Tuesday, June 30, 2026

ಉಡುಪಿ ಯಕ್ಷಗಾನ ಕೇಂದ್ರ ಸಲಹಾ ಸಮಿತಿಯಿಂದ ಹುಟ್ಟು ಹಬ್ಬ ಆಚರಣೆ (೨೫.೦೬.೨೦೨೬)

 

ಮಾಹೆ ಸಂಯೋಜಿತ ಉಡುಪಿ ಯಕ್ಷಗಾನ ಕೇಂದ್ರ, ಇಂದ್ರಾಳಿ ಇದರ ಸಲಹಾ ಸಮಿತಿಯಿಂದ ಮಾಹೆಯ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳರ 85ನೇ ಜನ್ಮದಿನೋತ್ಸವವನ್ನು ಜೂನ್ 25ರಂದು ಆಚರಿಸಲಾಯಿತು.

ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ ಶೆಟ್ಟಿ ಸ್ವಾಗತಿಸಿದರು. ಅಧ್ಯಕ್ಷ ಶ್ರೀ ಪಳ್ಳಿ ಕಿಶನ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿ ಶುಭ ಹಾರೈಸಿದರು. ಶ್ರೀ ಭುವನ ಪ್ರಸಾದ್ ಹೆಗ್ಡೆ ಸನ್ಮಾನ ಪತ್ರ ವಾಚಿಸಿ, ಲಿಂಗ ಸಮಾನತೆಯಲ್ಲಿ ವಿಶ್ವದಲ್ಲೇ ಪ್ರಥಮ ಸ್ಥಾನ ಪಡೆದ ಮಾಹೆಯನ್ನು ಅಭಿನಂದಿಸಿದರು.

ಯಕ್ಷಸ್ಮರಣಿಕೆ, ಶಾಲು, ಹಾರ, ಪೇಟ ತೊಡಿಸಿ ಡಾ. ಬಲ್ಲಾಳರನ್ನು ಅಭಿನಂದಿಸಲಾಯಿತು. ಸನ್ಮಾನಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ ಡಾ. ಬಲ್ಲಾಳರು, ಮಾಹೆ ಸದಾ ಯಕ್ಷಗಾನ ಕೇಂದ್ರವನ್ನು ಪ್ರೋತ್ಸಾಹಿಸುತ್ತದೆ ಎಂದರು. ಸದಸ್ಯರಾದ ಮೀನಾ ಲಕ್ಷ್ಮಣಿ ಮತ್ತು ಡಾ. ಶೈಲಜಾ ಭಟ್, ಶ್ರೀ ವಿಶ್ವನಾಥ ಶೆಣೈ, ಪ್ರೊ. ಎಸ್. ವಿ. ಉದಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಮಂಜುನಾಥ ಮಯ್ಯ ವಂದಿಸಿದರು.

No comments: