ಜಪಾನ್ ದೇಶದ ಅಂತಾರಾಷ್ಟ್ರೀಯ ಸಮುದಾಯ ಸೇವಾ ಕಾರ್ಯಗಳ (CWC)
ಮುಖ್ಯಸ್ಥರಾದ ಪ್ರೊ. ಮಸಕಟೋಕಾ-ಕಾಂಬೋಡಿಯಾದ ಸಂಸ್ಕೃತಿ ಮತ್ತು ಕಲಾ ಮಂತ್ರಾಲಯದ ಸಹಾಯಕ ಸಚಿವರಾದ ಶ್ರೀ ಎಕ್ ಬುಂತಾ, CWCಸಲಹೆಗಾರರಾದ ಶ್ರೀಮತಿ ಮನೋರಮ ಭಟ್ ಉಜಿರೆ, ಶ್ರೀ ಶ್ರುತ ಕೀರ್ತಿ, ಉಪನ್ಯಾಸಕರು ಹಾಗೂ ಕಟೀಲು ಮೇಳದ ಕಲಾವಿದರು ದಿನಾಂಕ 16.02.2026ರಂದು ಯಕ್ಷಗಾನ ಕೇಂದ್ರ ಇಂದ್ರಾಳಿ ಉಡುಪಿಗೆ ಭೇಟಿ ನೀಡಿ ಕೇಂದ್ರದ ವಿದ್ಯಾರ್ಥಿಗಳ ಯಕ್ಷಗಾನ ಪ್ರದರ್ಶನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಕೇಂದ್ರದ ಆಡಳಿತಾಧಿಕಾರಿ ಡಾ ಬಿ. ಜಗದೀಶ್ ಶೆಟ್ಟಿ, ಸಲಹಾ ಸಮಿತಿ ಸದಸ್ಯರಾದ ಶ್ರೀ ವಿ.ಜಿ ಶೆಟ್ಟಿ, ಕೇಂದ್ರದ ಗುರುಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
No comments:
Post a Comment