Thursday, May 21, 2026

ಯಕ್ಷಗಾನ ಕೇಂದ್ರ, ಇಂದ್ರಾಳಿ ಉಡುಪಿ ಇದರ ೨೦೨೬-೨೦೨೭ನೇ ಸಾಲಿನ ವಿದ್ಯಾರ್ಥಿಗಳ ಆಯ್ಕೆ ಸಭೆ

 





ಯಕ್ಷಗಾನ ಕೇಂದ್ರ, ಇಂದ್ರಾಳಿ ಇದರ ೨೦೨೬-೨೦೨೭ನೇ ಸಾಲಿನ ಯಕ್ಷಶಿಕ್ಷಣದೊಂದಿಗೆ ಗುರುಕುಲಮಾದರಿಯ  ವಿದ್ಯಾಭ್ಯಾಸಕ್ಕಾಗಿ  7ನೇ ತರಗತಿಯಿಂದ   10ನೇ  ತರಗತಿವರೆಗಿನ  ಆಸಕ್ತ  ವಿದ್ಯಾರ್ಥಿಗಳಿಂದ  ಅರ್ಜಿಗಳನ್ನು ಆಹ್ವಾನಿಸಿದ್ದು,  ಆಯ್ಕೆಯಾದ ವಿದ್ಯಾರ್ಥಿಗಳ ಹಾಗೂ ಪೋಷಕರ ಸಭೆಯನ್ನು ನಡೆಸಲಾಯಿತು. ಕೇಂದ್ರದ ಸಲಹಾ ಸಮಿತಿ ಅಧ್ಯಕ್ಷರಾದ  ಪಳ್ಳಿ ಕಿಶನ್ ಹೆಗ್ಡೆ ವಿದ್ಯಾರ್ಥಿಗಳಿಗೆ  ಕೇಂದ್ರದಲ್ಲಿ ವಿದ್ಯಾರ್ಥಿಗಳ ಶಿಸ್ತು, ನಿಯಮ ಪಾಲನೆಯ ಕುರಿತು ಮಾಹಿತಿ ನೀಡಿ ಶುಭ ಹಾರೈಸಿದರು. ಯಕ್ಷಗಾನ ಕೇಂದ್ರದ ಸಲಹಾಸಮಿತಿ ಸದಸ್ಯರಾದ ಭುವನ ಪ್ರಸಾದ್ ಹೆಗ್ಡೆ ಅವರು ವಿದ್ಯಾರ್ಥಿಗಳು ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿ ಮುಂದೆ ದೇಶದ ಉತ್ತಮ ಪ್ರಜೆಯಾಗುವಂತೆ  ತಮ್ಮ ಜೀವನವನ್ನು ರೂಪಿಸಿಕೊಳ್ಳುವಂತೆ ಕಿವಿಮಾತು ಹೇಳಿದರು. ಕೇಂದ್ರದ ಆಡಳಿತಾಧಿಕಾರಿ ಡಾ.ಬಿ ಜಗದೀಶ್ ಶೆಟ್ಟಿ ಅವರು ಕೇಂದ್ರ ಬೆಳೆದುಬಂದ   ಕುರಿತು ವಿದ್ಯಾರ್ಥಿಗಳಿಗೆ  ಮಾಹಿತಿ ನೀಡಿದರು. ಕೇಂದ್ರದ ಗುರುಗಳಾದ ಉಮೇಶ್ ಸುವರ್ಣ, ಕೃಷ್ಣಮೂರ್ತಿ ಭಟ್, ಬಸವ ಮರಕಾಲ, ವಿದ್ಯಾರ್ಥಿಗಳು   ಯಕ್ಷಗಾನ ತರಬೇತಿಯ  ಕುರಿತು ಸಲಹೆ ಸೂಚನೆ ನೀಡಿದರು.  

No comments: