Friday, July 10, 2026

ನಾಡೋಜ ಡಾ| ಕಯ್ಯಾರ ಸಮಗ್ರ ಸಂಪುಟಕ್ಕೆ ಬಿಡಿಲೇಖನಗಳ ಸಂಗ್ರಹ

ಮನವಿ

ನಾಡೋಜ ಡಾ| ಕಯ್ಯಾರ ಕಿಂಞ್ಞಣ್ಣ ರೈ ಅವರು ಈ ನಾಡಿನ ಹೆಸರಾಂತ ಕವಿ, ಸ್ವಾತಂತ್ರ ಸೇನಾನಿ. ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ. ಶತಾಯುಷಿ, ಕರ್ನಾಟಕ ಏಕೀಕರಣದ ಹೋರಾಟಗಾರ. ಕಯ್ಯಾರರು ಕಥೆ, ಶಿಶುಗೀತೆ, ಕವನ, ನಾಟಕ, ಪಠ್ಯಪುಸ್ತಕ, ವ್ಯಾಕರಣ, ಆತ್ಮಕಥನ, ಜೀವನ ಚರಿತ್ರೆ, ಸಂöಸ್ಕೃತ ಭಾಷಾಂತರ ರೂಪದಲ್ಲಿ ೩೭ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ. ಅಲ್ಲದೆ ಹಲವು  ಬಿಡಿ ಲೇಖನಗಳನ್ನು ಬರೆದಿದ್ದಾರೆ. ಅದೆಲ್ಲವನ್ನೂ ಕ್ರೋಢೀಕರಿಸಿ ‘ಕಯ್ಯಾರರ ಸಮಗ್ರ ಸಂಪುಟ’ವನ್ನು ರಚಿಸುವ ಯೋಜನೆಯಿದೆ
ಆದುದರಿಂದ, ಅವರು ಬರೆದ ಬಿಡಿ ಲೇಖನ, ಭಾವಚಿತ್ರ, ಭಾಗವಹಿಸಿದ ಸಭೆ ಸಮಾರಂಭಗಳ ಆಮಂತ್ರಣ ಪತ್ರಿಕೆ, ಪತ್ರಿಕಾ ತುಣುಕುಗಳು ಅವರ ಕುರಿತ ಲೇಖನಗಳು, ಕವಿತೆಗಳು, ಸಂಶೋಧನಾ ಪ್ರಬಂಧಗಳು ಮತ್ತು ಅವರ ಯಾವುದೇ ಸಾಹಿತ್ಯಿಕ, ಏಕೀಕರಣದ ಹೋರಾಟ, ಸಾಮಾಜಿಕ ಕಾರ್ಯಕ್ರಮಗಳ ಮುದ್ರಿತ ಅಥವಾ ಹಸ್ತಲಿಖಿತ ಬರಹಗಳಿದ್ದಲ್ಲಿ ತಾವು ದಯವಿಟ್ಟು ಕೆಳಗಿನ ವಿಳಾಸಕ್ಕೆ ಕಳುಹಿಸಿಕೊಡಬೇಕಾಗಿ ವಿನಂತಿ.

No comments: