

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ,
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್
ಹಾಗೂ ಎಂ.ಜಿ.ಎಂ
ಕಾಲೇಜು, ಉಡುಪಿ ಇವರ ಆಶ್ರಯದಲ್ಲಿ ಬಾರ್ಕೂರು
ಮೂಡುಕೇರಿ ಗಂಗಮ್ಮ ರಾಮಚಂದ್ರ ಶಾಸ್ತ್ರಿ ಸ್ಮರಣಾರ್ಥ ಚಿತ್ರಕಲಾ ಸ್ಪರ್ಧೆಯನ್ನು ೨೯ ನವಂಬರ್ ೨೦೨೫
ಶನಿವಾರದಂದು ಎಂ.ಜಿ.ಎಂ
ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ
ಏರ್ಪಡಿಸಲಾಯಿತು.
ಸ್ಪರ್ಧೆಯಲ್ಲಿ ಪೂರ್ವಪ್ರಾಥಮಿಕ, ಪ್ರಾಥಮಿಕ, ಪ್ರೌಢ, ಪ.ಪೂ, ಪದವಿ
ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಶ್ರೀ
ಸಂತೋಷ್ ಪೈ, ಚಿತ್ರಕಲಾ ಶಿಕ್ಷಕ
ಶ್ರೀ ರಮೇಶ್ ಅಂಬಾಡಿ, ಡಾ. ಜನಾರ್ದನ ಹಾವಂಜೆ
ತೀರ್ಪುಗಾರರಾಗಿದ್ದರು. ಕಾರ್ಯಕ್ರಮ ಸಂಘಟಕರಾಗಿ ಸ್ಪರ್ಧೆಯನ್ನು ಆಯೋಜಿಸುವಲ್ಲಿ ಸಹಕರಿಸಿದ ಡಾ. ಜನಾರ್ದನ ಹಾವಂಜೆ
ಮಾತನಾಡಿ ವಿದ್ಯಾರ್ಥಿಗಳು ಬಹುಮಾನಕ್ಕಾಗಿ ಭಾಗವಹಿಸುವುದನ್ನು ಬಿಟ್ಟು ಸ್ಪರ್ಧಾ
ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಮಕ್ಕಳಲ್ಲಿ
ಕಲೆಯ ಬಗೆಗಿನ ಆಸಕ್ತಿ ವೃದ್ಧಿಸಲು ಪೋಷಕರು ಹೆಚ್ಚಿನ ಪ್ರೋತ್ಸಾಹವನ್ನು
ನೀಡುವುದಕ್ಕೆ ತುಂಬಾ ಹೆಮ್ಮೆ ಎನಿಸಿದೆ. ಇನ್ನಷ್ಟು ಹೊಸ ಹೊಸ ರೀತಿಯಲ್ಲಿ
ಚಿತ್ರಕಲೆಯಲ್ಲಿ ಮಕ್ಕಳು ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಹಿರಿಯ ಸಮಾಜ ಸೇವಕ ವಿಶ್ವನಾಥ
ಶೆಣೈ, ತೀರ್ಪುಗಾರರಾದ ರಮೇಶ್ ಅಂಬಾಡಿ, ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಬ್ರಹ್ಮಾವರ ಎಸ್.ಎಂ.ಎಸ್. ಕಾಲೇಜಿನ
ವಿಶ್ರಾಂತ ಪ್ರಾಂಶುಪಾಲರಾದ ಡಾ. ವೈ ರವೀಂದ್ರನಾಥ
ರಾವ್ ಹಾಗೂ ಕೇಂದ್ರದ ಆಡಳಿತಾಧಿಕಾರಿ
ಡಾ.ಬಿ. ಜಗದೀಶ್ ಶೆಟ್ಟಿ
ಅವರು ನಗದು ಮತ್ತು ಪ್ರಮಾಣಪತ್ರಗಳನ್ನು
ವಿತರಿಸಿದರು. ಕಾರ್ಯಕ್ರಮ ಸಂಘಟಕರಾದ ಡಾ.ಜನಾರ್ದನ ಹಾವಂಜೆ
ಕಾರ್ಯಕ್ರಮ ನಿರ್ವಹಿಸಿದರು. ಆರ್.ಜಿ.ಪೈ
ಹಾಗೂ ಆರ್.ಆರ್.ಸಿಯ
ಸಿಬ್ಬಂದಿಗಳು ಕಾರ್ಯಕ್ರಮ ಆಯೋಜಿಸಿದ್ದರು. ಸೀತಾರಾಮ ಶಾಸ್ತ್ರಿ ಬಾರ್ಕೂರು ಇವರು ಸ್ಪರ್ಧೆಯಲ್ಲಿ ಭಾಗವಹಿಸಿದ
ಎಲ್ಲಾ ವಿದ್ಯಾರ್ಥಿಗಳಿಗೆ ಪೆನ್ನು
ಹಾಗೂ ತಿಂಡಿಯನ್ನು ನೀಡಿ ಸಹಕರಿಸಿದರು.
