Friday, October 31, 2025
Friday, October 24, 2025
ದಿನಾಂಕ: 18.10.2025ರಂದು ನಡೆದ ಕೇಶವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ
ಪದವಿ, ಸ್ನಾತಕೋತ್ತರ ಪದವಿ ಪಠ್ಯಗಳಿಂದ ಇಂದು ಹಳಗನ್ನಡ ದೂರವಾಗುತ್ತಿದೆ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗಿರೀಶ್ ಭಟ್ ಅಜಕ್ಕಳ ಹೇಳಿದರು. ಅವರು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಆಶ್ರಯದಲ್ಲಿ ಎಂ.ಜಿ.ಎಂ ಕಾಲೇಜಿನ ಆವರಣದಲ್ಲಿರುವ ಆರ್.ಆರ್.ಸಿಯ ಧ್ವನ್ಯಾಲೋಕ ಸಭಾಂಗಣದಲ್ಲಿ ದಿನಾಂಕ: ೧೮.೧೦.೨೦೨೫ ಶನಿವಾರದಂದು ಹಮ್ಮಿಕೊಂಡಿದ್ದ ೨೦೨೫ನೇ ಸಾಲಿನ ಕೇಶವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಇಂದು ಕಾಲೇಜುಗಳಲ್ಲಿ ಹಳಗನ್ನಡ ಪಾಠ ಮಾಡುವವರು ಯಾರು ಎಂಬ ಪ್ರಶ್ನೆಯೂ ಮೂಡುತ್ತಿದೆ. ಈ ಕಾರಣಕ್ಕೆ ಹಳಗನ್ನಡ ಸಾಹಿತ್ಯವನ್ನು ಪಠ್ಯದಿಂದ ಕೈಬಿಡಲಾಗುತ್ತಿದೆ ಎಂದರು. ಕೇಶಿರಾಜನ ಶಬ್ದಮಣಿದರ್ಪಣ ಕೃತಿ ಕೂಡ ಇಂದು ಕನ್ನಡ ಸಾಹಿತ್ಯವನ್ನು ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡಿರುವ ವಿದ್ಯಾರ್ಥಿಗಳ ಪಠ್ಯದಲ್ಲೂ ಕಾಣದಾಗಿದೆ ಎಂದು ಅವರು ಹೇಳಿದರು. ಇಂದಿನ ಮಕ್ಕಳಿಗೆ ಮಹಾಪ್ರಾಣವಿಲ್ಲದ ಕನ್ನಡ ಅಕ್ಷರಮಾಲೆಯನ್ನು ಕಲಿಸಿದರೆ ಅವರು ಹಳಗನ್ನಡ ಸಾಹಿತ್ಯವನ್ನು ಓದುವುದಾದರೂ ಹೇಗೆ? ಕೇವಲ ಅಲ್ಪಪ್ರಾಣ ಅಕ್ಷರ ಮಾಲೆಗಳನ್ನಷ್ಟೆ ಕಲಿಸಿದರೆ ಮುಂದೆ ಕನ್ನಡಕ್ಕೂ, ಸಂಸ್ಕöÈತ ಭಾಷೆಗೆ ಬಂದ ಪರಿಸ್ಥಿತಿ ಬರುವ ಸಾಧ್ಯತೆ ಇದೆ ಎಂದರು.
ಕನ್ನಡದಂತಹ ಸತ್ವ ಇರುವ ಸಾಹಿತ್ಯ ಪರಂಪರೆಯನ್ನು ತಿಳಿಯಬೇಕೆನ್ನುವ ಹಂಬಲ ಅಧ್ಯಯನಾಸಕ್ತರಿಗೆ ಒಂದಲ್ಲ ಒಂದು ಕಾಲದಲ್ಲಿ ಮೂಡಬಹುದು. ಆಗ ಕಾಲ ಮಿಂಚಿ ಹೋಗಿರುತ್ತದೆ. ಭಾಷಾ ಕೌಶಲ ಸಿಗಬೇಕಾದರೆ ಸಾಹಿತ್ಯ ಅಧ್ಯಯನ ಅಗತ್ಯವಿದೆ. ಭಾಷಾ ತರಗತಿಗಳ ಉದ್ದೇಶ ಏನು ಎಂಬುದನ್ನು ನಾವು ಅರ್ಥೆÊಸಿಕೊಂಡಿಲ್ಲ. ಇಂತಹ ತರಗತಿಗಳಲ್ಲಿ ಸಾಹಿತ್ಯದ ಮೂಲಕ ಭಾಷೆಯನ್ನು ಕಲಿಸುವ ಪ್ರಯತ್ನ ಮಾಡಬೇಕು. ಭಾಷಾ ತರಗತಿಗಳನ್ನು ನಿರ್ವಹಿಸುವಲ್ಲಿನ ಸಮಸ್ಯೆಯಿಂದಾಗಿ ಇಂದು ನಮ್ಮಲ್ಲಿ ವಿದ್ಯಾರ್ಥಿಗಳು ಮಾನವಿಕ ವಿಷಯಗಳ ಆಸಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಹಳಗನ್ನಡ ಸಾಹಿತ್ಯ ಇಂಗ್ಲಿಷ್ ಭಾಷೆಗೆ ಇನ್ನಷ್ಟು ಅನುವಾದಗೊಳ್ಳಬೇಕು ಎಂದರು.
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಕೇಶವ ಪ್ರಶಸ್ತಿ ಪ್ರಾಯೋಜಕರಲ್ಲೋರ್ವರಾದ ತಾಳ್ತಜೆ ವಸಂತ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಾಹಿತಿ, ಯಕ್ಷಗಾನ ಅರ್ಥದಾರಿ ಡಾ. ರಮಾನಂದ ಬನಾರಿ ಅವರಿಗೆ ಕೇಶವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಾಹೆ ಕುಲಸಚಿವ ಡಾ ಪಿ ಗಿರಿಧರ ಕಿಣಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವನಿತಾ ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಆರ್.ಆರ್.ಸಿ ಸಹ ಸಂಶೋಧಕ ಡಾ. ಅರುಣ್ ಕುಮಾರ್ ಎಸ್. ಆರ್. ಪ್ರಶಸ್ತಿ ಪುರಸ್ಕöÈತರ ಕುರಿತು ಅಭಿನಂದನಾ ಭಾಷಣ ಮಾಡಿದರು. ಎಂ.ಜಿ.ಎಂ ಕಾಲೇಜಿನ ವಿದ್ಯಾರ್ಥಿನಿ ಕು. ಅನನ್ಯಾ ಎಸ್. ಶಿವತ್ತಾಯ ಪ್ರಾರ್ಥಿಸಿದರು. ಎಂ.ಜಿ.ಎಂ ಕಾಲೇಜಿನ ಕನ್ನಡ ಉಪನ್ಯಾಸಕ ಶ್ರೀ ರಾಘವೇಂದ್ರ ತುಂಗ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಲ್ಲಿಸಿದರು.
Tuesday, October 14, 2025
Friday, October 10, 2025
ಕೋಟ ಶಿವರಾಮ ಕಾರಂತರ ೧೨೩ನೇ ಜನ್ಮದಿನಾಚರಣೆ ಕಾರ್ಯಕ್ರಮ, ನೂತನ ರವೀಂದ್ರಮಂಟಪ (ದಿನಾಂಕ:10.10.2025)


Tuesday, October 7, 2025
Sunday, October 5, 2025
2025 ನೇ ಸಾಲಿನ ಕೇಶವ ಪ್ರಶಸ್ತಿ ಹಿರಿಯ ಸಾಹಿತಿ ರಮಾನಂದ ಬನಾರಿ ಅವರಿಗೆ
ಹಿರಿಯ ಸಾಹಿತಿ ಡಾ. ರಮಾನಂದ ಬನಾರಿ ಅವರನ್ನು ೨೦೨೫ನೇ ಸಾಲಿನ ಕೇಶವ ಪ್ರಶಸ್ತಿಗೆ ಆಯ್ಕೆ ಮಾಡಿರುವುದಾಗಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಈ ಪ್ರಶಸ್ತಿಯನ್ನು ೧೮.೧೦.೨೦೨೫ರಂದು ನೂತನ ರವೀಂದ್ರ ಮಂಟಪದಲ್ಲಿ ಪ್ರದಾನ ಮಾಡಲಾಗುವುದು.
ಡಾ. ರಮಾನಂದ ಬನಾರಿ ಅವರು ಖ್ಯಾತ ಪ್ರಸಂಗಕರ್ತ ಕೀರಿಕ್ಕಾಡು ವಿಷ್ಣು ಭಟ್ಟ ಹಾಗೂ ಜಾನಪದ ಹಾಡುಗಾರ್ತಿ ಪರಮೇಶ್ವರಿ ಅಮ್ಮನವರ ಪುತ್ರನಾಗಿ ೧೯೪೦ ಜೂನ್ ೪ರಂದು ಕಾಸರಗೋಡಿನ ಕೀರಿಕ್ಕಾಡಿನಲ್ಲಿ ಜನಿಸಿದರು. ಬನಾರಿ ಅವರು ವೃತ್ತಿಯಿಂದ ವೈದ್ಯರಾಗಿದ್ದು, ಪ್ರವೃತ್ತಿಯಿಂದ ಬರಹಗಾರರು ಮತ್ತು ತಾಳಮದ್ದಳೆ ಅರ್ಥಧಾರಿಗಳು. ಕಲ್ಲಿಕೋಟೆ ವೈದ್ಯಕೀಯ ಮಹಾವಿದ್ಯಾಲಯದಿಂದ ಎಂ.ಬಿ.ಬಿ.ಎಸ್. ಪದವೀಧರರು. ವೃತ್ತಿಯೊಂದಿಗೆ ಸುಮಾರು ೨೦ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ. ೧೦ಕ್ಕೂ ಹೆಚ್ಚು ಸಂಪಾದಿತ ಕೃತಿಗಳು ಪ್ರಕಟವಾಗಿವೆ. ಅವುಗಳಲ್ಲಿ ಎಳೆಯರ ಗೆಳೆಯ (ಮಕ್ಕಳ ಕವನ ಸಂಕಲನ), ಕೊಳಲು, ನಮ್ಮಿಬ್ಬರ ನಡುವೆ, ನೆನಪುಗಳ ನೆರಳಿನಲ್ಲಿ, ಆರೋಗ್ಯಗೀತೆ (ವೈದ್ಯಕೀಯ ಕವನ ಸಂಕಲನ,), ಗುಟುಕುಗಳು (ಹನಿಗವನ ಸಂಕಲನ) ಮಧುಸಿಂಚನ, ಆರವೆ (ಪ್ರಬಂಧ ಸಂಕಲನ) ಕೀರಿಕ್ಕಾಡು ಸ್ಮಾರಕ ಯಕ್ಷಗಾನ, ಪರಾಗಸ್ಪರ್ಶ - ಬನಾರಿ ಸಮಗ್ರ ಕವಿತೆಗಳು ಇವರ ಪ್ರಮುಖ ಪ್ರಕಟಿತ ಕೃತಿಗಳು. ಸಾಧನಾ (ರಾಷ್ಟ್ರಕವಿ ಗೋವಿಂದ ಪೈ ಸ್ಮರಣ ಸಂಚಿಕೆ), ಐ.ಎಂ.ಎ ಸ್ಮರಣ ಸಂಚಿಕೆ, ಶಿವಶಕ್ತಿ, ಆರತಿ ಪರಮೇಶ್ವರಿ ಅಮ್ಮ ಅವರು ಸಂಗ್ರಹಿಸಿದ ಜಾನಪದ ಹಾಡುಗಳು ಇತ್ಯಾದಿ ಸಂಪಾದಿತ ಕೃತಿಗಳು.
ಸಾಹಿತ್ಯ, ಯಕ್ಷಗಾನ, ಕಾಸರಗೋಡು ಕನ್ನಡಪರ ಹೋರಾಟ, ಭಾಷಣ, ಸಮಾಜಸೇವೆ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಲ್ಲದೆ ಹಲವಾರು ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ, ಸ್ಥಾಪಕಾಧ್ಯಕ್ಷರಾಗಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಸಂಘಟಕರಾಗಿ ಕಾರ್ಯನಿರ್ವಹಿಸಿರುವ ಇವರು ಗುಲಬರ್ಗಾ ಡಾ. ಎಸ್.ಪಿ. ಶಂಕರ್ ಪ್ರತಿಷ್ಠಾನದ ಶ್ರೇಷ್ಠ ವೈದ್ಯಕೀಯ ಸಾಹಿತ್ಯ ಪ್ರಶಸ್ತಿ, ಗೋವಿಂದ ಪೈ ಕಲಾ ಅಕಾಡೆಮಿ ಪ್ರಶಸ್ತಿ, ಶ್ರೇಷ್ಠ ಕುಟುಂಬ ವೈದ್ಯ ಪ್ರಶಸ್ತಿ, ಸುವರ್ಣ ಕರ್ನಾಟಕ ಕಾವ್ಯ ಪ್ರಶಸ್ತಿ, ಶೇಣಿ ಪ್ರಶಸ್ತಿ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಗೌರವ ಸಂಮಾನಗಳಿಗೆ ಭಾಜನರಾಗಿದ್ದಾರೆ.
Friday, October 3, 2025
ಯಕ್ಷಗಾನ ಸರ್ಟಿಫಿಕೇಟ್ ಕೋರ್ಸ್ ಉದ್ಘಾಟನಾ ಸಮಾರಂಭ (28.09.2025)
£ÀªÀÄä
²æÃªÀÄAvÀªÁzÀ PÀ¯É ªÀÄvÀÄÛ ¸ÀA¸ÀÌöÈw ªÀÄÄA¢£À ¦Ã½UÉUÉ ºÀ¸ÁÛAvÀgÀªÁUÀ¨ÉÃPÁzÀgÉ AiÀÄĪÀ d£ÀvÉ CzÀgÀ°è ¥ÀÇtðªÁV
vÉÆqÀV¹PÉÆ¼Àî¨ÉÃPÀÄ. F ¤nÖ£À°è ¥ÁgÀA¥ÀjPÀ AiÀÄPÀëUÁ£À PÀ¯ÉAiÀİè AiÀÄĪÀ
d£ÀvÉAiÀÄ ¨sÁUÀªÀ»¸ÀÄ«PÉ ºÉZÁÑUÀ¨ÉÃPÀÄ JAzÀÄ ªÀiÁºÉ ¸ÀºÀ PÀįÁ¢ü¥Àw qÁ. JZï.
J¸ï. §¯Áè¼ï ºÉýzÀgÀÄ. CªÀgÀÄ
AiÀÄPÀëUÁ£À PÉÃAzÀæ, EAzÁæ½, ªÀÄtÂ¥Á® CPÁqÉ«Ä D¥sï ºÉÊAiÀÄgï JdÄåPÉñÀ£ï
¸ÀºÀAiÉÆÃUÀzÀ°è ¢£ÁAPÀ:28.09.2025 gÀ«ªÁgÀzÀAzÀÄ ªÀÄtÂ¥Á®zÀ «Ä±Á ¯ÉÃPï
PÁåA¥À¸ï£À ¸À¨sÁAUÀtzÀ°è ºÀ«ÄäPÉÆArgÀĪÀ AiÀÄPÀëUÁ£À ¸Ànð¦üPÉÃmï PÉÆÃ¸ïð£ÀÄß
GzÁÏn¹ ªÀiÁvÀ£ÁqÀÄwÛzÀÝgÀÄ.
AiÀÄĪÀ
d£ÀgÀ°è PÀ¯É ªÀÄvÀÄÛ ¸ÀA¸ÀÌöÈw §UÉÎ C©ügÀÄa ªÀÄÆqÀ¨ÉÃPÁzÀgÉ CzÀgÀ°è CªÀgÀÄ
vÀªÀÄä£ÀÄß vÉÆqÀV¹PÉÆ¼Àî¨ÉÃPÀÄ. »ÃUÁV PÀ¯ÉAiÀÄ£ÀÄß G½¹¨É¼É¸ÀĪÀ°è ªÀÄ»¼ÉAiÀÄgÀÆ
¸ÉÃjzÀAvÉ AiÀÄĪÀ d£ÀgÀ ¥ÁvÀæ »j¢zÉ. CzÀPÁÌV CªÀjUÉ CªÀPÁ±ÀªÀ£ÀÄß ªÀiÁºÉAiÀÄ
AiÀÄPÀëUÁ£À PÉÃAzÀæ MzÀV¸ÀÄvÀÛzÉ. AiÀÄPÀëUÁ£À ¸Ànð¦üPÉÃmï PÉÆÃ¸ïð AiÀÄĪÀ
d£ÀvÉUÉ ¸ÁPÀµÀÄÖ C£ÀÄPÀÆ®ªÁUÀ°zÉ JAzÀgÀÄ.
ªÀiÁºÉ
«« ¸ÀºÀ PÀÄ®¥Àw qÁ. £ÁgÁAiÀÄt ¸À¨sÁ»vï ºÁUÀÆ PÀÄ®¸ÀaªÀ qÁ. ¦ VjzsÀgÀ QtÂ
ªÀiÁvÀ£Ár AiÀÄPÀëUÁ£À PÉÆÃ¸ïð ªÀĺÀvÀé ºÁUÀÆ PÉÆÃ¸ïð vÉUÉzÀÄPÉÆ¼ÀÄîªÀÅzÀjAzÀ
£ÀªÀÄä zÉÊ»PÀ PÀëªÀÄvÉAiÀÄÆ ºÉZÀÄÑvÀÛzÉ JAzÀgÀÄ.
AiÀÄPÀëUÁ£À CPÁqÉ«Ä ªÀiÁf CzsÀåPÀë qÁ. JA. J¯ï ¸ÁªÀÄUÀ CªÀgÀÄ PÉÆÃ¸ïð §UÉÎ ªÀiÁ»w ¤ÃrzÀgÀÄ. PÉÃAzÀæzÀ ¸À®ºÁ ¸À«Äw CzsÀåPÀë ¦. Q±À£ï ºÉUÉØ CzsÀåPÀëvÉ ªÀ»¹ ªÀiÁvÀ£Ár, AiÀÄPÀëUÁ£ÀªÀ£ÀÄß CPÀëAiÀÄ ªÀiÁqÀĪÀ PÁAiÀÄð J®èjAzÀ®Æ DUÀ° JAzÀgÀÄ. PÉÃAzÀæzÀ UÀÄgÀÄUÀļÁzÀ GªÉÄÃ±ï ¸ÀĪÀtð UÉÆÃ¥Ár, PÀȵÀÚªÀÄÆwð ¨sÀmï, §¸ÀªÀ ªÀÄÄAqÁr G¥À¹ÜvÀjzÀÝgÀÄ. PÉÃAzÀæzÀ DqÀ½vÁ¢üPÁj qÁ dUÀ¢Ã±ï ±ÉnÖ ¸ÁéUÀw¹, ªÀÄAdÄ£ÁxÀ ªÀÄAiÀÄå ¤gÀƦ¹, ¥ÁæzsÁå¥ÀPÀ qÁ. ¥Àæ«Ãuï ±ÉnÖ ªÀA¢¹zÀgÀÄ.






























