Sunday, December 31, 2023

2024ರ ಸಾಲಿನ ಕಡೆಂಗೋಡ್ಲು ಕಾವ್ಯಪ್ರಶಸ್ತಿಗೆ ಕವನ ಸಂಕಲನಗಳ ಆಹ್ವಾನ


ನಾಡಿನ ಹಿರಿಯ ಕವಿ ಪತ್ರಕರ್ತ ಕಡೆಂಗೋಡ್ಲು ಶಂಕರಭಟ್ಟರ ನೆನಪಿನಲ್ಲಿ ೧೯೭೮ರಲ್ಲಿ ಸ್ಥಾಪಿತವಾದ ಕಡೆಂಗೋಡ್ಲು ಕಾವ್ಯ ಪ್ರಶಸ್ತಿಗೆ ಈ ವರ್ಷ ಅಪ್ರಕಟಿತ ಕನ್ನಡ ಕವನ ಸಂಕಲಗಳನ್ನು ಆಹ್ವಾನಿಸಲಾಗಿದೆ. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ನೀಡಲಾಗುವ ಈ ಪ್ರಶಸ್ತಿಗೆ ಕವನ ಸಂಕಲನಗಳನ್ನು ಕಳುಹಿಸಲು ಕೊನೆಯ ದಿನಾಂಕ 15.03.2024. ಕಳುಹಿಸಬೇಕಾದ ವಿಳಾಸ: ಆಡಳಿತಾಧಿಕಾರಿ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಎಂ.ಜಿ.ಎಂ. ಕಾಲೇಜು ಆವರಣ, ಉಡುಪಿ  576102.

 ಕಾವ್ಯಪ್ರಕಟನೆಗೆ ನೆರವು ನೀಡಿ ಪ್ರೋತ್ಸಾಹಿಸುವ ಉದ್ದೇಶದಿಂದ ೧೦,೦೦೦/-ರೂಪಾಯಿಗಳ ಒಂದು ವಾರ್ಷಿಕ ಬಹುಮಾನವನ್ನು ನೀಡಲಾಗುತ್ತದೆ. ಹಸ್ತಪ್ರತಿ ಹಂತದಲ್ಲಿರುವ 40ಕ್ಕೆ ಕಡಿಮೆ ಇಲ್ಲದ, ೫೦ಕ್ಕಿಂತ ಹೆಚ್ಚಿಲ್ಲದ  ಕನ್ನಡ ಕವಿತೆಗಳ ಅತ್ಯುತ್ತಮ ಸಂಗ್ರಹಕ್ಕೆ ಈ ಬಹುಮಾನವನ್ನು ಕೊಡಲಾಗುವುದು. ತಜ್ಞರ ಸಮಿತಿ ಬಹುಮಾನಕ್ಕೆ ಅರ್ಹವಾದ ಕೃತಿಯನ್ನು ಆಯ್ಕೆ ಮಾಡಲಿದೆ. ಹೆಚ್ಚಿನ ಮಾಹಿತಿಗಾಗಿ ಬ್ಲಾಗ್ https://govindapairesearch.blogspot.com  ಅಥವಾ ದೂರವಾಣಿ  ಸಂಖ್ಯೆ/ ಮೊಬೈಲ್ ನಂ. 9448868868/ 9480575783;  ಕಛೇರಿ:  0820-2521159 ಸಂಪರ್ಕಿಸಬಹುದು.

  ಬಹುಮಾನದ ಉಳಿದ ನಿಯಮಗಳು ಹೀಗಿವೆ:-

1

ಕಳೆದ ಐದು ವರ್ಷಗಳಲ್ಲಿ ಬರೆದ ಕನ್ನಡ ಕವಿತೆಗಳು, ಬಿಡಿಯಾಗಿ ಪತ್ರಿಕೆಗಳಲ್ಲಿ ಪೂರ್ವ ಪ್ರಕಟಿತವಾದುವು  ಇರಬಹುದು, ಹೊಸದಾಗಿ ರಚಿತವಾದುವೂ ಇರಬಹುದು.

2

ತಮ್ಮ ಕವನ ಸಂಕಲನದಲ್ಲಿ ಕನಿಷ್ಠ ೪೦ ಕವನಗಳು ಇರಲೇ ಬೇಕು. 

