Friday, January 23, 2026
Monday, January 19, 2026
ದಿನಾಂಕ: 17.1.2026ರಂದು ನಡೆದ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಫೊಟೋ ಮತ್ತು ವರದಿ
Sunday, January 11, 2026
Friday, January 9, 2026
ಎಂ.ಎಂ ಹೆಗ್ಡೆ ಪ್ರಶಸ್ತಿಗೆ ಶ್ರೀ ಚಂದ್ರಗೌಡ ಗೋಳಿಕೆರೆ ಆಯ್ಕೆ
ಎಂ. ಎಂ. ಹೆಗ್ಡೆ ಪ್ರತಿಷ್ಠಾನ ಕುಂದಾಪುರ, ಕೊಡಮಾಡುವ ೨೦೨೬ರ ಸಾಲಿನ ಎಂ.ಎಂ. ಹೆಗ್ಡೆ ಪ್ರಶಸ್ತಿಗೆ ಖ್ಯಾತ ಯಕ್ಷಗಾನ ಕಲಾವಿದ ಶ್ರೀ ಚಂದ್ರಗೌಡ ಗೋಳಿಕೆರೆ ಅವರು ಆಯ್ಕೆಯಾಗಿರುತ್ತಾರೆ. ಪ್ರಶಸ್ತಿಯು ರೂ ೧೦,೦೦೦/- ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ಪ್ರಶಸ್ತಿಯನ್ನು ದಿನಾಂಕ: ೨೫.೧.೨೦೨೬ರಂದು ನಡೆಯುವ ಯಕ್ಷಗಾನ ಕೇಂದ್ರ, ಇಂದ್ರಾಳಿ ಇದರ ವಾರ್ಷಿಕೋತ್ಸವದಂದು ನೀಡಿ ಗೌರವಿಸಲಾಗುವುದು ಎಂದು ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪುರ ತಾಲೂಕಿನ ಇಡೂರು ಕುಂಜಾಡಿ ಗೋಳಿಕೆರೆ ಎಂಬಲ್ಲಿ ಮಂಜು ಗೌಡ ಮತ್ತು ತಾರಮ್ಮ ಗೌಡ್ತಿಯವರ ಪುತ್ರನಾಗಿ ಚಂದ್ರಗೌಡರು ಜನಿಸಿದರು. ಬಾಲ್ಯದಲ್ಲಿಯೇ ಯಕ್ಷಗಾನದತ್ತ ಆಕರ್ಷಿತರಾದ ಇವರು ಐದನೇ ತರಗತಿಯಲ್ಲಿರುವಾಗ ವಿದ್ಯಾಭ್ಯಾಸಕ್ಕೆ ತಿಲಾಂಜಲಿ ನೀಡಿ ಕಮಲಶಿಲೆ ಮಹಾಬಲ ದೇವಾಡಿಗರಿಂದ ಯಕ್ಷಗಾನ ಶಿಕ್ಷಣ ಪಡೆದು ಮಾರಣಕಟ್ಟೆ ಮೇಳಕ್ಕೆ ಪಾದಾರ್ಪಣೆ ಮಾಡಿದರುಡ್. ನಂತರ ಹಾಲಾಡಿ ಮೇಳದಲ್ಲಿ ಸೇವೆ ಸಲ್ಲಿಸಿದ ಇವರು ಪ್ರಸ್ತುತ ಮಾರಣಕಟ್ಟೆ ಮೇಳದಲ್ಲಿ ತಮ್ಮ ಕಲಾಸೇವೆ ಮುಂದುವರಿಸಿದ್ದಾರೆ. ಗತ್ತು-ಗಾಂಭೀರ್ಯದ ರಂಗನಡೆ, ಮುಖದಲ್ಲಿ ರಾಜಕಳೆ ಹಾಗೂ ಶ್ರುತಿಬದ್ಧ ಮಾತುಗಾರಿಕೆಯಿಂದ ರಂಗಸ್ಥಳದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಕಂಸ, ಹಿರಣ್ಯಕಶಿಪು, ರಾವಣ, ಕರ್ಣ, ಆಂಜನೇಯ, ಕೌರವ, ಭಸ್ಮಾಸುರ ಮೂಕಾಸುರ, ಆಂಜನೇಯ ಮುಂತಾದ ಪಾತ್ರಗಳಿಂದ ಇವರು ಪ್ರಸಿದ್ಧರಾಗಿದ್ದಾರೆ. ಹಿರಿಯ–ಕಿರಿಯ ಕಲಾವಿದರೊಂದಿಗೆ ೪೫ ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಇವರು “ಯಕ್ಷತೇಜಸ್ವಿ” ಎಂಬ ಬಿರುದು ಸೇರಿದಂತೆ ನಾಡಿನಾದ್ಯಂತ ಅನೇಕ ಸನ್ಮಾನ–ಪುರಸ್ಕಾರಗಳನ್ನು ಪಡೆದಿದ್ದಾರೆ.
Thursday, January 8, 2026
ಮುಳಿಯ ತಿಮ್ಮಪ್ಪಯ ಪ್ರಶಸ್ತಿಗೆ ಮೈಸೂರಿನ ಡಾ. ಗಿರಿಜಾಶಾಸ್ತ್ರಿ ಆಯ್ಕೆ
ಕನ್ನಡ ಸಾರಸ್ವತ ಲೋಕದ ಹಿರಿಯ ವಿದ್ವಾಂಸ ದಿವಂಗತ ಮುಳಿಯ ತಿಮ್ಮಪ್ಪಯ್ಯನವರ ನೆನಪಿನಲ್ಲಿ ನೀಡಲಾಗುವ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿಗೆ ಕನ್ನಡದ ಪ್ರಸಿದ್ಧ ಬರಹಗಾರ್ತಿ ಡಾ. ಗಿರಿಜಾಶಾಸ್ತ್ರಿ ಅವರು ಆಯ್ಕೆಯಾಗಿದ್ದಾರೆ. ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ೨೫೦೦೦/- ನಗದು ಹಾಗೂ ಪ್ರಶಸ್ತಿ ಪತ್ರವನ್ನೊಳಗೊಂಡಿರುತ್ತದೆ, ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಜನವರಿ ೧೭, ೨೦೨೬ರಂದು ನಡೆಯಲಿರುವುದು.
ಡಾ. ಗಿರಿಜಾಶಾಸ್ತ್ರಿ ಅವರು ಮೈಸೂರಿನ ಕೆ. ಆರ್. ನಗರ ತಾಲೂಕಿನ ಸಾಲಿಗ್ರಾಮದವರು. ತಂದೆ ದಿ. ಶ್ರೀಕಂಠಶಾಸ್ತ್ರಿ, ತಾಯಿ ದಿ. ಸೀತಮ್ಮ. ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಸ್ನಾತಕೋತ್ತರ ಪದವೀಧರೆಯಾಗಿದ್ದು, ‘ಕನ್ನಡ ಕಥಾಸಾಹಿತ್ಯ ಒಂದು ಸ್ತ್ರೀವಾದಿ ಅಧ್ಯಯನ ಮಹಾಪ್ರಬಂಧ’ಕ್ಕೆ ಮುಂಬೈ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪಡೆದಿದ್ದಾರೆ. ಗಿರಿಜಾ ಶಾಸ್ತ್ರಿಯವರ ಬರಹಗಳು ಎಲ್ಲಾ ಪ್ರಕಾರಗಳಲ್ಲಿ ಮೂಡಿದ್ದು ವಿಶೇಷವಾಗಿ ಕವಿತೆ, ಪ್ರಬಂಧ, ಅನುವಾದ ಕ್ಷೇತ್ರಗಳಿಗೆ ವಿಸ್ತರಿಸಿಕೊಂಡಿವೆ. ಸಂಶೋಧಕರಾಗಿ ಪ್ರಬಂಧಗಳನ್ನು ಇವರು ಬರೆದಿದ್ದಾರೆ. ಕಥಾಸಾಹಿತ್ಯ ಒಂದು ಸ್ತ್ರೀವಾದಿ ಅಧ್ಯಯನ, ಮಾನಸಿಯ ಲೋಕ, ವೇಶ್ಯಾ ಸಂಕಥನ ಇವರ ಮುಖ್ಯ ಸಂಶೋಧನಾ ಪ್ರಬಂಧಗಳು. ಹೆಣ್ಣೊಬ್ಬಳ ದನಿ, ಪುಸ್ತಕ ಮತ್ತು ನವಿಲುಗರಿ, ಉರಿಯ ಉಯ್ಲು ಮೊದಲಾದವು ಇವರ ಕವನಸಂಕಲನಗಳು ಅಲ್ಲದೆ ಹಲವಾರು ವಿಮರ್ಶಾಲೇಖನಗಳನ್ನು ಬರೆದಿದ್ದಾರೆ. ಸಂಪಾದಕರಾಗಿ, ಅನುವಾದಕರಾಗಿ, ವಿಮರ್ಶಕರಾಗಿ ಹಲವಾರು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿದ ಇವರು ಅಮೇರಿಕಾಯಣ ಸಹಪಯಣ ಎಂಬ ಪ್ರವಾಸ ಕಥನವನ್ನು ಬರೆದಿದ್ದಾರೆ. ಸಮಾಜಮುಖಿ ಸಂಘಟನೆಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಅನೇಕ ಸಂಸ್ಥೆಗಳು ಆಯೋಜಿಸಿದ ರಾಷ್ಟ್ರೀಯ, ಸ್ಥಳೀಯ ವಿಚಾರ ಸಂಕಿರಣಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪ್ರಬಂಧ ಮಂಡನೆ, ಕವಿಗೋಷ್ಠಿಗಳಲ್ಲಿ ಕವಿತಾ ವಾಚನ ಮಾಡಿದ್ದಲ್ಲದೆ, ಅಭಿನಂದನ ಗ್ರಂಥಗಳಲ್ಲಿ ಲೇಖನಗಳನ್ನು ಬರೆದಿದ್ದಾರೆ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಇವರಿಗೆ ಹರಿಹರ ಶ್ರೀ ಪ್ರಶಸ್ತಿ, ಸಂಕ್ರಮಣ ಪ್ರಶಸ್ತಿ, ಸುಶೀಲಶೆಟ್ಟಿ ಪ್ರಶಸ್ತಿ, ಜಿ.ಎಸ್.ಶಿವರುದ್ರಪ್ಪ ಪ್ರಶಸ್ತಿ, ವಿಶಿಷ್ಟ ಲೇಖಕಿ ಪ್ರಶಸ್ತಿ ಸೇರಿದಂತೆ ಹಲವಾರು ಸಂಮಾನ ಗೌರವಗಳು ಸಂದಿವೆ.
Wednesday, December 31, 2025
ಕಡೆಂಗೋಡ್ಲು ಕಾವ್ಯ ಪ್ರಶಸ್ತಿಗೆ ಕವನ ಸಂಕಲನ ಆಹ್ವಾನ : ಕವನ ಸಂಕಲನ ಕಳುಹಿಸಲು ಕೊನೆಯ ದಿನಾಂಕ: 15.03.2026
ನಾಡಿನ ಹಿರಿಯ ಕವಿ ಪತ್ರಕರ್ತ ಕಡೆಂಗೋಡ್ಲು ಶಂಕರಭಟ್ಟರ ನೆನಪಿನಲ್ಲಿ ೧೯೭೮ರಲ್ಲಿ ಸ್ಥಾಪಿತವಾದ ‘ಕಡೆಂಗೋಡ್ಲು ಕಾವ್ಯ ಪ್ರಶಸ್ತಿ’ಗೆ ಈ ವರ್ಷ ಅಪ್ರಕಟಿತ ಕನ್ನಡ ಕವನ ಸಂಕಲಗಳನ್ನು ಆಹ್ವಾನಿಸಲಾಗಿದೆ. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ನೀಡಲಾಗುವ ಈ ಪ್ರಶಸ್ತಿಗೆ ಕವನ ಸಂಕಲನಗಳನ್ನು ಕಳುಹಿಸಲು ಕೊನೆಯ ದಿನಾಂಕ 15.03.2026. ಕಳುಹಿಸಬೇಕಾದ ವಿಳಾಸ: ಆಡಳಿತಾಧಿಕಾರಿ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಎಂ.ಜಿ.ಎಂ. ಕಾಲೇಜು ಆವರಣ, ಉಡುಪಿ 576102.
ಕಾವ್ಯಪ್ರಕಟನೆಗೆ ನೆರವು ನೀಡಿ ಪ್ರೋತ್ಸಾಹಿಸುವ
ಉದ್ದೇಶದಿಂದ ೧೦,೦೦೦/-ರೂಪಾಯಿಗಳ ಒಂದು ವಾರ್ಷಿಕ ಬಹುಮಾನವನ್ನು ನೀಡಲಾಗುತ್ತದೆ. ಹಸ್ತಪ್ರತಿ
ಹಂತದ’ಲ್ಲಿರುವ 40ಕ್ಕೆ ಕಡಿಮೆ ಇಲ್ಲದ, 50ಕ್ಕಿಂತ ಹೆಚ್ಚಿಲ್ಲದ ಕನ್ನಡ ಕವಿತೆಗಳ ಅತ್ಯುತ್ತಮ ಸಂಗ್ರಹಕ್ಕೆ ಈ ಬಹುಮಾನವನ್ನು
ಕೊಡಲಾಗುವುದು. ತಜ್ಞರ ಸಮಿತಿ ಬಹುಮಾನಕ್ಕೆ ಅರ್ಹವಾದ ಕೃತಿಯನ್ನು ಆಯ್ಕೆ ಮಾಡಲಿದೆ. ಹೆಚ್ಚಿನ ಮಾಹಿತಿಗಾಗಿ
ಬ್ಲಾಗ್ https://govindapairesearch.blogspot.com
ಅಥವಾ ದೂರವಾಣಿ ಸಂಖ್ಯೆ/
ಮೊಬೈಲ್ ನಂ. 9448868868/ 9449471449 ಕಛೇರಿ: 0820-2521159 ಸಂಪರ್ಕಿಸಬಹುದು.
ಬಹುಮಾನದ ಉಳಿದ ನಿಯಮಗಳು ಹೀಗಿವೆ:-
|
1 |
ಕಳೆದ ಐದು ವರ್ಷಗಳಲ್ಲಿ ಬರೆದ ಕನ್ನಡ ಕವಿತೆಗಳು, ಬಿಡಿಯಾಗಿ ಪತ್ರಿಕೆಗಳಲ್ಲಿ
ಪೂರ್ವ ಪ್ರಕಟಿತವಾದುವು ಇರಬಹುದು, ಹೊಸದಾಗಿ ರಚಿತವಾದುವೂ ಇರಬಹುದು. |
|
2 |
ತಮ್ಮ ಕವನ ಸಂಕಲನದಲ್ಲಿ ಕನಿಷ್ಠ ೪೦ ಕವನಗಳು
ಇರಲೇ ಬೇಕು. |
|
3 |
ಕವನ ಸಂಕಲನದ ಹೆಸರನ್ನು ಹೊರಭಾಗದಲ್ಲಿ ಸ್ಪಷ್ಟವಾಗಿ
ನಮೂದಿಸಿರಬೇಕು. |
|
4 |
ತಮ್ಮ ಕವನಗಳು ಯಾವುದೇ ಕವನಸಂಕಲನದಲ್ಲಿ ಈ ಮೊದಲು
ಪ್ರಕಟಗೊಂಡಿರಬಾರದು. |
|
5 |
ಸ್ಪರ್ಧೆಯಲ್ಲಿ ಭಾಗವಹಿಸುವವರ ಹೆಸರು ಮತ್ತು
