ಹಿರಿಯ ವಿದ್ವಾಂಸ ಡಾ. ಪಾದೇಕಲ್ಲು ವಿಷ್ಣು ಭಟ್ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ವಿವಿಧ ಪ್ರಾಂತ್ಯದ ಭಾರತೀಯ ಜನಪದಕಲೆಗಳನ್ನು ಉಡುಪಿಗೆ ಪರಿಚಯಿಸುತ್ತಿರುವುದು ನಿಜಕ್ಕೂ ಸಂತೋಷದಾಯಕ ವಿಚಾರ. ಪಿಥೋರ ಜನಪದ ಕಲೆಯನ್ನು ನಾನೇ ಮೊದಲಬಾರಿಗೆ ಕೇಳುತ್ತಿರುವೆ. ಇಂತಹ ಕಲೆಗಳು ದೇಶವ್ಯಾಪಿಯಾಗಿ ಪ್ರಸಿದ್ಧಿಯಾಗಲಿ ಎಂದರು. ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕೇಂದ್ರದ ಸಹ ಸಹಸಂಶೋಧಕ ಡಾ. ಅರುಣ್ ಕುಮಾರ್, ಫೌಂಡೇಶನ್ ಅಧ್ಯಕ್ಷರಾದ ಶ್ರೀ ಹಾವಂಜೆ ಮಂಜುನಾಥ ರಾವ್ ಉಪಸ್ಥಿತರಿದ್ದರು. ಕಾರ್ಯಾಗಾರದ ಸಂಯೋಜಕರಾದ ಡಾ. ಜನಾರ್ದನ ಹಾವಂಜೆ ಜನಪದ ಕಲೆಗಳ ಸರಣಯಲ್ಲಿ ೨೦ನೆಯ ಕಾರ್ಯಗಾರ ಇದಾಗಿದ್ದು ಇದರ ಮುಖೇನ ಕರಾವಳಿಯ ಕಲಾಸಕ್ತರು ದೇಶೀಯ ಕಲೆಗಳ ಪರಿಚಯವನ್ನು ಹೊಂದುವುದರ ಜೊತೆಗೆ ಅದರ ನೈಸರ್ಗಿಕ ಕಲೆಗಳ ತಾಂತ್ರಿಕತೆ ವಿನ್ಯಾಸ ರೂಪಗಳನ್ನು ಕಲಿಯುವುದಕ್ಕಾಗಿ ಹಮ್ಮಿಕೊಳ್ಳಲಾಗಿದೆ ಎಂದರು. ಪಿಥೋರ ಚಿತ್ರಕಲೆಯನ್ನು ಗುಜರಾತಿನ ರಥ್ವ ಜನಾಂಗದ ನಾರಾನ್ ಬಾಯಿ ಹರಿಬಾಯಿ ರಥ್ವ ಕಲಿಸಿಕೊಟ್ಟರು. ಡಾ. ಹಾವಂಜೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.








No comments:
Post a Comment