3

ಕವನ ಸಂಕಲನದ ಹೆಸರನ್ನು ಹೊರಭಾಗದಲ್ಲಿ ಸ್ಪಷ್ಟವಾಗಿ ನಮೂದಿಸಿರಬೇಕು.

4

ತಮ್ಮ ಕವನಗಳು ಯಾವುದೇ ಕವನಸಂಕಲನದಲ್ಲಿ ಈ ಮೊದಲು ಪ್ರಕಟಗೊಂಡಿರಬಾರದು.

5

ಸ್ಪರ್ಧೆಯಲ್ಲಿ ಭಾಗವಹಿಸುವವರ ಹೆಸರು ಮತ್ತು ವಿಳಾಸಗಳು ಪ್ರತ್ಯೇಕ ಹಾಳೆಯಲ್ಲಿರಬೇಕು ಹೊರತು ಕವನಸಂಕಲನದ ಯಾವ ಭಾಗದಲ್  ಇರಕೂಡದು (ಇದ್ದಲ್ಲಿ ಕವನ ಸಂಕಲನವನ್ನು ತಿರಸ್ಕರಿಸಲಾಗುವುದು).

6

ಕವನ ಸಂಕಲನವನ್ನು ಮರಳಿ ಪಡೆಯಲಿಚ್ಛಿಸುವವರು ಸಾಕಷ್ಟು ಅಂಚೆಚೀಟಿಯನ್ನು ಅಂಟಿಸಿದ ಲಕೋಟೆಯನ್ನು ಕಡ್ಡಾಯವಾಗಿ ಲಗತ್ತಿಸಿರಬೇಕು.

7

ಲೇಖಕರು ತಮ್ಮ ಕವನಗಳ ಸಂಗ್ರಹದ ಒಂದು ನಕಲು ಪ್ರತಿಯನ್ನು (ಬೆರಳಚ್ಚು ಮಾಡಿದ) 2024 ಮಾರ್ಚ್  15  ಒಳಗೆ ಸಮಿತಿಯ ವಿಳಾಸಕ್ಕೆ  ಕಳುಹಿಸತಕ್ಕದ್ದು. ಮೇ ತಿಂಗಳಲ್ಲಿ ಸಮಿತಿಯು ತನ್ನ ನಿರ್ಣಯವನ್ನು ಕರ್ನಾಟಕದ  ಪತ್ರಿಕೆಗಳಲ್ಲಿ ಜಾಹೀರುಗೊಳಿಸುತ್ತದೆ.

8

ಬಹುಮಾನಕ್ಕಾಗಿ ಆಯ್ಕೆಯಾದ ಕವನ ಸಂಕಲನವವನ್ನುಡೆಮ್ಮಿ   1/8 , 1/12  ಅಥವಾ 1/8 ಆಕಾರದಲ್ಲಿ  ಮುದ್ರಿಸಬೇಕು.

9

ಆಯ್ಕೆ ಸಮಿತಿ ತೀರ್ಮಾನ ಪ್ರಕಟವಾದ ಎರಡು ತಿಂಗಳ ಒಳಗಾಗಿ ಮುದ್ರಣ ಮುಗಿದು ೧೨ ಪ್ರತಿಗಳು ಸಮಿತಿಯ ವಶ   ಸೇರತಕ್ಕದ್ದು. (ಅದಕ್ಕಿಂತ ವೇಳೆ   ಮೀರಿದರೆ ಸಮಿತಿ ಇನ್ನಾರಿಗಾದರೂ ಈ ಬಹುಮಾನ ನೀಡಬಹುದು).

10

ಸಂಗ್ರಹದ ಮುದ್ರಣ ಪ್ರಕಟಣೆ ಲೇಖಕರೇ ಮಾಡಬೇಕೆಂದೇನೂ ಇಲ್ಲ. ಆದರೆ ಬೇರೆ ಪ್ರಕಾಶಕರು ಮಾಡಿದರೆ   ಬಹುಮಾನದ ಮೊತ್ತ ಲೇಖಕರಿಗೆ ಮಾತ್ರವೇ   ಸಲ್ಲುತ್ತದೆ.

11

ಸಮಿತಿಯ ತೀರ್ಮಾನವೇ ಅಂತಿಮ ತೀರ್ಮಾನ.

                                                                                                            ಆಡಳಿತಾಧಿಕಾರಿ

No comments: