Wednesday, January 1, 2025

ಕಡೆಂಗೋಡ್ಲು ಕಾವ್ಯ ಪ್ರಶಸ್ತಿಗೆ ಕವನ ಸಂಕಲನಗಳ ಆಹ್ವಾನ : ಕೊನೆಯ ದಿನಾಂಕ: 15.03.2025

 

ನಾಡಿನ ಹಿರಿಯ ಕವಿ ಪತ್ರಕರ್ತ ಕಡೆಂಗೋಡ್ಲು ಶಂಕರಭಟ್ಟರ ನೆನಪಿನಲ್ಲಿ ೧೯೭೮ರಲ್ಲಿ ಸ್ಥಾಪಿತವಾದ ಕಡೆಂಗೋಡ್ಲು ಕಾವ್ಯ ಪ್ರಶಸ್ತಿಗೆ ಈ ವರ್ಷ ಅಪ್ರಕಟಿತ ಕನ್ನಡ ಕವನ ಸಂಕಲಗಳನ್ನು ಆಹ್ವಾನಿಸಲಾಗಿದೆ. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ನೀಡಲಾಗುವ ಈ ಪ್ರಶಸ್ತಿಗೆ ಕವನ ಸಂಕಲನಗಳನ್ನು ಕಳುಹಿಸಲು ಕೊನೆಯ ದಿನಾಂಕ 15.03.2025. ಕಳುಹಿಸಬೇಕಾದ ವಿಳಾಸ: ಆಡಳಿತಾಧಿಕಾರಿ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಎಂ.ಜಿ.ಎಂ. ಕಾಲೇಜು ಆವರಣ, ಉಡುಪಿ ೫೭೬ ೧೦೨. 

ಕಾವ್ಯಪ್ರಕಟನೆಗೆ ನೆರವು ನೀಡಿ ಪ್ರೋತ್ಸಾಹಿಸುವ ಉದ್ದೇಶದಿಂದ ೧೦,೦೦೦/-ರೂಪಾಯಿಗಳ ಒಂದು ವಾರ್ಷಿಕ ಬಹುಮಾನವನ್ನು ನೀಡಲಾಗುತ್ತದೆ. ಹಸ್ತಪ್ರತಿ ಹಂತದಲ್ಲಿರುವ 40ಕ್ಕೆ ಕಡಿಮೆ ಇಲ್ಲದ, ೫೦ಕ್ಕಿಂತ ಹೆಚ್ಚಿಲ್ಲದ  ಕನ್ನಡ ಕವನಗಳ ಅತ್ಯುತ್ತಮ ಸಂಗ್ರಹಕ್ಕೆ ಈ ಬಹುಮಾನವನ್ನು ಕೊಡಲಾಗುವುದು. ತಜ್ಞರ ಸಮಿತಿ ಬಹುಮಾನಕ್ಕೆ ಅರ್ಹವಾದ ಕೃತಿಯನ್ನು ಆಯ್ಕೆ ಮಾಡಲಿದೆ. ಹೆಚ್ಚಿನ ಮಾಹಿತಿಗಾಗಿ ಬ್ಲಾಗ್ https://govindapairesearch.blogspot.com  ಅಥವಾ ದೂರವಾಣಿ  ಸಂಖ್ಯೆ/ ಮೊಬೈಲ್ ನಂ. 9449471449/ 9480575783;  ಕಛೇರಿ:  0820-2521159 ಸಂಪರ್ಕಿಸಬಹುದು.

  ಬಹುಮಾನದ ಉಳಿದ ನಿಯಮಗಳು ಹೀಗಿವೆ:-

  1. ಕಳೆದ ಐದು ವರ್ಷಗಳಲ್ಲಿ ಬರೆದ ಕನ್ನಡ ಕವನಗಳು, ಬಿಡಿಯಾಗಿ ಪತ್ರಿಕೆಗಳಲ್ಲಿ ಪೂರ್ವ ಪ್ರಕಟಿತವಾದುವು ಇರಬಹುದು, ಹೊಸದಾಗಿ    ರಚಿತವಾದುವೂ ಇರಬಹುದು.
  2. ತಮ್ಮ ಕವನ ಸಂಕಲನದಲ್ಲಿ ಕನಿಷ್ಠ ೪೦ ಕವನಗಳು ಇರಲೇ ಬೇಕು. 
  3.  ಕವನ ಸಂಕಲನದ ಹೆಸರನ್ನು ಹೊರಭಾಗದಲ್ಲಿ ಸ್ಪಷ್ಟವಾಗಿ ನಮೂದಿಸಿರಬೇಕು.
  4. ತಮ್ಮ ಕವನಗಳು ಯಾವುದೇ ಕವನಸಂಕಲನದಲ್ಲಿ ಈ ಮೊದಲು ಪ್ರಕಟಗೊಂಡಿರಬಾರದು.
  5. ಸ್ಪರ್ಧೆಯಲ್ಲಿ ಭಾಗವಹಿಸುವವರ ಹೆಸರು ಮತ್ತು ವಿಳಾಸಗಳು ಪ್ರತ್ಯೇಕ ಹಾಳೆಯಲ್ಲಿರಬೇಕು ಹೊರತು ಕವನ ಸಂಕಲನದ ಯಾವ ಭಾಗದಲ್ಲೂ ಇರಕೂಡದು (ಇದ್ದಲ್ಲಿ ಕವನ ಸಂಕಲನವನ್ನು ತಿರಸ್ಕರಿಸಲಾಗುವುದು).
  6. ಕವನ ಸಂಕಲನವನ್ನು ಮರಳಿ ಪಡೆಯಲಿಚ್ಛಿಸುವವರು ಸಾಕಷ್ಟು ಅಂಚೆಚೀಟಿಯನ್ನು ಅಂಟಿಸಿದ ಲಕೋಟೆಯನ್ನು  ಕಡ್ಡಾಯವಾಗಿ ಲಗತ್ತಿಸಿರಬೇಕು.
  7. ಲೇಖಕರು ತಮ್ಮ ಕವನಗಳ ಸಂಗ್ರಹದ ಒಂದು ನಕಲು ಪ್ರತಿಯನ್ನು (ಬೆರಳಚ್ಚು ಮಾಡಿದ) ಮಾರ್ಚ್ 15, 2025ಒಳಗೆ ಸಮಿತಿಯ ವಿಳಾಸಕ್ಕೆ ಕಳುಹಿಸತಕ್ಕದ್ದು. ಮೇ ತಿಂಗಳಲ್ಲಿ ಸಮಿತಿಯು ತನ್ನ ನಿರ್ಣಯವನ್ನು ಕರ್ನಾಟಕದ  ಪತ್ರಿಕೆಗಳಲ್ಲಿ ಜಾಹೀರುಗೊಳಿಸುತ್ತದೆ.
  8. ಬಹುಮಾನಕ್ಕಾಗಿ ಆಯ್ಕೆಯಾದ ಕವನ ಸಂಕಲನವವನ್ನುಡೆಮ್ಮಿ ೧/೮, ೧/೧೨ ಅಥವಾ ೧/೮ ಆಕಾರದಲ್ಲಿ ಮುದ್ರಿಸಬೇಕು.
  9. ಆಯ್ಕೆ ಸಮಿತಿ ತೀರ್ಮಾನ ಪ್ರಕಟವಾದ ಎರಡು ತಿಂಗಳ ಒಳಗಾಗಿ ಮುದ್ರಣ ಮುಗಿದು ೧೨ ಪ್ರತಿಗಳು ಸಮಿತಿಯ ವಶ ಸೇರತಕ್ಕದ್ದು. (ಅದಕ್ಕಿಂತ ವೇಳೆ ಮೀರಿದರೆ ಸಮಿತಿ ಇನ್ನಾರಿಗಾದರೂ ಈ ಬಹುಮಾನ ನೀಡಬಹುದು).
  10. ಸಂಗ್ರಹದ ಮುದ್ರಣ ಪ್ರಕಟಣೆ ಲೇಖಕರೇ ಮಾಡಬೇಕೆಂದೇನೂ ಇಲ್ಲ. ಆದರೆ ಬೇರೆ ಪ್ರಕಾಶಕರು ಮಾಡಿದರೆ  ಬಹುಮಾನದ ಮೊತ್ತ ಲೇಖಕರಿಗೆ ಮಾತ್ರವೇ ಸಲ್ಲುತ್ತದೆ.
  11. ಸಮಿತಿಯ ತೀರ್ಮಾನವೇ ಅಂತಿಮ ತೀರ್ಮಾನ.