Friday, April 7, 2017

Muliya Thimmappayya award - 2017

 

 

 

 

 

 

 
ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಏಪ್ರಿಲ್ ೭, ೨೦೧೭ರಂದು ನೂತನ ರವೀಂದ್ರ ಮಂಟಪದಲ್ಲಿ ನಡೆಯಿತು. ಕಾರ್ಯಕ್ರಮದ  ಆರಂಭದಲ್ಲಿ ಮುಳಿಯ ತಿಮ್ಮಪ್ಪಯ್ಯರ ಭಾವಚಿತ್ರಕ್ಕೆ ಗಣ್ಯರಿಂದ ಪುಷ್ಪಾ ನಮನ.  ನಂತರ ಡಾ. ವರದರಾಜ  ಚಂದ್ರಗಿರಿ ಇವರಿಂದ ಮುಳಿಯ ಸಾಹಿತ್ಯ ದರ್ಶನ ಕುರಿತು ವಿಶೇಷ ಉಪನ್ಯಾಸ, ಪ್ರಶಸ್ತಿ ಪುರಸ್ಕೃತರಾದ ಡಾ. ಕೆ. ಎಂ ರಾಘವ ನಂಬಿಯಾರ್ ಕುರಿತು ಪತ್ರಕರ್ತ ಕೆ. ಶಿವಶಂಕರ್ ಇವರಿಂದ  ಅಭಿನಂದನಾ ಭಾಷಣ, ಪ್ರಶಸ್ತಿ ಪ್ರದಾನದ ಅಧ್ಯಕ್ಷತೆಯನ್ನು ವಹಿಸಿದ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವರಿಂದ ಅಧ್ಯಕ್ಷತೆಯ ಮಾತು, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ  ಕೇಂದ್ರದ ಸಂಯೋಜಕರಾದ ಪ್ರೊ. ವರದೇಶ ಹಿರೇಗಂಗೆ ಅತಿಥಿಗಳನ್ನು ಸ್ವಾಗತಿಸಿದರು. ಡಾ . ನರಸಿಂಹ ಮೂರ್ತಿ ಕಾರ್ಯಕ್ರಮ ನಿರ್ವಹಿಸಿದರು.  ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ  ಕೇಂದ್ರದ ಸಹ ಸಂಯೋಜಕರಾದ ಡಾ. ಅಶೋಕ್ ಆಳ್ವ   ವಂದಿಸಿದರು. ಕಾರ್ಯಕ್ರಮದ  ಮುಖ್ಯ ಅತಿಥಿಗಳಾಗಿ ಡಾ. ಹೆಚ್. ಶಾಂತಾರಾಮ್ , ಪ್ರೊ. ಕುಸುಮ ಕಾಮತ್, ಮುಳಿಯ ರಾಘವಯ್ಯ,  ಶ್ರೀಮತಿ ಮನೋರಮಾ ಎಂ. ಭಟ್ ಮುಂತಾದವರು ಉಪಸ್ಥಿತರಿದ್ದರು. 

No comments: