ನಾಡಿನ ಹಿರಿಯ ಕವಿ ಪತ್ರಕರ್ತ ಕಡೆಂಗೋಡ್ಲು ಶಂಕರಭಟ್ಟರ ನೆನಪಿನಲ್ಲಿ ೧೯೭೮ರಲ್ಲಿ ಸ್ಥಾಪಿತವಾದ ‘ಕಡೆಂಗೋಡ್ಲು ಕಾವ್ಯ ಪ್ರಶಸ್ತಿ’ಗೆ ಈ ವರ್ಷ ಅಪ್ರಕಟಿತ ಕನ್ನಡ ಕವನ ಸಂಕಲಗಳನ್ನು ಆಹ್ವಾನಿಸಲಾಗಿದೆ. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ನೀಡಲಾಗುವ ಈ ಪ್ರಶಸ್ತಿಗೆ ಕವನ ಸಂಕಲನಗಳನ್ನು ಕಳುಹಿಸಲು ಕೊನೆಯ ದಿನಾಂಕ 15.03.2025. ಕಳುಹಿಸಬೇಕಾದ ವಿಳಾಸ: ಆಡಳಿತಾಧಿಕಾರಿ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಎಂ.ಜಿ.ಎಂ. ಕಾಲೇಜು ಆವರಣ, ಉಡುಪಿ ೫೭೬ ೧೦೨.
ಕಾವ್ಯಪ್ರಕಟನೆಗೆ ನೆರವು
ನೀಡಿ ಪ್ರೋತ್ಸಾಹಿಸುವ ಉದ್ದೇಶದಿಂದ ೧೦,೦೦೦/-ರೂಪಾಯಿಗಳ ಒಂದು
ವಾರ್ಷಿಕ ಬಹುಮಾನವನ್ನು ನೀಡಲಾಗುತ್ತದೆ. ಹಸ್ತಪ್ರತಿ ಹಂತದ’ಲ್ಲಿರುವ 40ಕ್ಕೆ ಕಡಿಮೆ ಇಲ್ಲದ, ೫೦ಕ್ಕಿಂತ ಹೆಚ್ಚಿಲ್ಲದ ಕನ್ನಡ ಕವನಗಳ ಅತ್ಯುತ್ತಮ ಸಂಗ್ರಹಕ್ಕೆ ಈ ಬಹುಮಾನವನ್ನು ಕೊಡಲಾಗುವುದು.
ತಜ್ಞರ ಸಮಿತಿ ಬಹುಮಾನಕ್ಕೆ ಅರ್ಹವಾದ ಕೃತಿಯನ್ನು ಆಯ್ಕೆ ಮಾಡಲಿದೆ. ಹೆಚ್ಚಿನ ಮಾಹಿತಿಗಾಗಿ ಬ್ಲಾಗ್ https://govindapairesearch.blogspot.com
ಅಥವಾ ದೂರವಾಣಿ ಸಂಖ್ಯೆ/ ಮೊಬೈಲ್ ನಂ. 9449471449/
9480575783; ಕಛೇರಿ: 0820-2521159
ಸಂಪರ್ಕಿಸಬಹುದು.
- ಕಳೆದ ಐದು ವರ್ಷಗಳಲ್ಲಿ ಬರೆದ ಕನ್ನಡ ಕವನಗಳು, ಬಿಡಿಯಾಗಿ ಪತ್ರಿಕೆಗಳಲ್ಲಿ ಪೂರ್ವ ಪ್ರಕಟಿತವಾದುವು ಇರಬಹುದು, ಹೊಸದಾಗಿ ರಚಿತವಾದುವೂ ಇರಬಹುದು.
- ತಮ್ಮ ಕವನ ಸಂಕಲನದಲ್ಲಿ ಕನಿಷ್ಠ ೪೦ ಕವನಗಳು ಇರಲೇ ಬೇಕು.
- ಕವನ ಸಂಕಲನದ ಹೆಸರನ್ನು ಹೊರಭಾಗದಲ್ಲಿ ಸ್ಪಷ್ಟವಾಗಿ ನಮೂದಿಸಿರಬೇಕು.
- ತಮ್ಮ ಕವನಗಳು ಯಾವುದೇ ಕವನಸಂಕಲನದಲ್ಲಿ ಈ ಮೊದಲು ಪ್ರಕಟಗೊಂಡಿರಬಾರದು.
- ಸ್ಪರ್ಧೆಯಲ್ಲಿ ಭಾಗವಹಿಸುವವರ ಹೆಸರು ಮತ್ತು ವಿಳಾಸಗಳು ಪ್ರತ್ಯೇಕ ಹಾಳೆಯಲ್ಲಿರಬೇಕು ಹೊರತು ಕವನ ಸಂಕಲನದ ಯಾವ ಭಾಗದಲ್ಲೂ ಇರಕೂಡದು (ಇದ್ದಲ್ಲಿ ಕವನ ಸಂಕಲನವನ್ನು ತಿರಸ್ಕರಿಸಲಾಗುವುದು).
- ಕವನ ಸಂಕಲನವನ್ನು ಮರಳಿ ಪಡೆಯಲಿಚ್ಛಿಸುವವರು ಸಾಕಷ್ಟು ಅಂಚೆಚೀಟಿಯನ್ನು ಅಂಟಿಸಿದ ಲಕೋಟೆಯನ್ನು ಕಡ್ಡಾಯವಾಗಿ ಲಗತ್ತಿಸಿರಬೇಕು.
- ಲೇಖಕರು ತಮ್ಮ ಕವನಗಳ ಸಂಗ್ರಹದ ಒಂದು ನಕಲು ಪ್ರತಿಯನ್ನು (ಬೆರಳಚ್ಚು ಮಾಡಿದ) ಮಾರ್ಚ್ 15, 2025ರ ಒಳಗೆ ಸಮಿತಿಯ ವಿಳಾಸಕ್ಕೆ ಕಳುಹಿಸತಕ್ಕದ್ದು. ಮೇ ತಿಂಗಳಲ್ಲಿ ಸಮಿತಿಯು ತನ್ನ ನಿರ್ಣಯವನ್ನು ಕರ್ನಾಟಕದ ಪತ್ರಿಕೆಗಳಲ್ಲಿ ಜಾಹೀರುಗೊಳಿಸುತ್ತದೆ.
- ಬಹುಮಾನಕ್ಕಾಗಿ ಆಯ್ಕೆಯಾದ ಕವನ ಸಂಕಲನವವನ್ನು–ಡೆಮ್ಮಿ ೧/೮, ೧/೧೨ ಅಥವಾ ೧/೮ ಆಕಾರದಲ್ಲಿ ಮುದ್ರಿಸಬೇಕು.
- ಆಯ್ಕೆ ಸಮಿತಿ ತೀರ್ಮಾನ ಪ್ರಕಟವಾದ ಎರಡು ತಿಂಗಳ ಒಳಗಾಗಿ ಮುದ್ರಣ ಮುಗಿದು ೧೨ ಪ್ರತಿಗಳು ಸಮಿತಿಯ ವಶ ಸೇರತಕ್ಕದ್ದು. (ಅದಕ್ಕಿಂತ ವೇಳೆ ಮೀರಿದರೆ ಸಮಿತಿ ಇನ್ನಾರಿಗಾದರೂ ಈ ಬಹುಮಾನ ನೀಡಬಹುದು).
- ಸಂಗ್ರಹದ ಮುದ್ರಣ ಪ್ರಕಟಣೆ ಲೇಖಕರೇ ಮಾಡಬೇಕೆಂದೇನೂ ಇಲ್ಲ. ಆದರೆ ಬೇರೆ ಪ್ರಕಾಶಕರು ಮಾಡಿದರೆ ಬಹುಮಾನದ ಮೊತ್ತ ಲೇಖಕರಿಗೆ ಮಾತ್ರವೇ ಸಲ್ಲುತ್ತದೆ.
- ಸಮಿತಿಯ ತೀರ್ಮಾನವೇ ಅಂತಿಮ ತೀರ್ಮಾನ.
No comments:
Post a Comment