ರಾಷ್ಟ್ರಕವಿ ಗೋವಿಂದ
ಪೈ ಸಂಶೋಧನ
ಕೇಂದ್ರದ ಮೂಲಕ
ಕೊಡಮಾಡುವ 2025ನೇ
ಸಾಲಿನ ‘ಇನಾಂದಾರ್
ಪ್ರಶಸ್ತಿ’ಯನ್ನು ಪ್ರಸಿದ್ಧ
ಲೇಖಕಿ ಡಾ.
ಗೀತಾ ವಸಂತ
ಅವರ ‘ತೆರೆದಷ್ಟೂ
ಅರಿವು ಸಾಹಿತ್ಯಕ
ಒಳನೋಟಗಳು ವಿಮರ್ಶಾ
ಕೃತಿಗೆ ಎಂ.ಜಿ.ಎಂ
ಕಾಲೇಜಿನ ಮುದ್ದಣ
ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ
ನೀಡಿ ಗೌರವಿಸಲಾಯಿತು. ಪ್ರಶಸ್ತಿಯನ್ನು
ಸ್ವೀಕರಿಸಿ ಮಾತನಾಡಿದ
ಅವರು ‘ಸಾಹಿತ್ಯ
ಪರಂಪರೆಯ ಘನತೆಯನ್ನು,
ಸೃಜನಶೀಲತೆಯ ವಿರಾಟ್
ಸ್ವರೂಪವನ್ನು ಮನದಲ್ಲಿಟ್ಟುಕೊಂಡು
ವಿಮರ್ಶೆ ನಡೆಸಬೇಕಾಗುತ್ತದೆ.
ಸಾಂಸ್ಕöÈತಿಕ
ಸತ್ಯದ ಒಳಹರಿವನ್ನು
ಕಂಡುಹಿಡಿಯುವ ಕಣ್ಣು
ವಿಮರ್ಶಕನಿಗೆ ಇರಬೇಕು.
ವಿಮರ್ಶೆ ಎನ್ನುವುದು
ದೊಡ್ಡ ಸಾಂಸ್ಕöÈತಿಕ
ಜವಾಬ್ದಾರಿ, ನೋಡುವುದು,
ತೋರುವುದು, ಕಾಣುವುದು
ಬೇರೆ ಬೇರೆ
ಇರುತ್ತದೆ. ಅದುವೇ
ಕಾಣ್ಕೆ, ನೋಟ
ಕ್ರಮಗಳನ್ನು ಸೃಷ್ಟಿಸುವುದು
ವಿಮರ್ಶೆಯ ಕೆಲಸ’ ಎಂದು
ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ
ಭಾಗವಹಿಸಿದ ಡಾ.
ಶಿವರಾಮ ಕಾರಂತ
ಟ್ರಸ್ಟ್ ಅಧ್ಯಕ್ಷರಾದ
ಡಾ. ಗಣನಾಥ
ಶೆಟ್ಟಿ ಎಕ್ಕಾರು
ಅವರು ಮಾತನಾಡಿ,
ಸಾಮಾನ್ಯ ವ್ಯಕ್ತಿಯ
ವ್ಯಕ್ತಿತ್ವವನ್ನು ರೂಪಿಸುವುದೇ
ಮಾನವ ಸಂಪನ್ಮೂಲ.
ಅದರ ಅಭಿವೃದ್ಧಿಯಲ್ಲಿ
ಸಾಹಿತ್ಯದ ಪಾತ್ರ
ಹಿರಿದು, ಜ್ಞಾನ,
ಕೌಶಲ, ಮೌಲ್ಯವನ್ನು
ಸಾಹಿತ್ಯ ಒಳಗೊಂಡಿರುತ್ತದೆ.
ಆ ಮೂಲಕ
ವ್ಯಕ್ತಿತ್ವವನ್ನು ರೂಪಿಸಲು
ಅದು ಸಹಕಾರಿಯಾಗಿದೆ
ಎಂದರು. ಕಲ್ಪನಾಂಶ,
ಭಾವಾಂಶ, ರೂಪಾಂಶ,
ಬೌದ್ಧಿಕಾಂಶಗಳು ಸಾಹಿತ್ಯದ
ನಾಲ್ಕು ಅಂಶಗಳು.
ಮುದ್ದಣನ ಸಾಹಿತ್ಯದಲ್ಲಿ
ಅವುಗಳನ್ನು ಕಾಣಬಹುದು.
ಆಧುನಿಕ ಸಾಹಿತ್ಯ
ಪ್ರವೇಶವಾದ ಕುರುಹನ್ನು
ಮುದ್ದಣನ ಸಾಹಿತ್ಯದಲ್ಲಿ
ನೋಡಬಹುದು. ವಿಮರ್ಶಕನ
ದೃಷ್ಟಿಯಿಂದ ಸಂವಾದದ
ದೃಷ್ಟಿಯಿಂದ ಮುದ್ದಣನು
ತನ್ನ ‘ರಾಮಾಶ್ವಮೇಧ’ ಕೃತಿಯನ್ನು
ರಚಿಸಿದ್ದಾನೆ. ಆವನ
ಕಾವ್ಯದ ಶೈಲಿ,
ವೈಶಿಷ್ಟ÷್ಯಗಳು
ಮುಂದಿನ ಕವಿಗಳಿಗೆ
ಹೊಸ ಪ್ರಕಾರ
ಸೃಷ್ಟಿಸಲು ಪ್ರೇರಣೆಯಾಯಿತು
ಎಂದರು. ಆಧುನಿಕ
ಸಾಹಿತ್ಯವು ಪ್ರಜಾಪ್ರಭುತ್ವದ
ಚಿಂತನಾ ಕ್ರಮದಿಂದ
ಪ್ರಶ್ನಿಸುವ ಮನೋಭಾವವನ್ನು
ಹುಟ್ಟುಹಾಕಿದೆ. ಮುದ್ದಣನ
ಕಾವ್ಯದಲ್ಲಿ ಪ್ರಶಿಸುವ
ಮನೋಭಾವವಿದೆ ಎಂದು
ಹೇಳಿದರು.
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ ಜಗದೀಶ್ ಶೆಟ್ಟಿ ಅವರು ವಿ.ಎಂ ಇನಾಂದಾರ್ ವಿಮರ್ಶಾ ಪ್ರಶಸ್ತಿ ಪುರಸ್ಕöÈತರ ಪರಿಚಯ, ಕೃತಿ ವಿಶ್ಲೇಷಣೆ ಗೈದರು. ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ. ವನಿತಾ ಮಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ ಛಲ, ಪರಿಶ್ರಮ ಇದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಕವಿ ಮುದ್ದಣ ಸಾಕ್ಷಿ ಎಂದರು. ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ. ಎಂ. ವಿಶ್ವನಾಥ ಪೈ ಮಾತನಾಡಿ ‘ಮುದ್ದಣನ ಎಲ್ಲಾ ಕೃತಿಗಳ ಡಿಜಿಟಲೀಕರಣವಾಗಬೇಕು’ ಎಂದರು. ಎಂ.ಜಿ.ಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ್ ಎಸ್. ನಾಯ್ಕ್, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಮಾಲತಿ ದೇವಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ತ್ರಿವೇಣಿ ಪ್ರಶಸ್ತಿ ಪತ್ರ ವಾಚಿಸಿದರು. ಕನ್ನಡ ವಿಭಾಗ ಮುಖ್ಯಸ್ಥರಾದ ಡಾ. ಪುತ್ತಿ ವಸಂತ ಕುಮಾರ್ ಪ್ರಸ್ತಾವನೆಗೈದು ಅತಿಥಿಗಳನ್ನು ಸ್ವಾಗತಿಸಿದರು. ಕನ್ನಡ ಉಪನ್ಯಾಸಕಿ ಶ್ರೀಮತಿ ಅಂಬಿಕಾ ನಿರೂಪಿಸಿದರು. ಶ್ರೀಧರ ರಾವ್ ವಂದಿಸಿದರು.
















No comments:
Post a Comment