ವಿಳಾಸಗಳು ಪ್ರತ್ಯೇಕ ಹಾಳೆಯಲ್ಲಿರಬೇಕು ಹೊರತು ಕವನಸಂಕಲನದ ಯಾವ ಭಾಗದಲ್ ಇರಕೂಡದು (ಇದ್ದಲ್ಲಿ
ಕವನ ಸಂಕಲನವನ್ನು ತಿರಸ್ಕರಿಸಲಾಗುವುದು). |
|
6 |
ಕವನ ಸಂಕಲನವನ್ನು ಮರಳಿ ಪಡೆಯಲಿಚ್ಛಿಸುವವರು
ಸಾಕಷ್ಟು ಅಂಚೆಚೀಟಿಯನ್ನು ಅಂಟಿಸಿದ ಲಕೋಟೆಯನ್ನು ಕಡ್ಡಾಯವಾಗಿ ಲಗತ್ತಿಸಿರಬೇಕು. |
|
7 |
ಲೇಖಕರು ತಮ್ಮ ಕವನಗಳ ಸಂಗ್ರಹದ ಒಂದು ನಕಲು ಪ್ರತಿಯನ್ನು
(ಬೆರಳಚ್ಚು ಮಾಡಿದ) 2026 ಮಾರ್ಚ್ 15ರ ಒಳಗೆ ಸಮಿತಿಯ ವಿಳಾಸಕ್ಕೆ ಕಳುಹಿಸತಕ್ಕದ್ದು.
ಮೇ ತಿಂಗಳ ಕೊನೆಯಲ್ಲಿ ಸಮಿತಿಯು ತನ್ನ ನಿರ್ಣಯವನ್ನು
ಕರ್ನಾಟಕದ ಪತ್ರಿಕೆಗಳಲ್ಲಿ ಜಾಹೀರುಗೊಳಿಸುತ್ತದೆ. |
|
8 |
ಬಹುಮಾನಕ್ಕಾಗಿ ಆಯ್ಕೆಯಾದ ಕವನ ಸಂಕಲನವವನ್ನು–ಡೆಮ್ಮಿ 1/8 , 1/12 ಅಥವಾ 1/8 ಆಕಾರದಲ್ಲಿ ಮುದ್ರಿಸಬೇಕು. |
|
9 |
ಆಯ್ಕೆ ಸಮಿತಿ ತೀರ್ಮಾನ ಪ್ರಕಟವಾದ ಎರಡು ತಿಂಗಳ
ಒಳಗಾಗಿ ಮುದ್ರಣ ಮುಗಿದು ೧೦ ಪ್ರತಿಗಳು ಸಮಿತಿಯ
ವಶ ಸೇರತಕ್ಕದ್ದು. (ಅದಕ್ಕಿಂತ ವೇಳೆ ಮೀರಿದರೆ ಸಮಿತಿ ಇನ್ನಾರಿಗಾದರೂ
ಈ ಬಹುಮಾನ ನೀಡಬಹುದು). |
|
10 |
ಸಂಗ್ರಹದ ಮುದ್ರಣ ಪ್ರಕಟಣೆ ಲೇಖಕರೇ ಮಾಡಬೇಕೆಂದೇನೂ
ಇಲ್ಲ. ಆದರೆ ಬೇರೆ ಪ್ರಕಾಶಕರು ಮಾಡಿದರೆ ಬಹುಮಾನದ ಮೊತ್ತ ಲೇಖಕರಿಗೆ
ಮಾತ್ರವೇ ಸಲ್ಲುತ್ತದೆ. |
|
11 |
ಸಮಿತಿಯ ತೀರ್ಮಾನವೇ ಅಂತಿಮ ತೀರ್ಮಾನ. |
























