ಇಸ್ರೇಲ್ ತಂಡ ಉಡುಪಿ ಯಕ್ಷಗಾನ ಕೇಂದ್ರಕ್ಕೆ
ಇಸ್ರೇಲ್ ದೇಶದ ಟೆಲ್ ಅವೀವ್ (Tel Aviv University ) ವಿಶ್ವವಿದ್ಯಾಲಯದ ಪ್ರೊ. ರಫೀ ಪೆಲೆಡ್ ನೇತೃತ್ವದ ೧೮ ಜನರ ಇಸ್ರೇಲ್ ನಾಗರಿಕರ ತಂಡ ಇತ್ತೀಚೆಗೆ ಉಡುಪಿ ಯಕ್ಷಗಾನ ಕೇಂದ್ರಕ್ಕೆ ಭೇಟಿ ಕೊಟ್ಟು ಯಕ್ಷಗಾನ ಮತ್ತು ಯೋಗದ ಕುರಿತು ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆಗಳಲ್ಲಿ ಪಾಲ್ಗೊಂಡರು.
ಇಸ್ರೇಲಿನ ಬೇರೆ ಬೇರೆ ಭಾಗಗಳಿಂದ ಬಂದ ಈ ಜನರು ಭಾರತೀಯ ಅಧ್ಯಯನದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದವರಾಗಿದ್ದಾರೆ. ಈ ತಂಡದ ನೇತೃತ್ವ ವಹಿಸಿದ ಪ್ರೊ.ಫೀ ಪೆಲೆಡ್ ಅವರು ಅಲ್ಲಿಯ ವಿಶ್ವವಿದ್ಯಾಲಯದ ದಕ್ಷಿಣ ಏಷ್ಯಾ ಅಧ್ಯಯನ ಕೇಂದ್ರದಲ್ಲಿ ಸಂಸ್ಕೃತ ಭಾಷೆಯ ಪ್ರಾಧ್ಯಾಪಕರಾಗಿದ್ದಾರೆ. ನಿರರ್ಗಳವಾಗಿ ಸಂಸ್ಕೃತ ಮಾತನಾಡುವ ಇವರು ಯಕ್ಷಗಾನ ಮತ್ತು ಯೋಗದ ಕುರಿತು ವಿಶೇಷ ಒಲವು ತೋರಿಸಿದ್ದಾರೆ. ಕೇಂದ್ರದ ಸಂಯೋಜಕರಾದ ಪ್ರೊ. ವರದೇಶ ಹಿರೇಗಂಗೆ, ಪ್ರಾಂಶುಪಾಲ ಬನ್ನಂಜೆ ಸಂಜೀವ ಸುವರ್ಣ, ಕಲಾವಿದರಾದ ಕೃಷ್ಣಮೂರ್ತಿ ಭಟ್,ದಿನೇಶ್ ಭಟ್, ರತ್ನಾಕರ ಶೆಣೈ, ಶೈಲೇಶ್ , ನಿತೀಶ್, ಸುಮಂತ್ ಮುಂತಾದವರು ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆಗಳನ್ನು ನಡೆಸಿಕೊಟ್ಟರು.
No comments:
Post a Comment