ಶ್ರೀಮತಿ ರತ್ನಮಾಲಾ ಅವರು ‘ತುಳುನಾಡಿನ ಸ್ತ್ರೀದೈವಗಳ ಚಾರಿತ್ರಿಕ ಹಾಗೂ ಸಾಂಸ್ಕöÈತಿಕ ಅಧ್ಯಯನ’ ಎಂಬ ವಿಷಯದ ಕುರಿತಾಗಿ ನಡೆಸಿದ ಸಂಶೋಧನೆಗೆ ಮಣಿಪಾಲ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿದೆ. ಅವರು ಈ ಸಂಶೋಧನೆಯನ್ನು ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ (ಆರ್.ಆರ್.ಸಿ) ಮೂಲಕ, ಪ್ರೊ. ಸುರೇಶ್ ರೈ. ಕೆ, ಪ್ರಾಂಶುಪಾಲರು ಹಾಗೂ ಇತಿಹಾಸ ಪ್ರಾಧ್ಯಾಪಕರು, ಎಂ.ಪಿ.ಎಂ. ಸರಕಾರಿ ಪ್ರಥಮ ದರ್ಜೆ ಕಾಲೇಜು, ಕಾರ್ಕಳ ಅವರ ಮಾರ್ಗದರ್ಶನದಲ್ಲಿ ಹಾಗೂ ಎಂ.ಜಿ.ಎಂ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಪುತ್ತಿ ವಸಂತ ಕುಮಾರ್ ಅವರ ಸಹ ಮಾರ್ಗದರ್ಶನದಲ್ಲಿ ನಡೆಸಿದ್ದರು. ಇವರು ಪ್ರಸ್ತುತ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ, ತೆಂಕನಿಡಿಯೂರು ಕಾಲೇಜಿನ ಕನ್ನಡ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಡಾ.ಬಿ. ಜಗದೀಶ್ ಶೆಟ್ಟಿ
ಆಡಳಿತಾಧಿಕಾರಿ

No comments:
Post a Comment