ವಿಜೇತರ ವಿವರ:
೧ ರಿಂದ ೪ನೇ ತರಗತಿ (ಪೂರ್ವ
ಪ್ರಾಥಮಿಕ) ; ವಿಷಯ : ಐಚ್ಛಿಕ
೧. ದೇಶ್ನ ಕುಲಾಲ್,
೪ನೇ ತರಗತಿ, ಎಸ್.ಆರ್. ಪಬ್ಲಿಕ್
ಸ್ಕೂಲ್, , ಹೆಬ್ರಿ (ಪ್ರಥಮ)
೨. ಆರ್ಯ ಪೈ,
೪ನೇ ತರಗತಿ, ಪೋದಾರ್ ಇಂಟರ್ ನ್ಯಾಶನಲ್ ಸ್ಕೂಲ್, ಪೆರಂಪಳ್ಳಿ, ಉಡುಪಿ (ದ್ವಿತೀಯ)
೩. ಸಮೃದ್ಧಿ ವಿ.
ಶೆಟ್ಟಿ, ೨ನೇ ತರಗತಿ, ಮುಕುಂದಕೃಪಾ
ಆಂಗ್ಲಮಾಧ್ಯಮ ಶಾಲೆ, ಉಡುಪಿ (ತೃತೀಯ)
೫ ರಿಂದ ೭ನೇ
ತರಗತಿ; (ಪ್ರಾಥಮಿಕ) ವಿಷಯ : ಐಚ್ಛಿಕ
೧. ನಿಹಾರ್ ಜೆ. ಎಸ್. ,೬ನೇ
ತರಗತಿ, ಜಿ.ಎಂ.ವಿ.ಪಿ.ಎಸ್.,ಬ್ರಹ್ಮಾವರ (ಪ್ರಥಮ)
೨. ಹರ್ಷಿತಾ ಪ್ರಭು, ೭ನೇ
ತರಗತಿ, ವಿದ್ಯೋದಯ ಪಬ್ಲಿಕ್ ಸ್ಕೂಲ್, ಉಡುಪಿ ,(ದ್ವಿತೀಯ)
೩. ಕನಿಷ್ಕ , ೭ನೇ
ತರಗತಿ, ವಿದ್ಯೋದಯ ಪಬ್ಲಿಕ್ ಸ್ಕೂಲ್, ಉಡುಪಿ (ತೃತೀಯ)
೪. ಪ್ರಭಾತ್ ಉಡುಪ,
೫ನೇ ತರಗತಿ, ಅಮೃತ ಭಾರತಿ ವಿದ್ಯಾಕೇಂದ್ರ,
ಹೆಬ್ರಿ (ಸಮಾಧಾನಕರ)
೮ ರಿಂದ ೧೦ನೇ
ತರಗತಿ : ವಿಷಯ: ಉಡುಪಿ
ಪರ್ಯಾಯ ಅಥವಾ ಹಳ್ಳಿಯ ದೃಶ್ಯ
೧. ಪ್ರೇರಿತ ಯು.,
೮ನೇ ತರಗತಿ, ಟಿ.ಎ.ಪೈ.
ಇಂಗ್ಲಿಷ್ ಮೀಡಿಯಂ ಸ್ಕೂಲ್, ಕುಂಜಿಬೆಟ್ಟು, ಉಡುಪಿ (ಪ್ರಥಮ)
೨. ವಿನೀಶ್ ಆಚಾರ್ಯ,
೮ನೇ ತರಗತಿ, ಎಸ್.ಆರ್. ಪಬ್ಲಿಕ್
ಸ್ಕೂಲ್, ಹೆಬ್ರಿ ( ದ್ವಿತೀಯ)
೩. ಪ್ರಥಮ್ ಪಿ.
ಕಾಮತ್, ೯ನೇ ತರಗತಿ, ಶಾಂತಿನಿಕೇತನ
ಇಂಗ್ಲಿಷ್ ಮೀಡಿಯಂ ಸ್ಕೂಲ್, ಕುಕ್ಕಿಕಟ್ಟೆ, ಉಡುಪಿ (ತೃತೀಯ)
೪. ವಂಶಿತ್ ಆಚಾರ್ಯ,
೯ನೇ ತರಗತಿ, ಕೆ.ಪಿ.ಎಸ್.
ಮುನಿಯಾಲ್, ಉಡುಪಿ (ಸಮಾಧಾನಕರ)
ಪದವಿಪೂರ್ವ ವಿಭಾಗ : ವಿಷಯ: ಮಹಾಭಾರತ ದೃಶ್ಯ ಅಥವಾ ಪರಿಸರ ಮಾಲಿನ್ಯ
೧. ಪ್ರತಿಷ್ಟ ಶೇಟ್,
ದ್ವಿತೀಯ ಪಿಯುಸಿ, ವಿದ್ಯೋದಯ ಪದವಿಪೂರ್ವ ಕಾಲೇಜು, ಉಡುಪಿ (ಪ್ರಥಮ)
೨. ಶರಧಿ, ದ್ವಿತೀಯ
ಪಿಯುಸಿ, ವಿವೇಕ ಪದವಿಪೂರ್ವ ಕಾಲೇಜು, ಕೋಟ (ದ್ವಿತೀಯ)
೩. ದೀಕ್ಷ, ಪ್ರಥಮ
ಪಿ.ಯು.ಸಿ, ವಿವೇಕ ಪದವಿಪೂರ್ವ ಕಾಲೇಜು, ಕೋಟ (ತೃತೀಯ)
೪. ವಿಶ್ವಾಸ್ ಎಸ್.
ನಾಯ್ಕ್, ಪ್ರ. ಪಿ.ಯು.ಸಿ, ಎಂ.ಜಿ.ಎಂ ಪಿ.ಯು
ಕಾಲೇಜು,ಉಡುಪಿ (ಸಮಾಧಾನಕರ)
ಪದವಿ ವಿಭಾಗ: ವಿಷಯ: ರಾಮಾಯಣ ದೃಶ್ಯ ಅಥವಾ ರಾಷ್ಟ್ರಕವಿ ಗೋವಿಂದ
ಪೈ
೧. ರಾಘವೇಂದ್ರ ಮರವಂತೆ,
ಚಿತ್ರಕಲಾ
ಮಂದಿರ, ಕಲಾಶಾಲೆ, ಉಡುಪಿ(ಪ್ರಥಮ)
೨. ರೂಪಕ್, ಚಿತ್ರಕಲಾ
ಮಂದಿರ, ಕಲಾಶಾಲೆ, ಉಡುಪಿ (ದ್ವಿತೀಯ)
೩. ಸುಶ್ಮಿತಾ, , ಪೂರ್ಣಪ್ರಜ್ಞ
ಕಾಲೇಜು, ಉಡುಪಿ (ತೃತೀಯ)
























No comments:
Post a Comment