಎಂದು ಹೇಳಿದರು

ಬದುಕಿನ ನಿಜರೂಪಗಳನ್ನು ಒಳಗೊಂಡ ತತ್ವಪದಗಳು ತನ್ನ ಗೇಯಪ್ರಧಾನವಾದ ಸಂಗೀತದಿಂದ  ಜನರನ್ನು 

ತಲುಪಿದವುಆದರೆ ೭೦ರ ದಶಕದವರೆಗೂ  ಪ್ರಕಾರವನ್ನು ಯಾರೂ ಗಂಭೀರವಾಗಿ ಪರಿಗಣಿಸದಿರುವುದು ವಿಪರ್ಯಾಸ ಎಂದರುನಾವು ಈಗಾಗಲೇ ತತ್ವಪದಗಳ ೫೦ ಸಂಪುಟಗಳನ್ನು ಹೊರತಂದಿದ್ದೇವೆಬಿಟ್ಟುಹೋಗಿರುವ ತತ್ವಪದಗಳನ್ನು 

ಸಂಗ್ರಹಿಸಿ ಮತ್ತೆ ಪ್ರಕಟಿಸಲಿದ್ದೇವೆಪಾರಿಭಾಷಿಕ ಪದಕೋಶ ಎಂಬ ಬೃಹತ್ ಸಂಪುಟವನ್ನೂ ಹೊರತರುತ್ತಿದ್ದೇವೆ ಎಂದರು.

ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲೆ ವನಿತಾ ಮಯ್ಯಎಂ.ಜಿ.ಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ದೇವಿದಾಸ್ಎಸ್ನಾಯ್ಕ್ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾಕಾರ್ಯಕ್ರಮ ಸಂಯೋಜಿಕ ರವಿರಾಜ್ ಎಚ್.ಪಿ ಉಪಸ್ಥಿತರಿದ್ದರುರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಬಿಜಗದೀಶ್ ಶೆಟ್ಟಿ ಸ್ವಾಗತಿಸಿದರುರಾಘವೇಂದ್ರ ತುಂಗ ಕಾರ್ಯಕ್ರಮ ನಿರೂಪಿಸಿದರುಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರಬೆಂಗಳೂರು ಇದರ ಸದಸ್ಯ ಸಂಚಾಲಕರಾದ ಕಾತ್ಯಾಯಿನಿ ಕುಂಜಿಬೆಟ್ಟು ವಂದಿಸಿದರುರಾಮಾಂಜಿ ಮತ್ತು ಸ್ವಪ್ನ ರಾಜ್ ನಾಡಗೀತೆ ಹಾಡಿದರು

ಉದ್ಘಾಟನಾ ಸಮಾರಂಭದ ಬಳಿಕ  ಭಜನಾ ತಂಡಗಳು ಭಾಗವಹಿಸಿದ್ದವು

.     ಮಹಾಲಕ್ಷ್ಮಿ   ಮೊಗವೀರ ಭಜನಾ ಮಂಡಳಿಕೊಡವೂರು

.     ರಾಗರಂಜನಿ ತಂಡ ಕುಂಜಿಬೆಟ್ಟು

.     ಶ್ರೀ ಮಹಾಗಣಪತಿ ಭಜನಾ ಮಂಡಳಿತೊಂಭತ್ತು

.     ಜಿ.ಎಸ್.ಬಿ ಮಹಿಳಾ ಮಂಡಳಿಉಡುಪಿ

.     ಶ್ರೀ ಮಾರಿಕಾಂಬ ದುರ್ಗಾಪರಮೇಶ್ವರಿ ಭಜನಾಮಂಡಳಿಕಿರಾಡಿ

.     ಯಕ್ಷಿ ಕಲ್ಲುಕುಟಿಗ ಭಜನಾ ಮಂಡಳಿಕೋಟೇಶ್ವರ

.     ದುರ್ಗಾಪರಮೇಶ್ವರಿ ಭಜನಾಮಂಡಳಿಅಂಜಾರುಹಿರಿಯಡ್ಕ

.     ಸರ್ವೇಶ್ವರಿ ಭಜನಾಮಂಡಳಿಹೊನ್ನಾವರ

.     ಬಾಲವಿಕಾಸ ಭಜನಾಮಂಡಳಿಹೊಸಬೆಟ್ಟುಸುರತ್ಕಲ್

 ಡಿಸೆಂಬರ್ ೨೦೨೫ರಂದು  ತಂಡಗಳು ಭಾಗವಹಿಸಿದ್ದವು

೧೦.   ಶ್ರೀ ವೀರಭದ್ರ ಗುರು ಮಾಚಿದೇವ ಭಜನಾಮಂಡಳಿಕಾರ್ಕಳ

೧೧.   ಶ್ರೀ ಬ್ರಹ್ಮಲಿಂಗೇಶ್ವರ ಮಹಿಳಾ ಭಜನಾ ಮಂಡಳಿಕರಂದಾಡಿ

೧೨.   ಶ್ರೀ ಬಾಲಾಜಿ ಕಲಾ ಭಜನಾ ಮಂಡಳಿಪಾಂಡೇಶ್ವರಸಾಸ್ತಾನ

೧೩.   ರಂಗಚಿನ್ನಾರಿಯ ಸ್ವರಚಿನ್ನಾರಿ ಭಜನಾಮಂಡಳಿಕಾಸರಗೋಡು

ಶ್ರೀ ರಮೇಶ್ ಕಲ್ಮಾಡಿ ಹಾಗೂ ಶ್ರೀಮತಿ ಜ್ಯೋತಿ ದೇವಾಡಿಗ ಭಾಗವಹಿಸಿದ ಭಜನಾ ತಂಡಗಳನ್ನು ಪರಿಚಯಿಸಿ ಅವರು ಹಾಡಿದ ಭಜನೆಗಳ ವಿಶ್ಲೇಷಣೆ ಮಾಡಿದರುಸಮಾರೋಪ ಸಮಾರಂಭದಲ್ಲಿ ಸಂಗೀತ ಹಾಗೂ ಸಾಂಸ್ಕೃತಿಕ ಚಿಂತಕರಾದ ಶ್ರೀಮತಿ   ಪ್ರತಿಭಾ ಎಂ.ಎಲ್ಸಾಮಗ ಸಮಾರೋಪ  ಭಾಷಣ ಮಾಡಿದರುಶ್ರೀ ಕಾ.ಚಿಕ್ಕಣ್ಣ ಅಧ್ಯಕ್ಷತೆ ವಹಿಸಿದ್ದರುಡಾ.ಬಿಜಗದೀಶ್ ಶೆಟ್ಟಿ ಹಾಗೂ ಡಾಕಾತ್ಯಾಯಿನಿ ಕುಂಜಿಬೆಟ್ಟು ಉಪಸ್ಥಿತರಿದ್ದರು.

No comments: