Monday, December 8, 2025

ಕರಾವಳಿ ಭಜನಾ ಸಮಾವೇಶ, ದಿನಾಂಕ: ೦೬.೧೨.೨೦೨೫ ಮತ್ತು ೦೭.೧೨.೨೦೨೫, ಸ್ಥಳ: ಟಿ. ಮೋಹನದಾಸ್ ಪೈ ಅಮೃತ ಸೌಧ ಸಭಾಂಗಣ,ಎಂ.ಜಿ.ಎಂ ಕಾಲೇಜು

 






















ಧ್ಯಾನಸ್ಥ ಸ್ಥಿತಿಯಲ್ಲಿ ಚಿಂತನೆ ಮಾಡುವುದು ಆಧ್ಯಾತ್ಮವಾಗಿದೆ. ಆದರೆ ಇಂದು ಆಧ್ಯಾತ್ಮ ಕೂಡ ವ್ಯಾಪಾರದ  ಸರಕಾಗಿದೆ.ಯಾವುದು ಜನರನ್ನು ಹೆಚ್ಚು ತಲುಪುತ್ತದೋ ಅದನ್ನು ವಾಣಿಜ್ಯ ಸರಕಾಗಿ ಬಳಸಲಾಗುತ್ತಿದೆ ಎಂದು ವಿಶ್ರಾಂತ ಕುಲಪತಿಹಾಗೂ ಹಿರಿಯ ವಿದ್ವಾಂಸರಾದ ಡಾ.ಬಿ. ಎ. ವಿವೇಕ ರೈ ಅಭಿಪ್ರಾಯ ಪಟ್ಟರು. ಅವರು ಕನ್ನಡ ಮತ್ತು ಸಂಸ್ಕöÈತಿ   ಇಲಾಖೆ, ಬೆಂಗಳೂರಿನ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಮತ್ತು ಕನಕದಾಸ ಅಧ್ಯಯನ ಸಂಶೋಧನ ಪೀಠ, ಉಡುಪಿ ಹಾಗೂ ರಾಷ್ಟ್ರಕವಿ ಗೋವಿಂದ  ಪೈ ಸಂಶೋಧನ ಕೇಂದ್ರದ ಸಹಯೋಗದಲ್ಲಿ ಡಿಸೆಂಬರ್ ೬ ಮತ್ತು ೭,೨೦೨೫ರಂದು ಎಂ.ಜಿ.ಎಂ ಕಾಲೇಜು ಆವರಣದ ಟಿ. ಮೋಹನದಾಸ್ ಪೈ ಅಮೃತ ಸೌಧ ಸಭಾಂಗಣದಲ್ಲಿ   ಶನಿವಾರ ಹಮ್ಮಿಕೊಂಡಿದ್ದ ಕರಾವಳಿ ಭಜನಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಇಂದು ತಂತ್ರಜ್ಞಾನ ಆಧಾರಿತ ಸಂವಹನ ವಿಧಾನಗಳಿವೆ.  ಆದ್ದರಿಂದ ಮನುಷ್ಯರು ಗೌಣವಾಗುತ್ತಾರೆ. ಭಜನೆ ಬೇಕಿದ್ದರೂ ಕೃತಕ ಬುದ್ಧಿಮತ್ತೆಯಲ್ಲಿ (ಎಐ) ಸಿಗುತ್ತದೆ. ಮುಂದಿನ ೧೫ ವರ್ಷಗಳಲ್ಲಿ ಎಐ ನಮ್ಮನ್ನು ಆಳಲಿದೆ ಎಂದರು. ನಿಜಜೀವನದಲ್ಲಿ ಅನುಸರಿಸಬೇಕಾದ ಜೀವನ ಸಂಗತಿಗಳೇ ತತ್ವಪದಗಳಲ್ಲಿ ಅಡಕವಾಗಿವೆ. ಧರ್ಮ ಸಾಮರಸ್ಯ, ಲಿಂಗ, ಜಾತಿತಾರತಮ್ಯಕ್ಕೆ ವಿರೋಧ ಆಧುನಿಕತೆಯ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯ ಮೊದಲಾದವುಗಳು ವಿಡಂಬನೆಯ ರೂಪದಲ್ಲಿ ಅವುಗಳಲ್ಲಿ ಮೂಡಿಬಂದಿವೆ ಎಂದರು. 

ಒಂದು ಕಾಲದಲ್ಲಿ ಭಜನೆ ಮನೆಮನೆಗಳಲ್ಲಿ ನಡೆಯುತ್ತಿತ್ತು. ಸಾಹಿತ್ಯ ಸಂಗೀತದ ಅವಿನಾಭಾವದ ಸೇರುವಿಕೆ ಭಜನೆಯಲ್ಲಿದೆ. ಇಂದು ಡಿ.ಜೆ., ಎ.ಐ ಸವಾಲುಗಳ ನಡುವೆ ಭಜನೆಯ ಮೂಲಕ ಅನುಭಾವ, ಆಧ್ಯಾತ್ಮ ಮತ್ತು ಉತ್ತಮ ಸಂಸ್ಕöÈತಿ  ಜನರಿಗೆ ತಲುಪಬೇಕಿದೆ. ತತ್ವಪದವನ್ನು ಭಜನೆಯ ಮೂಲಕ ಅಳವಡಿಸಿ, ಪ್ರಚುರಪಡಿಸಬೇಕಿದೆ’ ಎಂದು ಪ್ರತಿಪಾದಿಸಿದರು.

ಮಾಹೆಯ ಸಹ ಕುಲಪತಿ ನಾರಾಯಣ ಸಭಾಹಿತ್ ಮಾತನಾಡಿ, ಬದಲಾವಣೆ ನಿರಂತರವಾದುದು. ಕಳೆದ ನೂರು ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಭಜನೆಯಲ್ಲಿ ಕೂಡ ಬದಲಾವಣೆಗಳಾಗಿವೆ. ಮಹಾನಗರಗಳಲ್ಲಿ ಭಜನೆ ಬೇರೆಯೇ ರೂಪ ಪಡೆದುಕೊಳ್ಳುತ್ತಿರುವುದು ದುರಂತ ಎಂದರು. 

ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ. ಚಿಕ್ಕಣ್ಣ ಅಧ್ಯಕ್ಷ ಸ್ಥಾನದಿಂದ ಮಾತನಾಡಿ, ವಸಾಹತುಶಾಹಿ ಸಂದರ್ಭದಲ್ಲಿ ಸಾಮಾಜಿಕ ಸಂಘರ್ಷಗಳು ಸಮಸ್ಯೆಗಳು ಸಾಕಷ್ಟು ಎದುರಾಗಿದ್ದವು. ಅಂತಹ  ಸಂದರ್ಭದಲ್ಲಿ ತತ್ವಪದಕಾರರು ಬದುಕಿಗೆ ಮುಖಾಮುಖಿಯಾದರು ಎಂದು ಹೇಳಿದರು. 

ಬದುಕಿನ ನಿಜರೂಪಗಳನ್ನು ಒಳಗೊಂಡ ತತ್ವಪದಗಳು ತನ್ನ ಗೇಯಪ್ರಧಾನವಾದ ಸಂಗೀತದಿಂದ  ಜನರನ್ನು 

ತಲುಪಿದವು. ಆದರೆ ೭೦ರ ದಶಕದವರೆಗೂ ಈ ಪ್ರಕಾರವನ್ನು ಯಾರೂ ಗಂಭೀರವಾಗಿ ಪರಿಗಣಿಸದಿರುವುದು ವಿಪರ್ಯಾಸ ಎಂದರು. ನಾವು ಈಗಾಗಲೇ ತತ್ವಪದಗಳ ೫೦ ಸಂಪುಟಗಳನ್ನು ಹೊರತಂದಿದ್ದೇವೆ. ಬಿಟ್ಟುಹೋಗಿರುವ ತತ್ವಪದಗಳನ್ನು 

ಸಂಗ್ರಹಿಸಿ ಮತ್ತೆ ಪ್ರಕಟಿಸಲಿದ್ದೇವೆ. ಪಾರಿಭಾಷಿಕ ಪದಕೋಶ ಎಂಬ ಬೃಹತ್ ಸಂಪುಟವನ್ನೂ ಹೊರತರುತ್ತಿದ್ದೇವೆ ಎಂದರು.

ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲೆ ವನಿತಾ ಮಯ್ಯ, ಎಂ.ಜಿ.ಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ದೇವಿದಾಸ್ಎಸ್. ನಾಯ್ಕ್, ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕಾರ್ಯಕ್ರಮ ಸಂಯೋಜಿಕ ರವಿರಾಜ್ ಎಚ್.ಪಿ ಉಪಸ್ಥಿತರಿದ್ದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಬಿ.  ಜಗದೀಶ್ ಶೆಟ್ಟಿ ಸ್ವಾಗತಿಸಿದರು. ರಾಘವೇಂದ್ರ ತುಂಗ ಕಾರ್ಯಕ್ರಮ ನಿರೂಪಿಸಿದರು. ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಬೆಂಗಳೂರು ಇದರ ಸದಸ್ಯ ಸಂಚಾಲಕರಾದ ಕಾತ್ಯಾಯಿನಿ ಕುಂಜಿಬೆಟ್ಟು ವಂದಿಸಿದರು.  ರಾಮಾಂಜಿ ಮತ್ತು ಸ್ವಪ್ನ ರಾಜ್ ನಾಡಗೀತೆ ಹಾಡಿದರು. 

ಉದ್ಘಾಟನಾ ಸಮಾರಂಭದ ಬಳಿಕ ೯ ಭಜನಾ ತಂಡಗಳು ಭಾಗವಹಿಸಿದ್ದವು. 

೧.     ಮಹಾಲಕ್ಷ್ಮಿ   ಮೊಗವೀರ ಭಜನಾ ಮಂಡಳಿ, ಕೊಡವೂರು

೨.     ರಾಗರಂಜನಿ ತಂಡ ಕುಂಜಿಬೆಟ್ಟು

೩.     ಶ್ರೀ ಮಹಾಗಣಪತಿ ಭಜನಾ ಮಂಡಳಿ, ತೊಂಭತ್ತು

೪.     ಜಿ.ಎಸ್.ಬಿ ಮಹಿಳಾ ಮಂಡಳಿ, ಉಡುಪಿ

೫.     ಶ್ರೀ ಮಾರಿಕಾಂಬ ದುರ್ಗಾಪರಮೇಶ್ವರಿ ಭಜನಾಮಂಡಳಿ, ಕಿರಾಡಿ

೬.     ಯಕ್ಷಿ ಕಲ್ಲುಕುಟಿಗ ಭಜನಾ ಮಂಡಳಿ, ಕೋಟೇಶ್ವರ

೭.     ದುರ್ಗಾಪರಮೇಶ್ವರಿ ಭಜನಾಮಂಡಳಿ, ಅಂಜಾರು, ಹಿರಿಯಡ್ಕ

೮.     ಸರ್ವೇಶ್ವರಿ ಭಜನಾಮಂಡಳಿ, ಹೊನ್ನಾವರ

೯.     ಬಾಲವಿಕಾಸ ಭಜನಾಮಂಡಳಿ, ಹೊಸಬೆಟ್ಟು, ಸುರತ್ಕಲ್

 ಡಿಸೆಂಬರ್ ೭, ೨೦೨೫ರಂದು ೪ ತಂಡಗಳು ಭಾಗವಹಿಸಿದ್ದವು

೧೦.   ಶ್ರೀ ವೀರಭದ್ರ ಗುರು ಮಾಚಿದೇವ ಭಜನಾಮಂಡಳಿ, ಕಾರ್ಕಳ

೧೧.   ಶ್ರೀ ಬ್ರಹ್ಮಲಿಂಗೇಶ್ವರ ಮಹಿಳಾ ಭಜನಾ ಮಂಡಳಿ, ಕರಂದಾಡಿ

೧೨.   ಶ್ರೀ ಬಾಲಾಜಿ ಕಲಾ ಭಜನಾ ಮಂಡಳಿ, ಪಾಂಡೇಶ್ವರ, ಸಾಸ್ತಾನ

೧೩.   ರಂಗಚಿನ್ನಾರಿಯ ಸ್ವರಚಿನ್ನಾರಿ ಭಜನಾಮಂಡಳಿ, ಕಾಸರಗೋಡು

ಶ್ರೀ ರಮೇಶ್ ಕಲ್ಮಾಡಿ ಹಾಗೂ ಶ್ರೀಮತಿ ಜ್ಯೋತಿ ದೇವಾಡಿಗ ಭಾಗವಹಿಸಿದ ಭಜನಾ ತಂಡಗಳನ್ನು ಪರಿಚಯಿಸಿ ಅವರು ಹಾಡಿದ ಭಜನೆಗಳ ವಿಶ್ಲೇಷಣೆ ಮಾಡಿದರು. ಸಮಾರೋಪ ಸಮಾರಂಭದಲ್ಲಿ ಸಂಗೀತ ಹಾಗೂ ಸಾಂಸ್ಕೃತಿಕ ಚಿಂತಕರಾದ ಶ್ರೀಮತಿ   ಪ್ರತಿಭಾ ಎಂ.ಎಲ್. ಸಾಮಗ ಸಮಾರೋಪ  ಭಾಷಣ ಮಾಡಿದರು. ಶ್ರೀ ಕಾ.ತ. ಚಿಕ್ಕಣ್ಣ ಅಧ್ಯಕ್ಷತೆ ವಹಿಸಿದ್ದರು. ಡಾ.ಬಿ. ಜಗದೀಶ್ ಶೆಟ್ಟಿ ಹಾಗೂ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಉಪಸ್ಥಿತರಿದ್ದರು.

Tuesday, December 2, 2025

ಕರಾವಳಿ ಭಜನಾ ಸಮಾವೇಶ: 2025 ಡಿಸೆಂಬರ್ 06 ಮತ್ತು 07, ಸ್ಥಳ: ಟಿ.ಮೋಹನದಾಸ್ ಪೈ ಅಮೃತ ಸೌಧ, ಎಂ.ಜಿ.ಎಂ ಕಾಲೇಜು, ಉಡುಪಿ

 





ಬಾರ್ಕೂರು - ಮೂಡುಕೇರಿ ಗಂಗಮ್ಮ ರಾಮಚಂದ್ರ ಶಾಸ್ತ್ರಿ ಸ್ಮರಣಾರ್ಥ ನಡೆದ ಚಿತ್ರಕಲಾಸ್ಪರ್ಧೆ, ಸ್ಥಳ: ನೂತನ ರವೀಂದ್ರ ಮಂಟಪ, ಎಂ.ಜಿ.ಎಂ ಕಾಲೇಜು, ದಿನಾಂಕ: 29.11.2025

 














ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಹಾಗೂ ಎಂ.ಜಿ.ಎಂ ಕಾಲೇಜು, ಉಡುಪಿ ಇವರ ಆಶ್ರಯದಲ್ಲಿ ಬಾರ್ಕೂರು ಮೂಡುಕೇರಿ ಗಂಗಮ್ಮ ರಾಮಚಂದ್ರ ಶಾಸ್ತ್ರಿ ಸ್ಮರಣಾರ್ಥ ಚಿತ್ರಕಲಾ ಸ್ಪರ್ಧೆಯನ್ನು ೨೯ ನವಂಬರ್ ೨೦೨೫ ಶನಿವಾರದಂದು ಎಂ.ಜಿ.ಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಏರ್ಪಡಿಸಲಾಯಿತು.

ಸ್ಪರ್ಧೆಯಲ್ಲಿ ಪೂರ್ವಪ್ರಾಥಮಿಕ, ಪ್ರಾಥಮಿಕ, ಪ್ರೌಢ, ಪ.ಪೂ, ಪದವಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.  ಶ್ರೀ ಸಂತೋಷ್ ಪೈ, ಚಿತ್ರಕಲಾ ಶಿಕ್ಷಕ ಶ್ರೀ ರಮೇಶ್ ಅಂಬಾಡಿ, ಡಾ. ಜನಾರ್ದನ ಹಾವಂಜೆ ತೀರ್ಪುಗಾರರಾಗಿದ್ದರು. ಕಾರ್ಯಕ್ರಮ ಸಂಘಟಕರಾಗಿ ಸ್ಪರ್ಧೆಯನ್ನು ಆಯೋಜಿಸುವಲ್ಲಿ ಸಹಕರಿಸಿದ ಡಾ. ಜನಾರ್ದನ ಹಾವಂಜೆ ಮಾತನಾಡಿ ವಿದ್ಯಾರ್ಥಿಗಳು ಬಹುಮಾನಕ್ಕಾಗಿ ಭಾಗವಹಿಸುವುದನ್ನು ಬಿಟ್ಟು  ಸ್ಪರ್ಧಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು.  ಮಕ್ಕಳಲ್ಲಿ ಕಲೆಯ ಬಗೆಗಿನ ಆಸಕ್ತಿ ವೃದ್ಧಿಸಲು ಪೋಷಕರು ಹೆಚ್ಚಿನ  ಪ್ರೋತ್ಸಾಹವನ್ನು ನೀಡುವುದಕ್ಕೆ ತುಂಬಾ ಹೆಮ್ಮೆ ಎನಿಸಿದೆ. ಇನ್ನಷ್ಟು ಹೊಸ ಹೊಸ ರೀತಿಯಲ್ಲಿ ಚಿತ್ರಕಲೆಯಲ್ಲಿ ಮಕ್ಕಳು ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಹಿರಿಯ ಸಮಾಜ ಸೇವಕ ವಿಶ್ವನಾಥ ಶೆಣೈ, ತೀರ್ಪುಗಾರರಾದ ರಮೇಶ್ ಅಂಬಾಡಿ, ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಬ್ರಹ್ಮಾವರ  ಎಸ್.ಎಂ.ಎಸ್. ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಡಾ. ವೈ ರವೀಂದ್ರನಾಥ ರಾವ್ ಹಾಗೂ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಅವರು ನಗದು ಮತ್ತು ಪ್ರಮಾಣಪತ್ರಗಳನ್ನು ವಿತರಿಸಿದರು. ಕಾರ್ಯಕ್ರಮ ಸಂಘಟಕರಾದ ಡಾ.ಜನಾರ್ದನ ಹಾವಂಜೆ ಕಾರ್ಯಕ್ರಮ ನಿರ್ವಹಿಸಿದರು. ಆರ್.ಜಿ.ಪೈ ಹಾಗೂ ಆರ್.ಆರ್.ಸಿಯ ಸಿಬ್ಬಂದಿಗಳು ಕಾರ್ಯಕ್ರಮ ಆಯೋಜಿಸಿದ್ದರು. ಸೀತಾರಾಮ ಶಾಸ್ತ್ರಿ ಬಾರ್ಕೂರು ಇವರು ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ  ಪೆನ್ನು ಹಾಗೂ ತಿಂಡಿಯನ್ನು ನೀಡಿ ಸಹಕರಿಸಿದರು. 

 

ವಿಜೇತರ ವಿವರ:

೧ ರಿಂದ  ೪ನೇ ತರಗತಿ (ಪೂರ್ವ ಪ್ರಾಥಮಿಕ) ; ವಿಷಯ :  ಐಚ್ಛಿಕ

೧. ದೇಶ್ನ ಕುಲಾಲ್, ೪ನೇ ತರಗತಿ, ಎಸ್.ಆರ್. ಪಬ್ಲಿಕ್ ಸ್ಕೂಲ್, , ಹೆಬ್ರಿ (ಪ್ರಥಮ)

೨. ಆರ್ಯ ಪೈ, ೪ನೇ ತರಗತಿ, ಪೋದಾರ್ ಇಂಟರ್ ನ್ಯಾಶನಲ್ ಸ್ಕೂಲ್, ಪೆರಂಪಳ್ಳಿ, ಉಡುಪಿ (ದ್ವಿತೀಯ)

೩. ಸಮೃದ್ಧಿ ವಿ. ಶೆಟ್ಟಿ, ೨ನೇ ತರಗತಿ, ಮುಕುಂದಕೃಪಾ ಆಂಗ್ಲಮಾಧ್ಯಮ ಶಾಲೆ, ಉಡುಪಿ (ತೃತೀಯ)

೫ ರಿಂದ ೭ನೇ ತರಗತಿ; (ಪ್ರಾಥಮಿಕ) ವಿಷಯ :  ಐಚ್ಛಿಕ

೧. ನಿಹಾರ್  ಜೆ. ಎಸ್. ,೬ನೇ ತರಗತಿ, ಜಿ.ಎಂ.ವಿ.ಪಿ.ಎಸ್.,ಬ್ರಹ್ಮಾವರ  (ಪ್ರಥಮ)

೨. ಹರ್ಷಿತಾ ಪ್ರಭು,  ೭ನೇ ತರಗತಿ, ವಿದ್ಯೋದಯ ಪಬ್ಲಿಕ್ ಸ್ಕೂಲ್, ಉಡುಪಿ ,(ದ್ವಿತೀಯ)

೩. ಕನಿಷ್ಕ , ೭ನೇ ತರಗತಿ, ವಿದ್ಯೋದಯ ಪಬ್ಲಿಕ್ ಸ್ಕೂಲ್, ಉಡುಪಿ  (ತೃತೀಯ)

೪. ಪ್ರಭಾತ್ ಉಡುಪ, ೫ನೇ ತರಗತಿ, ಅಮೃತ ಭಾರತಿ ವಿದ್ಯಾಕೇಂದ್ರ, ಹೆಬ್ರಿ (ಸಮಾಧಾನಕರ)

೮ ರಿಂದ ೧೦ನೇ ತರಗತಿ : ವಿಷಯ:  ಉಡುಪಿ ಪರ್ಯಾಯ ಅಥವಾ ಹಳ್ಳಿಯ ದೃಶ್ಯ

೧. ಪ್ರೇರಿತ ಯು., ೮ನೇ ತರಗತಿ, ಟಿ.ಎ.ಪೈ. ಇಂಗ್ಲಿಷ್ ಮೀಡಿಯಂ ಸ್ಕೂಲ್, ಕುಂಜಿಬೆಟ್ಟು, ಉಡುಪಿ (ಪ್ರಥಮ)

೨. ವಿನೀಶ್ ಆಚಾರ್ಯ, ೮ನೇ ತರಗತಿ, ಎಸ್.ಆರ್. ಪಬ್ಲಿಕ್ ಸ್ಕೂಲ್, ಹೆಬ್ರಿ ( ದ್ವಿತೀಯ)

೩. ಪ್ರಥಮ್ ಪಿ. ಕಾಮತ್, ೯ನೇ ತರಗತಿ, ಶಾಂತಿನಿಕೇತನ ಇಂಗ್ಲಿಷ್ ಮೀಡಿಯಂ ಸ್ಕೂಲ್, ಕುಕ್ಕಿಕಟ್ಟೆ, ಉಡುಪಿ (ತೃತೀಯ)

೪. ವಂಶಿತ್ ಆಚಾರ್ಯ, ೯ನೇ ತರಗತಿ, ಕೆ.ಪಿ.ಎಸ್. ಮುನಿಯಾಲ್, ಉಡುಪಿ (ಸಮಾಧಾನಕರ)

ಪದವಿಪೂರ್ವ ವಿಭಾಗ : ವಿಷಯ: ಮಹಾಭಾರತ ದೃಶ್ಯ ಅಥವಾ ಪರಿಸರ ಮಾಲಿನ್ಯ

೧. ಪ್ರತಿಷ್ಟ ಶೇಟ್, ದ್ವಿತೀಯ ಪಿಯುಸಿ, ವಿದ್ಯೋದಯ ಪದವಿಪೂರ್ವ ಕಾಲೇಜು, ಉಡುಪಿ (ಪ್ರಥಮ)

೨. ಶರಧಿ, ದ್ವಿತೀಯ ಪಿಯುಸಿ, ವಿವೇಕ ಪದವಿಪೂರ್ವ ಕಾಲೇಜು, ಕೋಟ (ದ್ವಿತೀಯ)

೩. ದೀಕ್ಷ, ಪ್ರಥಮ ಪಿ.ಯು.ಸಿ,  ವಿವೇಕ ಪದವಿಪೂರ್ವ ಕಾಲೇಜು, ಕೋಟ  (ತೃತೀಯ)

೪. ವಿಶ್ವಾಸ್ ಎಸ್. ನಾಯ್ಕ್, ಪ್ರ. ಪಿ.ಯು.ಸಿ, ಎಂ.ಜಿ.ಎಂ ಪಿ.ಯು ಕಾಲೇಜು,ಉಡುಪಿ  (ಸಮಾಧಾನಕರ)

ಪದವಿ ವಿಭಾಗ:  ವಿಷಯ: ರಾಮಾಯಣ ದೃಶ್ಯ ಅಥವಾ ರಾಷ್ಟ್ರಕವಿ ಗೋವಿಂದ ಪೈ

೧. ರಾಘವೇಂದ್ರ ಮರವಂತೆ,  ಚಿತ್ರಕಲಾ ಮಂದಿರ, ಕಲಾಶಾಲೆ, ಉಡುಪಿ(ಪ್ರಥಮ)

೨. ರೂಪಕ್, ಚಿತ್ರಕಲಾ ಮಂದಿರ, ಕಲಾಶಾಲೆ, ಉಡುಪಿ (ದ್ವಿತೀಯ)

೩. ಸುಶ್ಮಿತಾ, , ಪೂರ್ಣಪ್ರಜ್ಞ ಕಾಲೇಜು, ಉಡುಪಿ (ತೃತೀಯ)

Monday, December 1, 2025

ದಿನಾಂಕ:29.11.2025ರಂದು ನಡೆದ ಡಾ. ಯು.ಪಿ ಉಪಾಧ್ಯಾಯ ಹಾಗೂ ಡಾ. ಸುಶೀಲಾ ಪಿ. ಉಪಾಧ್ಯಾಯ ಪ್ರಶಸ್ತಿ ಕಾರ್ಯಕ್ರಮ

 




                                                                            

ಸಕಾರಾತ್ಮಕ ಆಲೋಚನೆ ಇಚ್ಛಾಶಕ್ತಿಯ ಮೂಲಕ ಇಂಗ್ಲಿಷಿನ ಶಬ್ದಗಳಿಗೆ ಪರ್ಯಾಯವಾಗಿ ಕನ್ನಡದಲ್ಲೇ ಇರುವ ಪದ ಅಥವಾ ಹೊಸ ಪದಗಳ ಸೃಷ್ಟಿಯಾಗಬೇಕಿದೆ. ಅಂತಹ ಹೊಸ ಚಿಗುರು ಮೂಡಿಸುವ ಕಾರ್ಯ ಶಿಕ್ಷಕರಿಂದ ಆಗಬೇಕಿದೆ. ಏಕೆಂದರೆ ಭಾಷಾ ತಜ್ಞರುಗಳು ಇರುವ ನಾಡಿನಲ್ಲೇ ಕನ್ನಡ ಭಾಷೆಯ ಗತಿ, ನಡೆ, ಹೆಜ್ಜೆ ತಪ್ಪುತ್ತಿದೆ. ಶಿಕ್ಷಣದ  ಮೂಲಕ ವಿದ್ಯಾರ್ಥಿಗಳಿಗೆ  ಸರಿಯಾದ ಭಾಷಾ ಸಂವಹನ  ಕಲಿಸದಿದ್ದರೆ ಭವಿಷ್ಯದಲ್ಲಿ ತೊಡಕಾಗಲಿದೆ ಎಂದು ಕವಿ, ವಿದ್ವಾಂಸ ಕಬ್ಬಿನಾಲೆ ವಸಂತ ಭಾರದ್ವಾಜ್ ಹೇಳಿದರು. ಅವರು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ) ಇವರ ಸಂಯುಕ್ತ ಆಶ್ರಯದಲ್ಲಿ ನವಂಬರ್ ೨೯, ೨೦೨೫ ಶನಿವಾರದಂದು ಎಂ.ಜಿ.ಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಡಾ. ಯು.ಪಿ. ಉಪಾಧ್ಯಾಯ –ಡಾ. ಸುಶೀಲಾ ಪಿ. ಉಪಾಧ್ಯಾಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ  ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಕರಾವಳಿಯಲ್ಲಿ ಯಕ್ಷಗಾನ ವಿಷಯದಲ್ಲಿ ೬೦ ಪಿಎಚ್.ಡಿ ಪ್ರಬಂಧಗಳು ಬಂದಿವೆ. ರಾಜ್ಯದಾದ್ಯಂತ ದಾಸ ಸಾಹಿತ್ಯದಲ್ಲಿ  ಪಿಎಚ್.ಡಿ ಸಂಶೋಧನೆ ನಡೆದಿದೆ. ಆದರೆ ಮಗಳೂರು ವಿಶ್ವವಿದ್ಯಾನಿಲಯದಲ್ಲಿ ದಾಸ ಸಾಹಿತ್ಯದಲ್ಲಿ ಒಂದೂ ಪಿಎಚ್ ಡಿ ಸಂಶೋಧನೆ ನಡೆದಿಲ್ಲ ಎಂದರು.  ಹಳೆಯ ಶಬ್ದಗಳನ್ನು ಕಲಿಯುವುದರ ಜೊತೆಗೆ ಹೊಸ ಶಬ್ದ ಸೃಷ್ಟಿಗೂ ಸಾಧ್ಯತೆಗಳಿವೆ. ಆಧುನಿಕ ಕಾಲದಲ್ಲಿ ಅನೇಕ ಹೊಸ ಶಬ್ದಗಳು ಹುಟ್ಟಿಕೊಳ್ಳುತ್ತವೆ. ವೈದ್ಯಕೀಯ, ಎಂಜಿನಿಯರಿಂಗ್, ಕ್ಷೇತ್ರಗಳಿಗೆ ಸಂಬಂಧಿಸಿದ ಪಾರಿಭಾಷಿಕ ಪದಗಳು ಹುಟ್ಟಿಕೊಳ್ಳುತ್ತವೆ. ಸೃಜನಶೀಲವಾಗಿ ಆಲೋಚನೆ ಮಾಡಿದರೆ ಹೊಸ ಹೊಸ ಪದಗಳನ್ನು ಸೃಷ್ಟಿಸಬಹುದಾಗಿದೆ. ಆದರೆ ಅದನ್ನು ಪ್ರೋತ್ಸಾಹಿಸುವ ವ್ಯವಸ್ಥೆ ನಮ್ಮಲ್ಲಿಲ್ಲ. ಅದಕ್ಕಾಗಿ ಸರ್ಕಾರ ಆಡಳಿತ ಪದಗಳನ್ನು ರಚಿಸಬೇಕು ಎಂದರು. ಸಾಹಿತ್ಯದಲ್ಲಿ ಹೊಳವು ಮತ್ತು ಕಲೆ ಮತ್ತು ಸಂಸ್ಕöÈತಿಯ ಸಂಶೋಧನೆಯು ತಪಸ್ಸಿನ ರೀತಿಯಲ್ಲಿ ನಡೆಯುತ್ತದೆ ಎಂದು ಅವರು ಹೇಳಿದರು.                    

ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ ವನಿತಾ ಮಯ್ಯ ಅಧ್ಯಕ್ಷತೆ ವಹಿಸಿದ್ದರು, ತುಳು ನಿಘಂಟು ತಜ್ಞ ಪದ್ಮನಾಭ ಕೆ ಕುಣ್ಣಾಯ ಪ್ರಶಸ್ತಿ ಪುರಸ್ಕöÈತರ ಕುರಿತು ಅಭಿನಂದನಾ ಭಾಷಣ ಮಾಡಿದರು.  ಹಿರಿಯ ವಿದ್ವಾಂಸರು  ಹಾಗೂ ಜರ್ಮನ್ ಭಾಷಾ ತಜ್ಞರಾದ ಡಾ. ಎನ್.ಟಿ ಭಟ್ ಪ್ರಶಸ್ತಿ ಪ್ರದಾನ ಮಾಡಿದರು.  ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ  ಡಾ.ಬಿ. ಜಗದೀಶ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ ಶಂಕರನಾರಾಯಣ ಪ್ರಾರ್ಥಿಸಿದರು. ಆರ್.ಆರ್.ಸಿ ಸಹ ಸಂಶೋಧಕರಾದ ಡಾ. ಅರುಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.